ಈ ನಟಿಯ ಸಿಂಗಲ್ ಲೈಫ್ ಹಿಂದಿದೆ ಜಾಕಿ ಶ್ರಾಫ್ ರೇಪ್ ಮಾಡಿದ ಕಥೆ!

ಈ ನಟಿ ಹಲವಾರು ನಟರೊಂದಿಗೆ ಸುತ್ತಾಡಿದ್ದಾಳೆ. ಹಲವರೊಂದಿಗೆ ಆಕೆಯ ಪ್ರೇಮಜೀವನ ನಡೆದಿದೆ. ಆದರೆ ಯಾರನ್ನೂ ಆಕೆ ಮದುವೆಯಾಗಿಲ್ಲ. ಯಾಕೆ ಗೊತ್ತೆ? ಬಾಲ್ಯದಲ್ಲಿ ಆಕೆಯನ್ನು ನಟ ಜಾಕಿ ಶ್ರಾಫ್ ರೇಪ್ ಮಾಡಲು ಪ್ರಯತ್ನಿಸಿದ್ದನಂತೆ. ಆ ಕಹಿ ಆಕೆಯ ಜೀವನದಲ್ಲಿ ಉಳಿದುಹೋಗಿದೆ. ಯಾರಾ ನಟಿ? ಏನಿವಳ ಕತೆ?

Bollywood actress Tabu not married because of abuse done by Jackie Shroff  bni

ಬಾಲಿವುಡ್‌ನ ಹಲವು ಸುಂದರ ಹೀರೋಯಿನ್‌ಗಳು ಎಷ್ಟೇ ವಯಸ್ಸಾದರೂ ಒಬ್ಬರೇ ಇದ್ದಾರೆ. ಉದಾಹರಣೆಗೆ ರೇಖಾ. ಇನ್ನು ಕೆಲವರು ಸಿಂಗಲ್‌ ಮದರ್‌ ಆಗಿ ಒಬ್ಬರೋ ಇಬ್ಬರು ಮಕ್ಕಳನ್ನು ಹುಟ್ಟಿಸಿಯೋ ದತ್ತು ತೆಗೆದುಕೊಂಡೋ ಸುಖವಾಗಿ ಇದ್ದಾರೆ. ಆದರೆ ಮತ್ತೊಬ್ಬ ಚೆಲುವೆ ತಬು ಮಕ್ಕಳನ್ನೂ ದತ್ತು ಪಡೆದಿಲ್ಲ. ಮದುವೆಯೂ ಆಗಿಲ್ಲ. ವಿಚಾರಿಸಿ ನೋಡಿದರೆ, ಆಕೆಯ ಬದುಕಿನಲ್ಲಿ ನಡೆದ ಹಲವು ಘಟನೆಗಳೇ ಆಕೆ ಒಂಟಿಯಾಗಿ ಇರೋದಕ್ಕೆ ಕಾರಣ ಅಂತ ಗೊತ್ತಾಗುತ್ತದೆ. ಬಾಲಿವುಡ್‌ನ ಮಾದಕ ಚೆಲುವೆಯರಲ್ಲಿ ಒಬ್ಬಳಾದ ತಬು ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬ ಕುತೂಹಲ ಕೆಲವರಿಗಾದರೂ ಇರುತ್ತದೆ. ಆದರೂ ಇದು ವಿಚಿತ್ರವೇನಲ್ಲ. 


ದಿಲ್‌ಜಲಾ ಫಿಲಂ ಚಿತ್ರೀಕರಣದ ವೇಳೆ ಒಂದು ಘಟನೆ ನಡೆಯಿತು. ಆ ಫಿಲಂನಲ್ಲಿ  ಜಾಕಿ ಶ್ರಾಫ್ ನಾಯಕನಾಗಿದ್ದ. ಫರ್ಹಾಜ್ ಹಶ್ಮಿ ನಾಯಕಿಯಾಗಿದ್ದಳು. ಫರ್ಹಾಳ ತಂಗಿಯೇ ಈ ತಬು. ಆಗ ಆಕೆಗೆ ಏಳು ವರ್ಷ. ತಬುವನ್ನು ಶೂಟಿಂಗ್‌ ಸೆಟ್‌ಗೆ ಕರೆದುಕೊಂಡು ಹೋಗುತ್ತಿದ್ದಳು ಫರ್ಹಾ. ಒಮ್ಮೆ ಜಾಕಿ ಶ್ರಾಫ್ ಕುಡಿದ ಅಮಲಿನಲ್ಲಿ ತಬುವಿನ ಮೇಲೆ ಅತ್ಯಾಚಾರದ ಯತ್ನ ಮಾಡಿದ. ಫರ್ಹಾ ಗಲಾಟೆ ಎಬ್ಬಿಸಿದಳು. ತಬು ಕೂಡ ಜಾಕಿ ತನ್ನ ಮೇಲೆ ಕೈಮಾಡಲು ಬಂದ ಎಂದು ಹೇಳಿದಳು. ನಂತರ ಬಾಲಿವುಡ್‌ನ ನಾನಾ ಬಗೆಯ ಹಂಗಾಮಗಳಲ್ಲಿ ಇದು ಮುಚ್ಚಿಯೇ ಹೋಯಿತು, ನಂತರ ಜಾಕಿ ಶ್ರಾಫ್- ತಬು ಎಂದೂ ಜತೆಯಾಗಿ ನಟಿಸಲಿಲ್ಲ. 

