ತೋಳ ಬಂತು ತೋಳ ಆಯ್ತಾ ರಾಖಿ ಕಥೆ? ಇಂದು ಆಪರೇಷನ್- ನಟಿ ಕಣ್ಣೀರಿಟ್ರೂ ನೆಟ್ಟಿಗರು ಹೀಗೆಲ್ಲಾ ಹೇಳೋದಾ?

By Suchethana D  |  First Published May 18, 2024, 12:22 PM IST

ಇಂದು ನಟಿ ರಾಖಿ ಸಾವಂತ್​ ಅವರಿಗೆ ಗರ್ಭಕೋಶದ ಗಡ್ಡೆಯ ಆಪರೇಷನ್​ ಇದೆ. ಆಪರೇಷನ್​ ಥಿಯೇಟರ್​ಗೂ ಹೋಗುವ ನಟಿ ವಿಡಿಯೋ ಮಾಡಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ? 
 


ಗರ್ಭಕೋಶದಲ್ಲಿ 10 ಸೆಂಟಿ ಮೀಟರ್​ ಗಡ್ಡೆ ಹೊಂದಿರುವ ಬಾಲಿವುಡ್​​ ನಟಿ ರಾಖಿ ಸಾವಂತ್​ ಅವರಿಗೆ ಇಂದು (ಮೇ 18) ಮೇಜರ್​ ಆಪರೇಷನ್​  ಆಗುತ್ತಿದೆ. ಆಪರೇಷನ್​ ಥಿಯೇಟರ್​ಗೆ ಅವರನ್ನು ಸಾಗಿಸುವ ಮೊದಲು ವಿಡಿಯೋ ಸಂದೇಶದ ಮೂಲಕ ತಮಗಾಗಿ ಪ್ರಾರ್ಥಿಸುವಂತೆ ನಟಿ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ. 'ಖುಷಿಯಾಗಿ ಹೋಗುತ್ತಿದ್ದೇನೆ, ಖುಷಿಯಾಗಿಯೇ ವಾಪಸ್​ ಬರುತ್ತೇನೆ. ಜೀವನದಲ್ಲಿ ಹಲವಾರು ದುಃಖಗಳ ಜೊತೆ ಹೋರಾಟ  ಮಾಡಿದ್ದೇನೆ. ಗೆಳೆಯರೇ ನನಗಾಗಿ ಪ್ರಾರ್ಥಿಸಿ ಎನ್ನುತ್ತಲೇ ಮೇಲೆ ನೋಡುತ್ತಾ ಅಮ್ಮಾ ಎಲ್ಲಿದ್ದಿ' ಎಂದು ಪ್ರಶ್ನಿಸಿದ್ದಾರೆ. ನಿನ್ನೆಯಷ್ಟೇ ಅವರು ವಾಯ್ಸ್​ ಮೆಸೇಜ್​  ಮೂಲಕ ತಮ್ಮ ಆರೋಗ್ಯದ ಅಪ್​ಡೇಟ್​ ನೀಡಿದ್ದರು. 10 ಸೆಂ.ಮೀ ಗಡ್ಡೆ ಹೊರಕ್ಕೆ ಬಂದೇ ಬರುತ್ತದೆ. ಅದರಲ್ಲಿ ನಾನು ಗೆಲುವು ಸಾಧಿಸಿಯೇ ತೀರುತ್ತೇನೆ ಎಂದಿದ್ದಾರೆ. ಚಿಕ್ಕಂದಿನಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಜಯಶೀಲಳಾಗಿ ಬಂದವಳು ನಾನು. ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ನನ್ನಲ್ಲಿ ಇದೆ. ಇಲ್ಲಿಯ ವೈದ್ಯರು ನನ್ನ ನೆರವಿಗೆ ಇದ್ದಾರೆ. ನಾನು ಗೆದ್ದೇ ಗೆಲ್ಲುತ್ತೇನೆ. ನನ್ನ ದಿವಂಗತ ತಾಯಿ ನನ್ನ ಜೊತೆ ಇದ್ದಾರೆ ಎಂದು ರಾಖಿ ಬಿಕ್ಕಿ ಬಿಕ್ಕಿ ಅತ್ತಿದ್ದರು. 

