ನೀತಾ ಅಂಬಾನಿ, ಅನಂತ್‌ ಅಂಬಾನಿ ಫಿಟ್‌ನೆಸ್‌ ಹಿಂದೆ ಇರೋದು ಈತನೇ!

ಅನಂತ್ ಅಂಬಾನಿ 100 ಕಿಲೋ ತೂಕ ಇಳಿಸಿಕೊಂಡ. 61 ವಯಸ್ಸಿನಲ್ಲಿ ನೀತಾ ಅಂಬಾನಿ ಫಿಟ್ನೆಸ್ ಎಲ್ಲರ ಕಣ್ಣಿಗೆ ಕುಕ್ಕುತ್ತದೆ. ಇದರ ಹಿಂದಿನ ರಹಸ್ಯ ಒಬ್ಬ ಸೆಲೆಬ್ರಿಟಿ ಟ್ರೇನರ್.‌ ಫಿಟ್ನೆಸ್ ತಜ್ಞ ವಿನೋದ್ ಚನ್ನಾನ ಕತೆ ಮತ್ತು ಟಿಪ್ಸ್‌ ಬಗ್ಗೆ ಕೂಡ ಇಲ್ಲಿದೆ ವಿವರ.

trainer behind the fitness of nita ambani and helped anant amabani to shed 100 kilo bni

ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ದೇಹ ಕೆಲ ವರ್ಷಗಳ ಹಿಂದೆ ಸಿಕ್ಕಾಪಟ್ಟೆ ಊದಿಕೊಂಡಿತ್ತು. ಒಂದು ವರ್ಷದಲ್ಲಿ ಅವರು ನಂಬಲಾಗದಷ್ಟು ತೂಕ ಇಳಿಸಿದ್ದರು. ಕಂಪ್ಲೀಟ್‌ ರೂಪಾಂತರಕ್ಕೆ ಒಳಗಾಗುವ ಮೂಲಕ ಸುದ್ದಿಯಾಗಿದ್ದರು. ಸುಮಾರು 208 ಕೆಜಿ ತೂಕ ಇದ್ದ ಅನಂತ್‌ ಅಂಬಾನಿ ಅವರು ತಮ್ಮ ಫಿಟ್ನೆಸ್ ತರಬೇತುದಾರನ ಸಹಾಯದಿಂದ 108 ಕೆಜಿ ಕಡಿಮೆ ಮಾಡಿಕೊಂಡರು. ಅನಂತ್‌ ಇನ್ನೂ ಫಿಟ್‌ನೆಸ್‌ ವಿಷಯದಲ್ಲಿ ಹೋರಾಡುತ್ತಲೇ ಇದ್ದಾನೆ ಎಂಬುದು ನಿಜ. ಆದರೆ ನೀತಾ ಅಂಬಾನಿ ಮಾತ್ರ ತಮ್ಮ ಫಿಟ್‌ನೆಸ್‌, ಅಂದ ಚಂದ ಹಾಗೂ ಫಿಗರ್‌ ಅನ್ನು ಸದಾ ಕಾಪಾಡಿಕೊಂಡು ಬಂದಿದ್ದಾರೆ. ಸೂಕ್ತ ಡಯಟ್‌, ಸರಿಯಾದ ಫಿಟ್‌ನೆಸ್‌ ಎಕ್ಸರ್‌ಸೈಸ್‌ ಇವೆಲ್ಲವುಗಳ ಮೂಲಕ ಅಮ್ಮ- ಮಗ ತಮ್ಮ ದೇಹಗಳನ್ನು ಈಗ ಫಿಟ್‌ ಆಗಿಟ್ಟುಕೊಂಡಿದ್ದಾರೆ. ಹಾಗಾದರೆ ಈ ವಿಷಯದಲ್ಲಿ ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಟ್ರೇನರ್‌ ಯಾರು? 

