ಸಂಗಾತಿ ಇದ್ರೂ ಸ್ನೇಹಿತ ಇರಲೇಬೇಕು: ಕಾರಣ ಕೊಟ್ಟ ಅಕ್ಷಯ್​ ಕುಮಾರ್​ ಪತ್ನಿ ನಟಿ ಟ್ವಿಂಕಲ್​ ಖನ್ನಾ!

ದೊಡ್ಡವರಾದ ಮೇಲೆ ಸಂಗಾತಿಯಿದ್ದರೂ ಸ್ನೇಹಿತರು ಇರಲೇಬೇಕು ಎಂದಿರುವ ನಟಿ ಟ್ವಿಂಕಲ್​ ಖನ್ನಾ, ಅದಕ್ಕೆ ಕೊಟ್ಟಿರೋ ಕಾರಣ ಏನು?
 

Actress Twinkle Khanna says that even if you have a partner, you should still have friends suc

'ದೊಡ್ಡವರಾದ ಮೇಲೆ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಆದರೆ ಅದರಲ್ಲಿ ಇರುವ ಖುಷಿ ಮತ್ತೊಂದಿಲ್ಲ. ನಮ್ಮ ನೋವನ್ನು ಹೇಳಿಕೊಳ್ಳಲು ಒಂದು ಹೆಗಲು ಬೇಕು. ಅದು ಸ್ನೇಹಿತನಿಂದ ಮಾತ್ರ ಸಾಧ್ಯ' ಎಂದಿದ್ದಾರೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪತ್ನಿ ನಟಿ ಟ್ವಿಂಕಲ್​ ಖನ್ನಾ ಹೇಳಿದ್ದಾರೆ. ಗಂಡ ಅಥವಾ ಹೆಂಡತಿ ಅಂದರೆ ಇರುತ್ತಾರಲ್ಲ ಎಂದು ನೀವು ಹೇಳಬಹುದು. ಆದರೆ ಇಂಥ ನೋವಿನ ಸಂದರ್ಭಗಳಲ್ಲಿ ಗಂಡ- ಹೆಂಡತಿಯ ಬದಲು ಸ್ನೇಹಿತರೇ ಬೆಸ್ಟ್​. ನೀವು ಇದನ್ನು ಒಪ್ಪುತ್ತೀರೋ, ಇಲ್ಲವೋ ಗೊತ್ತಿಲ್ಲ. ಗಂಡ-ಹೆಂಡತಿ ಇದ್ದರೆ ಇದ್ದರೂ ಆಕೆ ಅಥವಾ ಆತ  ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸಂಗಾತಿ ಇದ್ದರೂ ಸ್ನೇಹಿತರು ಇರಲೇಬೇಕು ಎಂದಿದ್ದಾರೆ. 

ಇದನ್ನು ಕೆಲವರು ಒಪ್ಪಿದ್ದು, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.  ನಿಮ್ಮ ಸಂಗಾತಿಯಲ್ಲಿಯೇ ಸ್ನೇಹಿತರನ್ನು ಕಂಡುಕೊಳ್ಳಬೇಕು. ಈ ರೀತಿ ದೊಡ್ಡವರಾದ ಮೇಲೆ ಸ್ನೇಹಿತರನ್ನು ಹೊಂದುವುದು ಬೇರೆಯದ್ದಕ್ಕೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ. ಮತ್ತೆ ಕೆಲವರು ನೀವು ಹೇಳ್ತಿರೋದು ನಿಜ. ಗಂಡ ಮತ್ತು ಹೆಂಡತಿಯ ಬಳಿ ನಮ್ಮ ಎಲ್ಲಾ ನೋವನ್ನೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಎಷ್ಟೋ ಸಂದರ್ಭದಲ್ಲಿ ನನಗೂ ಒಬ್ಬರು ಸ್ನೇಹಿತರು ಇದ್ದರೆ ಚೆನ್ನಾಗಿತ್ತು ಎಂದೇ ಎನ್ನಿಸುತ್ತದೆ ಎಂದಿದ್ದಾರೆ. 

