ಟ್ವಿಟರ್‌ನ ಐಕಾನಿಕ್‌ ಬ್ಲ್ಯೂಬರ್ಡ್‌ ಲೋಗೋ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟ!

ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿದ್ದ ನೀಲಿ ಹಕ್ಕಿ ಲೋಗೋವನ್ನು $34,375 ಗೆ ಹರಾಜು ಮಾಡಲಾಗಿದೆ. ಎಲೋನ್ ಮಸ್ಕ್ ಟ್ವಿಟರ್ ಅನ್ನು 'ಎಕ್ಸ್' ಎಂದು ಬದಲಾಯಿಸಿದ ನಂತರ ಈ ಲೋಗೋವನ್ನು ಮಾರಾಟ ಮಾಡಲಾಯಿತು.

Twitter iconic bird logo sold for nearly 30 Lakh at auction san

ನವದೆಹಲಿ (ಮಾ.22): ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯನ್ನು ಅಲಂಕರಿಸಿದ್ದ ಐಕಾನಿಕ್ ನೀಲಿ ಹಕ್ಕಿ ಲೋಗೋವನ್ನು $34,375 ಗೆ ಹರಾಜಿನಲ್ಲಿ (ಅಂದಾಜು 30 ಲಕ್ಷ ರೂಪಾಯಿ) ಮಾರಾಟ ಮಾಡಲಾಗಿದೆ. ಟ್ವಿಟರ್‌ಅನ್ನು ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್‌ ಮಸ್ಕ್‌ ಖರೀದಿ ಮಾಡಿದ ನಂತರ ಟ್ವಿಟರ್‌ನ ಹೆಸರನ್ನು 'ಎಕ್ಸ್‌' ಎಂದು ಬದಲಾಯಿಸಿದ್ದರು. ಅದಲ್ಲದೆ, ಲಾಂಛನವನ್ನು ನೀಲಿ ಹಕ್ಕಿಯ ಬದಲು X ಆಗಿ ಮಾರ್ಪಾಡು ಮಾಡಿದ್ದರು. ಅಪರೂಪದ ಸಂಗ್ರಹಯೋಗ್ಯ ವಸ್ತುಗಳನ್ನು ಮಾರಾಟ ಮಾಡಲು ಹೆಸರುವಾಸಿಯಾದ ಆರ್‌ಆರ್ ಹರಾಜು ಕಂಪನಿ,  12 ಅಡಿ x 9 ಅಡಿ ಅಳತೆಯ 254 ಕೆಜಿ ತೂಕದ ಈ ಚಿಹ್ನೆಯ ಮಾರಾಟವನ್ನು ದೃಢಪಡಿಸಿದೆ. ಆದರೆ ಖರೀದಿದಾರರ ಗುರುತನ್ನು ಬಹಿರಂಗಪಡಿಸಲಿಲ್ಲ.

ಈತ ಎಂಥಾ ಬುದ್ಧಿವಂತ ನೋಡಿ: ಲಕ್ಷಾಂತರ ಜನರಿಂದ ವೀಡಿಯೋ ವೀಕ್ಷಣೆ

Latest Videos

ಮಸ್ಕ್ ಈ ಹಿಂದೆ ಟ್ವಿಟರ್‌ ಕಚೇರಿಯಲ್ಲಿ ಪೀಠೋಪಕರಣಗಳು ಮತ್ತು ಅಡುಗೆ ಸಲಕರಣೆಗಳು ಸೇರಿದಂತೆ ವಿವಿಧ ಟ್ವಿಟರ್ ಸ್ಮರಣಿಕೆಗಳನ್ನು ಹರಾಜು ಹಾಕಿದ್ದಾರೆ. ಅದೇ ಹರಾಜಿನಲ್ಲಿ ಇತರ ತಾಂತ್ರಿಕ ಸಂಗ್ರಹಯೋಗ್ಯ ವಸ್ತುಗಳೆಂದರೆ $375,000 ಗೆ ಮಾರಾಟವಾದ ಅಪರೂಪದ ಆಪಲ್-1 ಕಂಪ್ಯೂಟರ್, $112,054 ಗೆ ಸ್ಟೀವ್ ಜಾಬ್ಸ್ (1976) ಸಹಿ ಮಾಡಿದ ಆಪಲ್ ಚೆಕ್ ಮತ್ತು $87,514 ಗೆ ಸೀಲ್ ಮಾಡಿದ ಮೊದಲ ತಲೆಮಾರಿನ ಐಫೋನ್ (4GB) ಅನ್ನೂ ಮಾರಾಟ ಮಾಡಲಾಗಿದೆ.

 

ಸೆರಗು ಬೈಕ್‌ನ ಚಕ್ರಕ್ಕೆ ಸಿಲುಕದಂತೆ ಎಚ್ಚರಿಸಿದವರಿಗೆ ಮಹಿಳೆಯ ಉತ್ತರ ಕೇಳಿ ಶಾಕ್‌


 

vuukle one pixel image
click me!