ಇಂದು ರಾಖಿ ಅವರು ಸಂಪೂರ್ಣವಾಗಿ ಹುಷಾರಾಗಿ ಬರಲಿ, ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುವುದು ಒಂದೆಡೆಯಾದರೆ, ಇಂಥ ಸಂದರ್ಭದಲ್ಲಿಯೂ ಹಲವರು ನಟಿಯ ಕಾಲೆಳೆಯುತ್ತಿದ್ದಾರೆ. ಈಕೆ ದಾಖಲಾಗಿರುವ ನಕ್ಷತ್ರ ಆಸ್ಪತ್ರೆಯ ವೈದ್ಯರು ನಟಿಯ ಆಪರೇಷನ್​ ಕುರಿತು ಹೇಳಿದ್ದರೂ ಇದನ್ನು ಬಹುತೇಕರು ಒಪ್ಪುತ್ತಿಲ್ಲ. ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ ನಟಿ ರಾಖಿ ಸಾವಂತ್​ ಡ್ರಾಮಾ ಕ್ವೀನ್​ ಎಂದೇ ಫೇಮಸ್​ ಆದವರು. ಮೊನ್ನೆ ಮೊನ್ನೆಯವರೆಗೂ ಒಂದೊಂದು ರೀತಿಯ ವೇಷ ಮಾಡಿಕೊಂಡು ಡ್ರಾಮಾ ಮಾಡುತ್ತಲೇ ಇದ್ದರು. ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ಮತಾಂತರಗೊಂಡಿರುವುದಾಗಿ ಬುರ್ಖಾ ಹಾಕಿಕೊಂಡು, ಮೆಕ್ಕಾಕ್ಕೂ ಹೋಗಿ ಬಂದಿದ್ದ ರಾಖಿಯ ಡ್ರಾಮಾ ಇನ್ನೊಂದು ರೂಪ ಪಡೆದಿತ್ತು. ಕೊನೆಗೆ ಆದಿಲ್​ ಖಾನ್​ರನ್ನೂ ಬಿಟ್ಟು ಮೊದಲ ಪತಿ ರೀತೇಶ್​ ಅವರನ್ನು ಸೇರಿಕೊಂಡರು. ಹೀಗೆ ಡ್ರಾಮಾದ ಮೇಲೆ ಡ್ರಾಮಾ ಮಾಡುತ್ತಿರುವ ರಾಖಿ ಅವರನ್ನು ಈ ಸ್ಥಿತಿಯಲ್ಲಿ ನೋಡಿದ ಮೇಲೂ ಹಲವರು ಈಕೆಯನ್ನು ನಂಬದೇ ಇದು ಕೂಡ ಡ್ರಾಮಾ ಎನ್ನುತ್ತಿದ್ದಾರೆ.