Latest Videos

ಶಾರುಖ್​ ಖಾನ್​ರ ರೂಪ, ನಟನೆ ಕುರಿತು ಪಾಕಿಸ್ತಾನ​ ನಟಿ ವಿವಾದಾತ್ಮಕ ಹೇಳಿಕೆ: ರೊಚ್ಚಿಗೆದ್ದ ಅಭಿಮಾನಿಗಳು!

 
ಸ್ನೇಹದಿಂದ ಮಾತ್ರ ಬರುವ ವಿಶೇಷ ರೀತಿಯ ಸಾಂತ್ವನವಿದೆ. ಉದ್ಯಾನದಲ್ಲಿರುವ ವಿವಿಧ ಸಸ್ಯಗಳಂತೆ, ನಮ್ಮ ಜೀವನದಲ್ಲಿ ಪ್ರತಿಯೊಂದು ಸಂಬಂಧವು ಒಂದು ವಿಶಿಷ್ಟ ಉದ್ದೇಶವನ್ನು ಪೂರೈಸುತ್ತದೆ.  ವಯಸ್ಕ ಸ್ನೇಹದ ಸೌಂದರ್ಯವು ಅವುಗಳ ಉದ್ದೇಶಪೂರ್ವಕ ಸ್ವಭಾವದಲ್ಲಿದೆ. ಅವು ಕೇವಲ ಸಂಭವಿಸುವುದಿಲ್ಲ - ಅವುಗಳನ್ನು ಆಯ್ಕೆ ಮಾಡಲಾಗುತ್ತದೆ, ನಿರ್ಮಿಸಲಾಗುತ್ತದೆ ಮತ್ತು ಅಮೂಲ್ಯವಾಗಿ ಸಂರಕ್ಷಿಸಲಾಗುತ್ತದೆ. ಇಂದು ನಿಮ್ಮ ಸ್ನೇಹ ಉದ್ಯಾನವನ್ನು ಬೆಳೆಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎನ್ನುವ ಶೀರ್ಷಿಕೆಯ ಜೊತೆಗೆ ಈ ವಿಡಿಯೋ ಶೇರ್​ ಮಾಡಲಾಗಿದೆ. 

ಇನ್ನು ನಟಿಯ ಕುರಿತು ಹೇಲುವುದಾದರೆ, ಇವರು ಸೂಪರ್​ಸ್ಟಾರ್​ ರಾಜೇಶ್ ಖನ್ನಾ ಅವರ ಪುತ್ರಿ. ಇದರಿಂದ ನಟನೆ ಸುಲಭವಾಗಿ ಅವರಿಗೆ ಒಲಿದಿದೆ. ಸ್ಟಾರ್​ ಕಿಡ್​ ಆಗಿದ್ದರಿಂದ ಸಿನಿಮಾಗಳಲ್ಲಿಯೂ ಅವಕಾಶ ಸಿಕ್ಕಿದೆ. ಇದರ ಹೊರತಾಗಿಯೂ  ಟ್ವಿಂಕಲ್ ಖನ್ನಾ ಬಾಲಿವುಡ್ ನಲ್ಲಿ  ಗುರುತಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್​ ಕಾಣಲಿಲ್ಲ. ಆದರೆ ಈಗ ಬರವಣಿಗೆಯ ಮೂಲಕ ಓದುಗರ ಮನಸ್ಸು ಗೆಲ್ಲುತ್ತಿದ್ದಾರೆ.  ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.  ಅಕ್ಷಯ್​ ಕುಮಾರ್​ ಜೊತೆಗೆ ಮದುವೆಯಾದ ಮೇಲೆ ನಟನೆಯಿಂದ ತುಸು ದೂರವೇ ಉಳಿದಿದ್ದಾರೆ. 

ಸನ್ನಿ ಲಿಯೋನ್​ ಹೆಸ್ರು ಹೇಳ್ತಿದ್ದಂತೆಯೇ ಯಶ್​ ಸೈಲೆಂಟ್​ ಆಗಿದ್ಯಾಕೆ? ವೈರಲ್​ ವಿಡಿಯೋದಲ್ಲಿನ ಗಮ್ಮತ್ತು ನೋಡಿ!

 
 
 
 
 
 
 
 
 
 
 
 
 
 
 

A post shared by Divya Jain (@divsjain)

vuukle one pixel image
click me!