Latest Videos


ತಬುವಿನ ಪೂರ್ತಿ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ಈಕೆ ಅಂಧಾಧುನ್, ದೃಶ್ಯ, ಗೋಲ್ಮಾಲ್ ಎಗೇನ್, ವಿರಾಸತ್ ಮೊದಲಾದ ಫಿಲಂಗಳಲ್ಲಿ ನಟಿಸಿದ್ದಾಳೆ. ಬಾಲಿವುಡ್‌ನ ಬಹುತೇಕ ಎಲ್ಲ ನಾಯಕ ನಟರ ಜೊತೆಗೂ ನಟಿಸಿದ್ದಾಳೆ. ಈಕೆ ಒಮ್ಮೆ ತನಗೆ ಮದುವೆ ಆಗದೆ ಇರುವುದರ ಕಾರಣವನ್ನು ತಮಾಷೆಯಾಗಿ ಹೇಳಿದ್ದು ಹೀಗೆ- ಮುಂಬಯಿಯಲ್ಲಿ ಈಕೆಯ ಕಸಿನ್ ಸಮೀರ್ ಹಾಗೂ ಅಜಯ್ ದೇವಗನ್ ಮನೆಗಳು ಅಕ್ಕಪಕ್ಕದಲ್ಲೇ ಇದ್ದವು. ಬಾಲ್ಯದಿಂದಲೂ ಇವರು ಮೂವರೂ ಪರಿಚಿತರು. ತಬು ಬೆಳೆಯುತ್ತ ದೊಡ್ಡವಳಾದಂತೆ ಸಮೀರ್ ಹಾಗೂ ಅಜಯ್‌ ಇಬ್ಬರೂ ಆಕೆಯ ಹಿಂದು ಗೂಢಚಾರಿಕೆ ಮಾಡಲು ಅರಂಭಿಸಿದರು. ಯಾರೇ ಹುಡುಗ ತಬುವಿನಿಂದ ಆಕರ್ಷಿತನಾದರೂ, ಆಕೆಯೊಡನೆ ಮಾತಾಡಿದರೂ, ಆಕೆಯ ಮೇಲೆ ಪ್ರೀತಿ ಬೆಳೆಸಿಕೊಂಡು ಆಕೆಯೊಡನೆ ಸುತ್ತಾಡಿದರೂ, ಇವರಿಬ್ಬರೂ ಹೋಗಿ ಆ ಹುಡುಗನನ್ನು ತಾರಾಮಾರಿ ಚಚ್ಚಿಹಾಕಿ ಬರುತ್ತಿದ್ದರಂತೆ! ಇದರಿಂದಾಗಿಯೇ ತಾನು ಮದುವೆಯಾಗದೆ ಉಳಿದುಕೊಂಡೆ ಎಂದು ತಬು ಒಮ್ಮೆ ತಮಾಷೆಯಾಗಿ ಹೇಳಿದ್ದಳು.