Tap to resize

Latest Videos

ಸಮಾಜದ ಒಳಿತಿಗೆ ಲೈಂಗಿಕ ಕಾರ್ಯಕರ್ತೆಯರ ಕೊಡುಗೆ ಅಪಾರ ಎಂದ ನಟ ಶೇಖರ್​ ಸುಮನ್​

ನಿಮ್ಮ ಡ್ರಾಮಾ ಸಾಕು ಮಾಡಿ, ಇದು ಓವರ್​ ಆಯ್ತು ಎಂದು ಹಲವರು ಕಮೆಂಟ್​ನಲ್ಲಿ ತಿಳಿಸಿದ್ದಾರೆ. ಕಮೆಂಟ್​ನಲ್ಲಿ ಈ ರೀತಿಯ ಪ್ರತಿಕ್ರಿಯೆಗಳನ್ನು ನೋಡಿದ್ದ ಇವರ ಮೊದಲ ಪತಿ  ರಿತೇಶ್ ರಾಜ್ ಸಿಂಗ್  ರಾಖಿ ಸಾವಂತ್​ ಆಸ್ಪತ್ರೆಗೆ ದಾಖಲಾಗಿದ್ದಾಳೆ. ದಯವಿಟ್ಟು ಡ್ರಾಮಾ ಅನ್ಬೇಡಿ. ರಾಖಿ ಸಾವಂತ್​ ಏನೇ ಮಾಡಿದ್ರೂ ಡ್ರಾಮಾ ಅಂತೀರಾ. ಆದರೆ ಈ ಸಲ ಅದು ನಾಟಕವಲ್ಲ. ಸೋಷಿಯಲ್​ ಮೀಡಿಯಾದಲ್ಲಿ ರಾಖಿ ಸಾವಂತ್​ ಆಸ್ಪತ್ರೆಗೆ ಸೇರಿರೋ ಕುರಿತು ಹಲವಾರು ಮಂದಿ ವ್ಯತಿರಿಕ್ತ ಟೀಕೆ ಮಾಡಿದ್ದೀರಿ. ದಯವಿಟ್ಟು ಹಾಗೆ ಮಾಡಬೇಡಿ. ಆಕೆಯ ಸ್ಥಿತಿ ಗಂಭೀರವಾಗಿದೆ. ಇದು ಸುಳ್ಳಲ್ಲ ಎಂದಿದ್ದರು.  ಅದೇ ಇನ್ನೊಂದೆಡೆ ಇವರ ಇನ್ನೋರ್ವ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ ವಿಡಿಯೋ ಒಂದನ್ನು ಮಾಡಿದ್ದು, ರಾಖಿ ನಾಟಕ ಮಾಡುತ್ತಿದ್ದಾಳೆ. ಅವಳು ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಸರೆಂಡರ್​ ಆಗಬೇಕಿದೆ. ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯ ನಾಟಕವಾಡುತ್ತಿದ್ದಾಳೆ ಎಂದಿದ್ದರು.

ಅಷ್ಟಕ್ಕೂ ಡ್ರಾಮಾ ಎನ್ನಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ರಾಖಿ ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಬಂಧನದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಮಾಜಿ ಪತಿ ಆದಿಲ್​ ಖಾನ್​ರ  ಖಾಸಗಿ ವಿಡಿಯೋಗಳನ್ನು ಲೀಕ್​ ಮಾಡಿದ ಆರೋಪ ಇವರ ಮೇಲಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಬಂಧನದ ಭೀತಿ ಇವರಿಗಿದೆ.  ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಎಂದುಕೊಂಡು  ಬುರ್ಖಾದಲ್ಲಿ ಕಾಣಿಸಿಕೊಂಡಿದ್ದ ರಾಖಿ ಈಚೆಗೆ, ಮೊದಲ ಪತಿ ರೀತೇಶ್​ ಬಳಿ ಓಡಿ ಹೋಗಿದ್ದರು.  ತಮ್ಮ ವಿರುದ್ಧ ಆದಿಲ್​ ಖಾನ್​ ದೂರು ದಾಖಲು ಮಾಡುತ್ತಿದ್ದಂತೆಯೇ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದುಕೊಂಡಿದ್ದ ರಾಖಿ, ತಮ್ಮನ್ನು ಬಂಧಿಸದಂತೆ ಕೋರಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಇವರ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ನಾಲ್ಕು ವಾರಗಳಲ್ಲಿ ಸರೆಂಡರ್​ ಆಗುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ನಟಿ ಆಸ್ಪತ್ರೆಗೆ ಸೇರಿದ್ದರಿಂದ ಡ್ರಾಮಾ ಎಂದೇ ಹೇಳಲಾಗುತ್ತಿದೆ. ನೆಟ್ಟಿಗರು ಕೂಡ ಇದನ್ನೇ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಟಿಯ ಕಥೆ ತೋಳ ಬಂತು ತೋಳ ಆಗುತ್ತಿದೆ ಎಂದೇ ಹೇಳಲಾಗುತ್ತಿದೆ. 

ರಾಖಿ ಸಾವಂತ್​ ಸ್ಥಿತಿ ಗಂಭೀರ? ಶಾಕಿಂಗ್​ ಹೇಳಿಕೆ ಕೊಟ್ಟ ಮಾಜಿ ಪತಿ- ನಟಿಗೆ ಆಗಿದ್ದೇನು?

click me!