ಪುನೀತ್ ರಾಜ್‌ಕುಮಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟ ಖ್ಯಾತ ರಿಯಾಲಿಟಿ ಶೋ ಸ್ಪರ್ಧಿ; ನಿಜಕ್ಕೂ ಎಲ್ಲರೂ ಶಾಕ್
ಪವರ್ ಸ್ಟಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ಯಾರು? ಅಪ್ಪು ಸಿನಿಮಾ ರಿಲೀಸ್ ಸಮಯದಲ್ಲಿ ರಿವೀಲ್ ಅಯ್ತು ಸತ್ಯ....
ಪವರ್ ಸ್ಟಾರ್ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ಯಾರು? ಅಪ್ಪು ಸಿನಿಮಾ ರಿಲೀಸ್ ಸಮಯದಲ್ಲಿ ರಿವೀಲ್ ಅಯ್ತು ಸತ್ಯ....
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಅಂದ್ರೆ ಪುನೀತ್ ರಾಜ್‌ಕುಮಾರ್. ಅಪ್ಪು ಸಿನಿಮಾದಿಂದ ಹಿಡಿದು ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರದವರೆಗೂ ಅವರ ಡ್ಯಾನ್ಸ್ ಸಖತ್ ಆಗಿದೆ.
ಯಾರೇ ಹೊಸ ಸ್ಪೆಷಲ್ ಹಾಕಲಿ ಅದನ್ನು ಕಲಿತು ತಮ್ಮ ಮುಂದಿನ ಚಿತ್ರದ ಹಾಡುಗಳಲ್ಲಿ ಡ್ಯಾನ್ಸ್ ಮಾಡುತ್ತಾರೆ. ಹೀಗಾಗಿ ಅವರ ಡ್ಯಾನ್ಸ್‌ಗೂ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.
ಆದರೆ ಯಾರಿಗಾದರೂ ಗೊತ್ತಿತ್ತಾ ಪುನೀತ್ ರಾಜ್‌ಕುಮಾರ್ ಹಿರಿಯ ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟಿರುವುದು ಯಾರು ಅಂತ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರಗಳು.
ಹೌದು! ಕನ್ನಡ ಕಿರುತೆರೆಯ ಡ್ಯಾನ್ಸರ್, ಇಂಟರ್‌ನ್ಯಾಷನಲ್ ಡ್ಯಾನ್ಸರ್, ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಕಿಶನ್ ಬೆಳಗಲಿ ಅಪ್ಪು ಮಗಳಿಗೆ ಡ್ಯಾನ್ಸ್ ಹೇಳಿಕೊಟ್ಟಿರುವುದು.
ಅಪ್ಪು ಸರ್ ಅಂದ್ರೆನೇ ಡ್ಯಾನ್ಸ್. ನನಗೆ ಡಾನ್ಸ್ ಅಂದ್ರೆ ತುಂಬಾನೇ ಇಷ್ಟ. ಹಲವು ಸಲ ನನಗೆ ತುಂಬಾ ಸ್ಪೆಷಲ್ ಅನಿಸಿದೆ ಹಾಗೂ ಅವರಿಗೆ ಕ್ಲೋಸ್ ಆನಿಸಿದೆ ಎಂದು ಕಿಶನ್ ಮಾತನಾಡಿದ್ದಾರೆ.
ಎಲ್ಲರಿಗೂ ಗೊತ್ತಿದೆ ಇಲ್ವೋ ನಾನು ಮೊದಲು ಡ್ಯಾನ್ಸ್ ಕ್ಲಾಸ್ ಡ್ಯಾನ್ಸ್ ಹೇಳಿಕೊಡಲು ಶುರು ಮಾಡುತ್ತೀನಿ ಅಂತ ಹೇಳಿದಾಗ ಮೊದಲು ಸ್ಟುಡೆಂಟ್ ಆಗಿ ಬಂದಿದ್ದು ಅಪ್ಪು ಸರ್ ಮಗಳು.
ಅಶ್ವಿನಿ ಮೇಡಂ ಮತ್ತು ಪುನೀತ್ ರಾಜ್‌ಕುಮಾರ್ ಸರ್ ಅವರ ಮಗಳನ್ನು ಕಳುಹಿಸಿದ್ದರು. ನನ್ನ ಜರ್ನಿಯಲ್ಲಿ ಅವರು ತುಂಬಾನೇ ಸಪೋರ್ಟಿವ್ ಆಗಿದ್ದಾರೆ. ಅಪ್ಪು ಸಿನಿಮಾ ನೋಡಿದೆ ಮತ್ತೆ ಪ್ರತಿಯೊಂದು ಹಾಡುಗಳನ್ನು ರೀ-ಕ್ರಿಯೇಟ್ ಮಾಡಬೇಕು ಅನಿಸುತ್ತಿದೆ ಎಂದಿದ್ದಾರೆ ಕಿಶನ್.