ಅಜಯ್ ದೇವಗನ್ ಕೂಡ ಒಮ್ಮೆ ತಮಾಷೆಯಾಗಿ ಹೇಳಿದ್ದು ಇತ್ತು- ತಬು ಯಾಕೆ ಮದುವೆಯೇ ಆಗಲಿಲ್ಲ ಎಂದರೆ, ಆಕೆಗೆ ನನ್ನಂಥ ಹುಡುಗ ಸಿಗಲಿಲ್ಲ ಅಂತ. ಅಜಯ್ ಕೊನೆಗೆ ಕಾಜೋಲ್‌ಳನ್ನು ಮದುವೆಯಾದ. ಅಜಯ್‌ಗೂ ತಬುವಿಗೂ ಸೀಕ್ರೇಟಾಗಿ ಅಫೆರ್ ಇತ್ತಾ? ಅವರಿಬ್ಬರೂ ಹೇಳಬೇಕು. ತಬು ಸ್ವಭಾವತಃ ದಿಟ್ಟ ಹೆಣ್ಣು. ತನಗೆ ಮಗು ಬೇಕಾದರೆ ಮದುವೆಯಿಲ್ಲದೆಯೇ ಮಗು ಮಾಡಿಕೊಂಡು ಅಥವಾ ದತ್ತು ತೆಗೆದುಕೊಂಡು ಸಾಕುತ್ತೇನೆ. ತನಗೆ ಇಷ್ಟ ಬಂದವರನ್ನು ಬೇಕಿದ್ದರೆ ಮದುವೆಯಾಗುತ್ತೇನೆ ಅಥವಾ ಇಲ್ಲ- ಎಂದು ಹೇಳುವ ಈಕೆ ಯಾರ ಒತ್ತಡಕ್ಕೂ ಒಳಗಾಗುವ ಪೈಕಿ ಅಲ್ಲ. 

ಅತಿಲೋಕ ಸುಂದರಿ ಶ್ರೀದೇವಿ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಸ್ಟಾರ್ ಹೀರೋ: ಅಷ್ಟಕ್ಕೂ ನೋ ಅಂದಿದ್ಯಾಕೆ?


ತಬುವಿನ ಖಾತೆಯಲ್ಲಿ ಹಲವು ಪ್ರೇಮ ಪ್ರಕರಣಗಳಿವೆ. ಈಕೆಯ ಮೊದಲ ಬಾಯ್‌ಫ್ರೆಂಡ್ ಸಂಜಯ್ ಕಪೂರ್. ಪ್ರೇಮ್ ಫಿಲಂ ಶೂಟಿಂಗ್ ವೇಳೆ ಇವರಲ್ಲಿ ಕುಚ್‌ಕುಚ್‌ ಇತ್ತು. ನಂತರ ಇವರಿಬ್ಬರೂ ಬೇರೆಯಾದರು. ಈಗಲೂ ಇವರು ಮಾತಾಡುವುದಿಲ್ಲ. ನಂತರ ಈಕೆಗೆ ಜೊತೆಯಾದವನು ನಿರ್ದೇಶಕ ಕಂ ನಿರ್ಮಾಪಕ ಸಾಜಿದ್ ನಡಿಯಾಡ್‌ವಾಲಾ. ಸಾಜಿದ್ ಆಗಷ್ಟೇ ನಿಗೂಢವಾಗಿ ಮೃತಳಾದ ತನ್ನ ಪತ್ನಿ ದಿವ್ಯಾ ಭಾರತಿಯ ಸಾವಿನಿಂದ ಚೇತರಿಸಿಕೊಳ್ಳುತ್ತಿದ್ದ. ಆಗ ಇವರಿಬ್ಬರ ಲವ್ ಅಫೆರ್‌ ಶುರುವಾಯ್ತು. ನಂತರ ಅದೂ ಹೇಗೋ ಕೊನೆಗೊಂಡಿತು. ಮೂರನೆಯದಾಗಿ ಈಕೆಯ ಬಾಳಿನಲ್ಲಿ ಬಂದವನೇ ದಕ್ಷಿಣ ಭಾರತದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ. ತಬುವಿನ ಜೊತೆಗೆ ಈತನ ಪ್ರೇಮ ಶುರುವಾದಾಗ ಅವನಾಗಲೇ ಮದುವೆಯಾಗಿ ಸಂಸಾರಿಯಾಗಿದ್ದ. ಹತ್ತು ವರ್ಷಗಳ ಕಾಲ ತಬು ಇವನ ಜೊತೆಗಿದ್ದಳು. ತನಗಾಗಿ ಈತ ಪತ್ನಿಯನ್ನು ಬಿಡುವವನಲ್ಲ ಎಂಬುದು ಕಡೆಗೂ ತಬುವಿಗೆ ಅರಿವಾಯಿತು. ಕಡೆಗೂ ಆತನನ್ನು ನೋವಿನಿಂದ ಬಿಟ್ಟುಬಿಟ್ಟಳು. 

ಎದೆ ಸೀಳೋ ಡ್ರೆಸ್‌ನಲ್ಲಿ ಕಾವೇರಿಸಿದ ಮಲೈಕಾ ಅರೋರ; ʼಅರ್ಜುನ್‌ ಕಪೂರ್‌ ಹಿಂದೆ ಬಿದ್ದಿದ್ದಕ್ಕೆ ಕಾರಣ ಗೊತ್ತಾಯ್ತುʼ- ನೆಟ್ಟಿಗರು!

 

vuukle one pixel image
click me!