ಶಾರುಖ್​ ಖಾನ್​ರ ರೂಪ, ನಟನೆ ಕುರಿತು ಪಾಕಿಸ್ತಾನ​ ನಟಿ ವಿವಾದಾತ್ಮಕ ಹೇಳಿಕೆ: ರೊಚ್ಚಿಗೆದ್ದ ಅಭಿಮಾನಿಗಳು!

ಪಾಕಿಸ್ತಾನಿ ನಟಿ ಶಾರುಖ್​ ಅವರ ರೂಪ ಮತ್ತು ನಟನೆಯ ಬಗ್ಗೆ ನೆಗೆಟಿವ್​ ಮಾತನಾಡಿದ್ದು, ಇದು ಕಿಂಗ್​ ಖಾನ್​ ಅಭಿಮಾನಿಗಳನ್ನು ರೊಚ್ಚಿಗೇಳಿಸಿದೆ.  ಏನಿದು ವಿಷ್ಯ? 
 

Pak actor Mahnoor Baloch says ShahRukh Khan doesnt know acting isnt handsome knows how to market suc

ವಯಸ್ಸು 59 ಆದರೂ ಬಾಲಿವುಡ್​ ಬಾದ್​ಶಾಹ್​ ಎಂದೇ ಕರೆಯಲ್ಪಡುವ ಶಾರುಖ್ ಖಾನ್​ ಕ್ರೇಜ್​ ಏನೂ ಕಮ್ಮಿಯಾಗಿಲ್ಲ. ಮೂರು ದಶಕಗಳಿಂದ ಚಿತ್ರರಂಗವನ್ನು ಆಳುತ್ತಲೇ ಇದ್ದಾರೆ. ಕೆಲ ವರ್ಷಗಳ ಹಿಂದೆ ನಾಲ್ಕೈದು ವರ್ಷ ಒಂದರ ಮೇಲೊಂದು ಫ್ಲಾಪ್​ ಚಿತ್ರಗಳನ್ನು ಕೊಟ್ಟರೂ ನಂತರ ಬ್ರೇಕ್​ ಪಡೆದು, ಪಠಾಣ್​, ಜವಾನ್​ ಮೂಲಕ ಮೇಲೆದ್ದು ಬಂದರು. ಅಲ್ಲಿಂದ ಮತ್ತೆ ಶಾರುಖ್​ ಯುಗ ಆರಂಭವಾಗಿದೆ. ಇವರ ನಟನೆ, ಇವರ ರೂಪ, ಹಾವಭಾವಕ್ಕೆ ಮನಸೋತವರು ಅದೆಷ್ಟೋ ಮಂದಿ. ಅದರಲ್ಲಿಯೂ ​ 2002ರಲ್ಲಿ ಬಿಡುಗಡೆಯಾಗಿದ್ದ ದೇವದಾಸ ಚಿತ್ರದ ಬಳಿಕವಂತೂ ನಟನ ಬಾಳಲ್ಲಿ ಹೊಸ ಯುಗವೇ ಆರಂಭವಾಗಿತ್ತು.  ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸಂಚಲನ ಉಂಟುಮಾಡಿತ್ತು.  12 ಫಿಲಂಫೇರ್  ಮತ್ತು 5 ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಈ ಚಿತ್ರ 58 ಪ್ರಶಸ್ತಿಗಳನ್ನು ಬಾಚಿಕೊಂಡಿತು.  

ಆದರೆ, ಪಾಕಿಸ್ತಾನದ ನಟಿಯೊಬ್ಬಳು ಇದೀಗ ಶಾರುಖ್​ ಖಾನ್​ ವಿರುದ್ಧ ಶಾಕಿಂಗ್ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ. ಮಹನೂರ್​ ಬಲೋಚ್​ ಎನ್ನುವ ನಟಿ, ಶಾರುಖ್​ ಒಬ್ಬ ಮಹಾನ್ ಉದ್ಯಮಿಯಷ್ಟೇ. ಇವರೇನೂ ನೋಡಲು ಒಳ್ಳೆಯ ಲುಕ್ಕೂ ಇಲ್ಲ, ಆ್ಯಕ್ಟಿಂಗ್​ ಕೂಡ ಅಷ್ಟಕಷ್ಟೇ. ಆದರೆ ದೊಡ್ಡ ಉದ್ಯಮಿಯಾಗಿರುವ ಇವರಿಗೆ ತಮ್ಮನ್ನು ತಾವು ಮಾರ್ಕೆಟಿಂಗ್​ ಹೇಗೆ ಮಾಡಿಕೊಳ್ಳಬೇಕು ಎನ್ನುವುದು ಗೊತ್ತಿದೆ. ಇದೇ ಕಾರಣಕ್ಕೆ ಸೂಪರ್​ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡಿದ್ದಾರೆ ಎಂದಿದ್ದಾರೆ! 
  

