Chethan Kumar | Updated: Mar 21, 2025, 11:34 PM IST
ಕರ್ನಾಟಕದಲ್ಲಿ ಹನಿಟ್ರ್ಯಾಪ್ ಭಾರಿ ಕೋಲಾಹಲ ಸೃಷ್ಟಿಸಿದೆ. ಸಚಿವ ಕೆಎನ್ ರಾಜಣ್ಣ ಸದನದಲ್ಲಿ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನಗಳು ನಡೆದಿದೆ ಎಂದಿದ್ದಾರೆ. ಇತ್ತ ಬಿಜೆಪಿ ಇದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಒತ್ತಾಯಿಸಿದೆ. ಇದರ ನಡುವೆ 18 ಬಿಜೆಪಿ ಶಾಸಕರೂ ಅಮಾನತ್ತಾಗಿದ್ದಾರೆ. ಇದೀಗ ಕೆಎನ್ ರಾಜಣ್ಣ ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಿದ ಮಾಹಿತಿಗಳು ಬಹಿರಂಗವಾಗಿದೆ. ವಕೀಲೆ ಎಂದು ಹೇಳಿ ಕೆಎನ್ ರಾಜಣ್ಣ ಅವರನ್ನು ಯುವತಿಯೊಬ್ಬಳು ಸತತವಾಗಿ ಹಿಂಬಾಸಿದ್ದಾಳೆ. ಮೂರು ಭಾರಿ ಭೇಟಿಗೆ ಪ್ರಯತ್ನಿಸಿದ ಘಟನೆಯೂ ಬಹಿರಂಗವಾಗಿದೆ.