ಅವರೇ ವಿನೋದ್ ಚನ್ನಾ. ಆರೋಗ್ಯ ಮತ್ತು ಫಿಟ್ನೆಸ್ ತಜ್ಞ ವಿನೋದ್ ಚನ್ನಾ, ಅನಂತ್ ಮಾತ್ರವಲ್ಲದೆ ಅವರ ತಾಯಿ ನೀತಾ ಅಂಬಾನಿಯವರಿಗೂ ಫಿಟ್‌ನೆಸ್‌ ಮಾರ್ಗದರ್ಶನ ನೀಡಿದ್ದಾರೆ. ಚನ್ನಾ ಶಿಫಾರಸು ಮಾಡಿದಂತೆ ಆಹಾರ, ಜೀವನಶೈಲಿ ಹಾಗೂ ಜಿಮ್‌ ವ್ಯಾಯಾಮಗಳ ಬದಲಾವಣೆಗಳ ಸಹಾಯದಿಂದ ನೀತಾ ಸುಮಾರು 18 ಕೆಜಿ ತೂಕ ಇಳಿಸಿಕೊಂಡರು. ಬೊಜ್ಜು, ಅಸ್ತಮಾ ಮತ್ತು ಇತರ ಆರೋಗ್ಯ ಸಮಸ್ಯೆಗಳೊಂದಿಗಿನ ಹೋರಾಟ ಸುಲಭವಲ್ಲ. ಏಕೆಂದರೆ ಇಡೀ ಜೀವನಶೈಲಿಯನ್ನು ಬದಲಾಯಿಸಬೇಕಾಗುತ್ತದೆ. ವಿನೋದ್‌ ಚನ್ನಾ ಹಲವಾರು ಸೆಲೆಬ್ರಿಟಿಗಳಿಗೆ ಹೀಗೆ ಸಹಾಯ ಮಾಡಿದ್ದಾರೆ. 

Latest Videos

ವಿನೋದ್ ಚನ್ನಾ ಅವರ ಕತೆಯೇ ಸ್ವತಃ ಸ್ಫೂರ್ತಿದಾಯಕವಾದದ್ದು. ಒಂದು ಕಾಲದಲ್ಲಿ ಅವರಿಗೇ ಕೆಲವು ದೇಹದ ಸಮಸ್ಯೆಗಳು ಇದ್ದವು. ಮಿತಿ ಮೀರಿದ ದೇಹತೂಕ ಇತ್ತು. ಇಂದು ಅವರು ಸೆಲೆಬ್ರಿಟಿ ಫಿಟ್‌ನೆಸ್ ತಜ್ಞ! ಅವರ ಕ್ಲೈಂಟ್‌ಗಳ ಗಣ್ಯ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಕುಟುಂಬಗಳು ಇವೆ. 61ನೇ ವಯಸ್ಸಿನಲ್ಲಿ ನೀತಾ ಅಂಬಾನಿ ಹೇಗೆ ಫಿಟ್ ಮತ್ತು ಅದ್ಭುತವಾಗಿ ಇರಬೇಕೆಂದು ತಿಳಿದಿರುವುದರ ಹಿಂದೆ ವಿನೋದ್ ಚನ್ನಾ ಪಾತ್ರ ಇದೆ. ತಮ್ಮ ರೂಪಾಂತರದ ಬಗ್ಗೆ ಅವರು ಹೇಳುವುದು ಹೀಗೆ: 

"ನನ್ನ ಬಾಲ್ಯದಲ್ಲಿ ನಾನು ಹೆಚ್ಚಾಗಿ ಕೇಳುತ್ತಿದ್ದ ಕೀಟಲೆ ನನ್ನ ಬೊಜ್ಜಿನ ಬಗ್ಗೆ. ನನ್ನ ದೈನಂದಿನ ಚಟುವಟಿಕೆಗಳಲ್ಲಿ ಅದು ಕಿರಿಕಿರಿ ಉಂಟುಮಾಡುತ್ತಿತ್ತು. ನಾನು ಎಂದಾದರೂ ಅದರಿಂದ ಹೊರಬರಲು ಸಾಧ್ಯವೇ ಎಂದು ಯೋಚಿಸಿದೆ. ದೇಹ ರೂಪಾಂತರದ ಆಲೋಚನೆ ನನ್ನ ಮನಸ್ಸನ್ನು ಆವರಿಸಿತು. ಅದೇ ಮೊದಲ ಮತ್ತು ಅತ್ಯಂತ ಶಕ್ತಿಶಾಲಿ ಪ್ರಚೋದನೆಯಾಗಿತ್ತು.ನನ್ನ ಜೀವನದ ಬಗ್ಗೆ ಎಲ್ಲಾ ಟ್ರೋಲಿಂಗ್, ಅಪಹಾಸ್ಯಗಳನ್ನು ಸಹಿಸಿಕೊಂಡ ನಂತರ, ನಾನಿದ್ದ ಜಾಗದ ಬಳಿಯೇ 5 ರೂಪಾಯಿ ಪಾವತಿಸಿ ಸ್ಥಳೀಯ ಜಿಮ್‌ಗೆ ಹೋದೆ. ಸೊಸೈಟಿ ಮ್ಯಾನೇಜರ್ ಆಗಿ ನನ್ನ ಅರೆಕಾಲಿಕ ಕೆಲಸ ಮುಗಿಸಿ ಬಳಿಕ ಈ ಜಿಮ್‌ಗೆ ಹೋಗುತ್ತಿದ್ದೆ. ಕೆಲವೊಮ್ಮೆ ತಡರಾತ್ರಿಯಲ್ಲಿ ಹೋಗುತ್ತಿದ್ದೆ. ಆದರೆ ಉತ್ತಮ ಆಯ್ಕೆಗಳಿಗಾಗಿ ನನ್ನ ಹುಡುಕಾಟವನ್ನು ಮುಂದುವರಿಸಿದೆ."