Latest Videos

ಹಿಂದೂ ಹುಡುಗಿ 'ಖಾನ್'​ ಆದಾಗ ಬಿಳಿ ಬಟ್ಟೆ ಬಿಚ್ಚಿಸುತ್ತಿದ್ದ ಶಾರುಖ್​: ಆ ದಿನಗಳ ನೆನೆದ ಗೌರಿ
 
'ಶಾರುಖ್ ಖಾನ್ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಆದರೆ ಸೌಂದರ್ಯ ಎನ್ನುವುದಕ್ಕೆ ಅದರದ್ದೇ ಆದ ವ್ಯಾಖ್ಯಾನವಿದೆ. ಆದರೆ ಅದರ  ಅಡಿಯಲ್ಲಿ ಶಾರುಖ್ ಬರಲ್ಲ. ನಾನು ಹೇಳ್ತಿರೋದು  ಅವರ ಅಭಿಮಾನಿಗಳಿಗೆ ಇಷ್ಟವಾಗಲ್ಲ ಎನ್ನುವುದು ಗೊತ್ತು, ವಿಪರೀತ ಕೋಪ ಬರುತ್ತೆ ಎನ್ನುವುದೂ ಗೊತ್ತು. ಹಾಗೆಂದು ಸತ್ಯ ಯಾವತ್ತಿಗೂ ಸತ್ಯವೇ. ತಮ್ಮನ್ನು ತಾವು ಮಾರ್ಕೆಟಿಂಗ್​ ಮಾಡಿಕೊಳ್ಳಲು ಬರುವವರಿಗೆ ಎಲ್ಲವೂ ತಂತಾನೆಯಾಗಿಯೇ ಸಿಕ್ಕಿಬಿಡುತ್ತದೆ. ಹಾಗೆಂದು ಅವರಲ್ಲಿ ನಟನಾ ಕೌಶಲ, ಸೌಂದರ್ಯ ಇದೆ ಎಂದು ಅರ್ಥವಲ್ಲ. ಇದನ್ನು ನೀವು ಒಪ್ಪಿ, ಬಿಡಿ ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇದು ಶಾರುಖ್​ ಅಭಿಮಾನಿಗಳನ್ನು ಕೆರಳಿಸಿದೆ. ನಟಿಯ ವಿರುದ್ಧ ಇನ್ನಿಲ್ಲದಂತೆ ಹರಿಹಾಯುತ್ತಿದ್ದಾರೆ.  ಶಾರುಖ್ ಖಾನ್​ ಕ್ವಾಲಿಟಿ ನಟ ಮತ್ತು ಲೆಜೆಂಡ್. ಅವರ ಸೌಂದರ್ಯಕ್ಕೆ ಅವರೇ ಸಾಟಿ. ಅವರ ಸ್ಟೈಲ್​ ಅನ್ನು ಫಾಲೋ ಮಾಡುವ ಲಕ್ಷಾಂತರ ಅಭಿಮಾನಿಗಳ ಇದ್ದಾರೆ. ನಿನಗೇನು ಗೊತ್ತು ಅದರ ಬಗ್ಗೆ ಎಂದು ಕಿಡಿ ಕಾರುತ್ತಿದ್ದಾರೆ.  

 ಇನ್ನು ಶಾರುಖ್​ ಖಾನ್​ ಸದ್ಯ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ತಿರೋದಕ್ಕೆ ಸಂಕಷ್ಟ ಎದುರಿಸುತ್ತಿದ್ದಾರೆ.   ಕಣ ಕಣದಲ್ಲಿಯೂ ಕೇಸರಿ ಎನ್ನುವ ಮೂಲಕ, ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್‌ಗೆ (Tiger Shroff) ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಇದೀಗ ಈ ಮೂವರಿಗೂ ಕಾನೂನು ಸಂಕಷ್ಟ ಎದುರಾಗಿದೆ.   ಈ ನಟರ ವಿರುದ್ಧ ಕೇಸ್​ ದಾಖಲಾಗಿದ್ದು, ಘಟನೆಗೆ ಜೈಪುರ ಜಿಲ್ಲಾ ಗ್ರಾಹಕ ಆಯೋಗ ಸಮನ್ಸ್​ ಜಾರಿ ಮಾಡಿದೆ.
 

ಕೇಸರಿ ಕೇಸರಿ ಎಂದು ತಗ್ಲಾಕ್ಕೊಂಡ ಸ್ಟಾರ್​ ನಟರು! ಶಾರುಖ್​, ಅಜೆಯ್​, ಟೈಗರ್​ಗೆ ಕಾನೂನು ಸಂಕಷ್ಟ...

vuukle one pixel image
click me!