ಕನ್ನಡ ನಟಿ ಶ್ರೀಲೀಲಾ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್ ಕುರಿತು ಇತ್ತೀಚೆಗೆ ನಟನ ತಾಯಿ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದ. ಇದರ ಬೆನ್ನಲ್ಲೇ ಯುವತಿಯೊಬ್ಬಳು ಓಡೋಡಿ ಬಂದು ಕಾರ್ತಿಕ್ ಆರ್ಯನ್‌ಗೆ ಎಲ್ಲರ ಮುಂದೆ ಪ್ರಪೋಸ್ ಮಾಡಿದ್ದಾಳೆ. ಇಷ್ಟೇ ಅಲ್ಲ ಎಂಗೇಜ್‌ಮೆಂಟ್ ರಿಂಗ್ ಕೂಡ ತೊಡಿಸಿದ್ದಾಳೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.
ಮುಂಬೈ(ಮಾ.21) ಬಾಲವುಡ್ ನಟ ಕಾರ್ತಿಕ್ ಆರ್ಯನ್ ಸ್ಟೈಲೀಶ್ ಹೀರೋ ಮಾತ್ರವಲ್ಲ, ನಟನ ನಗು, ಮಾತುಗಳಿಗೂ ಹಲವು ಫಿದಾ ಆಗಿದ್ದಾರೆ. ಈ ಪೈಕಿ ಮಹಿಳಾ ಫ್ಯಾನ್ ಫಾಲೋವಿಂಗ್ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಕಾರ್ತಿಕ್ ಆರ್ಯನ್‌ಗೆ ಹಲವು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಪ್ರಪೋಸ್ ಮಾಡುತ್ತಲೇ ಇರುತ್ತಾರೆ. ಇದರ ನಡುವೆ ಕಾರ್ತಿಕ್ ಆರ್ಯನ್ ತಾಯಿ ಇತ್ತೀಚೆಗೆ ನಟ ಡೇಟಿಂಗ್ ಮಾಹಿತಿ ಬಹಿರಂಗಪಡಿಸಿದ್ದರು. ಸೂಚ್ಯವಾಗಿ ಕಾರ್ತಿಕ್ ಆರ್ಯನ್, ಕನ್ನಡ ನಟಿ ಶ್ರೀಲೀಲಾ ಜೊತೆ ಡೇಟಿಂಗ್ ನಡೆಸುತ್ತಿರುವುದಾಗಿ ಹೇಳಿದ್ದರು. ಕಾರ್ತಿಕ್ ಆರ್ಯನ್ ಡೇಟಿಂಗ್ ಮಾಹಿತಿಯನ್ನು ಖುದ್ದು ನಟನ ತಾಯಿ ಹೇಳುತ್ತಿದ್ದಂತೆ ಹಲವು ನಟಿಯರು, ಯುವತಿಯರು ಆಘಾತಗೊಂಡಿದ್ದಾರೆ. ಡೇಟಿಂಗ್ ಮಾಹಿತಿ ಗೊತ್ತಾಗುತ್ತಿದ್ದಂತೆ ಯುವತಿಯೊಬ್ಬಳು ಓಡೋಡಿ ಕಾರ್ತಿಕ್ ಆರ್ಯನ್ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಇಷ್ಟೇ ಅಲ್ಲ ನೆರೆದಿದ್ದ ಎಲ್ಲರ ಮುಂದೆ ಪ್ರಪೋಸ್ ಮಾಡಿ, ಕಾರ್ತಿಕ್ ಆರ್ಯನ್ ಬೆರಳಿಗೆ ಎಂಗೇಜ್ಮೆಂಟ್ ಉಂಗುರು ತೊಡಿಸಿದ ಘಟನೆ ನಡೆದಿದೆ.
