ನಿವೇದಿತಾ ಗೌಡ ಹೊಸ ಫೋಟೋ ಹಂಚಿಕೊಂಡ್ರೆ, 'ಚಂದನ್‌ ಎಲ್ಲಿದ್ಯಪ್ಪ' ಅಂತಾ ಕೇಳೋದ್‌ ಯಾಕೆ?

First Published | May 18, 2024, 12:43 PM IST

ಅದೆಷ್ಟೇ ಟ್ರೋಲ್‌ ಮಾಡ್ಲಿ ಯಾವುದಕ್ಕೂ ಕ್ಯಾರೇ ಎನ್ನದೆ, ಸೋಶಿಯಲ್‌ ಮೀಡಿಯಾದಲ್ಲಿ ಎಂಗೇಜ್‌ ಆಗಿರುವ ಸೆಲಿಬ್ರಿಟಿ ಇದ್ರೆ ಅದು ನಿವೇದಿತಾ ಗೌಡ. ನಿವೇದಿತಾ ಗೌಡ ಹೊಸ ಫೋಟೋಗಳು ಬಂದ್ರೆ ಅದಕ್ಕೆ ಭರಪೂರ ಎನ್ನುವಷ್ಟು ಕಾಮೆಂಟ್‌ ಬರುತ್ತದೆ..

ನಟಿ ನಿವೇದಿತಾ ಗೌಡ ಸಖತ್‌ ಹಾಟ್‌ ಆಗಿದ್ದಾರೆ. ಅವರ ಇತ್ತೀಚಿನ ಫೋಟೋಗಳೇ ಇದಕ್ಕೆ ಸಾಕ್ಷಿಯಾಗಿವೆ. ಕೆಲ ದಿನಗಳ ಹಿಂದೆ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಅವರು ಪೋಟೋ ಶೂಟ್‌ ಮಾಡಿಸಿದ್ದರು

ಇನ್ನು ನಿವೇದಿತಾ ಗೌಡ ಅದ್ಯಾವ ರೀತಿಯ ಫೋಟೋ ಹಾಕಿದ್ರೆ ಅದಕ್ಕೆ ಕೆಟ್ಟ ಕಾಮೆಂಟ್ಸ್‌ ಬರೋದಂತೂ ತಪ್ಪೋದಿಲ್ಲ. ಹಾಗಾಗಿ ಸೋಶಿಯಲ್‌ ಮೀಡಿಯಾದಲ್ಲೂ ಕ್ವಿಕ್‌ ಆಗಿ ವೈರಲ್‌ ಆಗುತ್ತದೆ.

Tap to resize

ನಿವೇದಿತಾ ಗೌಡ ಅವರ ಫೋಟೋಗಳಿಗೆ ಕಾಮೆಂಟ್‌ ಮಾಡುವ ದೊಡ್ಡ ವರ್ಗವೇ ಇದೆ. ಒಳ್ಳೆ ಕಾಮೆಂಟ್‌ ಇರಲಿ, ಕೆಟ್ಟ ಕಾಮೆಂಟ್‌ ಇರಲಿ ನಿವೇದಿತಾ ಮಾತ್ರ ಯಾವುದಕ್ಕೂ ರಿಪ್ಲೈ ಮಾಡೋದಿಲ್ಲ.

ಈಜುಕೊಳದಲ್ಲಿ ಫೋಟೋಶೂಟ್‌ ಮಾಡಿಸಿದ ಬಳಿಕ ನಿವೇದಿತಾ ಗೌಡ ಈಗ ಬೆಡ್‌ ಮೇಲೆ ಫೋಟೋ ಶೂಟ್‌ ಮಾಡಿಸಿದ್ದಾರೆ. ಅದಕ್ಕೂ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಬರುತ್ತಿವೆ.