ಚನ್ನಾ ಅಧಿಕೃತವಾಗಿ 1994ರಲ್ಲಿ ತಮ್ಮ ದೇಹದಾರ್ಢ್ಯವನ್ನು ಪ್ರಾರಂಭಿಸಿದರು. ಕಠಿಣ ಪರಿಶ್ರಮದ ನಂತರ ಅವರು ತರಬೇತುದಾರರಾಗಿ ತಮ್ಮ ಮೊದಲ ಕೆಲಸವನ್ನು ಪಡೆದರು ಮತ್ತು ಆ ಕ್ಷೇತ್ರದಲ್ಲಿ ಪ್ರಶಂಸೆ ಗಳಿಸಿದರು. ಅವರ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಅವರ ಪರಿಣತಿಯ ಕ್ಷೇತ್ರಗಳು ತೂಕ ತರಬೇತಿ, ದೇಹ ರೂಪಾಂತರ, ಆಹಾರ ನಿರ್ವಹಣೆ, ಪೌಷ್ಟಿಕಾಂಶ ಮಾರ್ಗದರ್ಶನ.

ದೀಪಿಕಾ to ಚೋಪ್ರಾ ಕಾಸ್ಮೆಟಿಕ್ ಬಿಸಿನೆಸ್ ನಡೆಸುತ್ತಿರುವ ನಟಿಯರಿವರು, ನೀವು ಇದನ್ನು ಬಳಸಿದ್ದೀರಾ?

ಉತ್ತಮ ಫಿಟ್‌ನೆಸ್‌ ಹಾಗೂ ಆರೋಗ್ಯಕ್ಕೆ ಚನ್ನಾ ಕೆಲವೇ ಕೆಲವು ಟಿಪ್ಸ್‌ ನೀಡುತ್ತಾರೆ: 

1) ಸಮನ್ವಯ ಇರಲಿ. ಕ್ಯಾಲೋರಿ ಸೇವನೆಯ ಮೇಲೆ ಮಾತ್ರ ಗಮನಹರಿಸುವ ಬದಲು, ನಿಮ್ಮ ದೇಹವನ್ನು ಪೋಷಿಸಲು ಪ್ರೋಟೀನ್‌ಗಳು, ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ಅಗತ್ಯ ಜೀವಸತ್ವಗಳ ಮಿಶ್ರಣ ಅಗತ್ಯ. 

2) ವಯಸ್ಸುಂಟುಮಾಡುವ ಆಹಾರಕ್ಕೆ ನೋ ಎನ್ನಿ. ಸಂಸ್ಕರಿಸಿದ ಮತ್ತು ಜಂಕ್ ಆಹಾರವು ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ. ಈ ಆಹಾರಗಳು ಉರಿಯೂತ, ಆಕ್ಸಿಡೇಟಿವ್ ಒತ್ತಡ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ, ಇವೆಲ್ಲವೂ ಅಕಾಲಿಕ ವಯಸ್ಸಾಗುವಿಕೆಗೆ ಕಾರಣ. ರಿಫೈನ್ಡ್‌ ಆಯಿಲ್‌, ಆಲ್ಕೋಹಾಲ್‌, ಸಕ್ಕರೆ ಪೇಯ, ಫ್ರೈ ಮಾಡಿದ ಹಾಗೂ ಪ್ಯಾಕ್ಡ್‌ ಫುಡ್‌ ಬೇಡ. 

3) ಆಹಾರ ಸೇವಿಸುವಾಗ ಸಂಪೂರ್ಣವಾಗಿ ಗಮನಹರಿಸುವುದು. ನೀವು ಏನು ತಿನ್ನುತ್ತೀರಿ ಎಂಬುದು ಮಾತ್ರವಲ್ಲ, ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯ. ನಿಧಾನವಾಗಿ ಹಾಗೂ ಮಗ್ನತೆಯಿಂದ ತಿನ್ನಿ. ನಿಮ್ಮ ದೇಹದ ಸನ್ನೆಗಳಿಗೆ ಗಮನ ಕೊಡಿ. ನಿಮ್ಮ ಊಟಕ್ಕೆ ಧನ್ಯವಾದ ಸಲ್ಲಿಸಿ. 

ನೋಡೋದಕ್ಕೆ 20ರ ಹುಡುಗಿಯಂತಿರೋ ಈ ಕೋಟ್ಯಾಧಿಪತಿ ಬ್ಯೂಟಿಗೆ 27 ವರ್ಷದ ಮಗ ಇದ್ದಾನಂತೆ!
 

vuukle one pixel image
click me!