ಇತ್ತೀಚೆಗೆ ನಡೆದ ಝೀ ಸಿನಿ ಅವಾರ್ಡ್ 2025 ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಕಾರ್ತಿಕ್ ಆರ್ಯನ್ ಪಾಲ್ಗೊಂಡಿದ್ದರು. ಇದಕ್ಕೂ ಕೆಲ ದಿನಗಳ ಮುಂದೆ ಕಾರ್ತಿಕ್ ಆರ್ಯನ್ ತಾಯಿ ಮಗನ ಡೇಟಿಂಗ್ ವಿಚಾರ ಕುರಿತು ಬಾಯ್ಬಿಟ್ಟಿದ್ದರು. ಹೀಗಾಗಿ ಹಲವು ಕಾರ್ತಿಕ್ ಆರ್ಯನ್ ಫಾಲೋವರ್ಸ್ ಬೇಸರಗೊಂಡಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಕಾರ್ತಿಕ್ ಕಾರ್ಯನ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಮಾಡಿದ್ದು 19 ಸಿನಿಮಾ ಗರ್ಲ್‌ಫ್ರೆಂಡ್‌ಗಳದ್ದೇ ದೊಡ್ಡ ಲಿಸ್ಟ್
ಕಾರ್ತಿಕ್ ಆರ್ಯನ್ ಮಹಿಳಾ ಅಭಿಮಾನಿ ಕೂಡ ಇದೇ ಸಿನಿಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸೆಲೆಬ್ರೆಟಿಗಳ ಆಗಮನಕ್ಕೆ ರೆಡ್ ಕಾರ್ಪೆಟ್ ಹಾಸಲಾಗಿತ್ತು. ಕಾರ್ತಿಕ್ ಆರ್ಯನ್ ರೆಡ್ ಕಾರ್ಪೆಟ್ ಮೂಲಕ ನಡೆದು ಬರುತ್ತಿರುವಾಗ ಪಕ್ಕದಲ್ಲಿ ಅಭಿಮಾನಿಗಳು ಜಯಘೋಷ ಹಾಕಿದ್ದರು. ಇದರ ನಡುವೆ ಮಹಿಳಾ ಅಭಿಮಾನಿಯೊಬ್ಬರು ಪ್ಲಕಾರ್ಡ್ ಹಿಡಿದು ನಿಂತಿದ್ದರು. ಕಾರ್ತಿಕ್ ಆರ್ಯನ್ ಮ್ಯಾರಿ ಮಿ ಎಂದು ಬರೆದ ಕಾರ್ಡ್ ಹಿಡಿದು ನಿಂತಿದ್ದರು.
ಕಾರ್ತಿಕ್ ಆರ್ಯನ್ ನಡೆದು ಬರುತ್ತಿದ್ದಂತೆ ಈ ಸೈನ್ ಬೋರ್ಡ್ ಗಮನಿಸಿದ್ದಾರೆ. ಬಳಿಕ ಮಹಿಳಾ ಅಭಿಮಾನಿ ಬಳಿಗೆ ಕಾರ್ತಿಕ್ ಆರ್ಯನ್ ಬಂದಿದ್ದಾರೆ. ಈ ವೇಳೆ ಮಂಡಿಯೂರಿದ ಮಹಿಳಾ ಅಭಿಮಾನಿ ಮ್ಯಾರಿ ಮಿ ಎಂದು ಪ್ರಪೋಸ್ ಮಾಡಿದ್ದಾರೆ. ಇಷ್ಟೇ ಅಲ್ಲ ತಂದಿದ್ದ ಗೋಲ್ಡ್ ರಿಂಗ್‌ನ್ನು ಕಾರ್ತಿಕ್ ಆರ್ಯನ್ ಬೆರಳಿಗೆ ತೊಡಿಸಿದ್ದಾರೆ. ಈ ವೇಳೆ ನೆರೆದಿದ್ದ ಅಭಿಮಾನಿಗಳು, ಇತರ ಸೆಲೆಬ್ರೆಟಿಗಳು ಚಪ್ಪಾಳೆ ತಟ್ಟಿದ್ದಾರೆ.
ಕಾರ್ತಿಕ್ ಆರ್ಯನ್ ಮಹಿಳಾ ಅಭಿಮಾನಿಯನ್ನು ಮಾತನಾಡಿಸಿ ಆಕೆಯನ್ನು ತಬ್ಬಿಕೊಂಡಿದ್ದಾರೆ. ಬಳಿಕ ಮಹಿಳಾ ಅಭಿಮಾನಿ ಹಾಕಿದ ರಿಂಗ್‌ನ್ನು ಕಾರ್ತಿಕ್ ಆರ್ಯನ್ ಮರಳಿ ನೀಡಿದ್ದಾರೆ. ಅಭಿಮಾನಿಯ ಪ್ರೀತಿಯನ್ನು ಗೌರವಿಸಿದ ಕಾರ್ತಿಕ್ ಆರ್ಯನ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
23 ವರ್ಷದ ಕನ್ನಡ ನಟಿಯನ್ನು ಪ್ರೀತಿಸ್ತಿದ್ದಾರಾ ಬಾಲಿವುಡ್ ನಟ Kartik Aaryan? ವೈರಲ್ ವಿಡಿಯೋದಲ್ಲಿ ಇದ್ದವರಾರು?