ಸಾಮಾನ್ಯವಾಗಿ ನಿವೇದಿತಾ ಗೌಡ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಳ್ಳುವ ಪತಿ ಚಂದನ್‌ ಗೌಡ ಈ ವಿಡಿಯೋದಲ್ಲಿಲ್ಲ. ಇದರ ಬೆನ್ನಲ್ಲಿಯೇ ಟ್ರೋಲಿಗರು ಕೂಡ ಚಂದನ್‌ ಗೌಡ ಎಲ್ಲಿದ್ಯಪ್ಪ ಎಂದು ಪ್ರಶ್ನೆ ಮಾಡಿದ್ದಾರೆ.

ಹೊಸ ವಿಡಿಯೋ ನೋಡಿದ ಹೆಚ್ಚಿನವರು ಈ ಜಗತ್ತಲ್ಲಿ ಏನಾದ್ರೂ, ಲಕ್ಕಿಯೆಸ್ಟ್ ವ್ಯಕ್ತಿ ಅಂತಾ ಇದ್ರೆ ಅದು ಚಂದನ್‌ ಗೌಡ ಎಂದು ಕಾಮೆಂಟ್‌ ಮಾಡಿದ್ದಾರೆ. 

ನೋಡುವ ದೃಷ್ಟಿ ಸರಿಯಾಗಿದ್ದರೆ, ನಮ್ಮ ನಿವಿ ಹಾಕುವ ಎಲ್ಲಾ ವಿಡಿಯೋ ಹಾಗೂ ಫೋಟೋಗಳು ಚೆನ್ನಾಗಿಯೇ ಕಾಣ್ತವೆ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಗ್ಲಾಮರಸ್‌ ಡಾಲ್‌ ಆಗಿ ಕಾಣಿಸಿಕೊಳ್ಳೋ ನಿವೇದಿತಾ ಗೌಡ ಅವರ ಹೊಸ ವಿಡಿಯೋಗೆ ಕಾಮೆಂಟ್‌ಗಳು ಉಕ್ಕಿಹರಿದು ಬಂದಿವೆ. ಇದರ ವಿಡಿಯೋ ಹಾಗೂ ಫೋಟೋ ಎರಡನ್ನೂ ಅವರು ಶೇರ್‌ ಮಾಡಿಕೊಂಡಿದ್ದಾರೆ.

ದಿನಗಳು ಕಳೆದ ಹಾಗೆ ನಮ್ಮ ಗ್ಲಾಮರ್‌ ಡಾಲ್‌ ನಿವೇದಿತಾ ಗೌಡ ಅವರ ಬಟ್ಟೆ ಸಣ್ಣದು ಆಗ್ತಾ ಇದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 

'ಇಡೀ ರಾಜ್ಯವೇ ಖುಷಿ ಪಡೋವಂಥ ಸುದ್ದೀನಾ ಯಾವಾಗ ಕೊಡ್ತೀರಾ?' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದು, ಪರೋಕ್ಷವಾಗಿ ತಾಯಿ ಆಗೋದು ಯಾವಾಗ ಎಂದು ಕೇಳಿದ್ದಾರೆ.

ಇನ್ನು ನಿವೇದಿತಾ ಗೌಡ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಪ್ರತಿ ಫೋಟೋ ಹಾಗೂ ವಿಡಿಯೋಗಳು ಕೂಡ ಸಖತ್‌ ವೈರಲ್‌ ಆಗುತ್ತವೆ.

ಬಿಗ್‌ಬಾಸ್‌ ಮೂಲಕ ಮೊದಲ ಬಾರಿಗೆ ಕನ್ನಡಿಗರಿಗೆ ಪರಿಚಯವಾಗಿದ್ದ ನಿವೇದಿತಾ ಗೌಡ ಆ ಬಳಿಕ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಫೇಮಸ್‌ ಆಗಿದ್ದರು.

ಬಿಗ್‌ಬಾಸ್‌ನಲ್ಲಿಯೇ ಭೇಟಿಯಾಗಿದ್ದ ರಾಪರ್‌ ಚಂದನ್‌ ಗೌಡ ಅವರನ್ನು 2020ರ ಫೆಬ್ರವರಿಯಲ್ಲಿ ಮೈಸೂರಿನಲ್ಲಿ ನಿವೇದಿತಾ ಗೌಡ ವಿವಾಹವಾಗಿದ್ದರು.

Latest Videos

click me!