ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ಹೊರ ಬಂದ ನಟಿ; ಪ್ರಮುಖ ಪಾತ್ರದ ಬದಲಾವಣೆಗೆ ವೀಕ್ಷಕರು ಶಾಕ್!

Shravani Subramanya Serial: ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ನಟಿ ಹೊರಬಂದಿದ್ದು, ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಪ್ರಮುಖ ಪಾತ್ರದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಕಾರಣಾಂತರಗಳಿಂದ ನಟಿ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ ಎಂಬ  ಮಾತುಗಳು ಕೇಳಿ ಬರುತ್ತಿವೆ.

Actress Harshitha who left the serial Shravani Subramanya mrq

Kannada Serial Shravani Subramanya: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯ ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದೆ.  ಶ್ರಾವಣಿ ಮತ್ತು ಸುಬ್ರಮಣ್ಯ ಮದುವೆ ಸಂಚಿಕೆ ವೇಳೆ ನಂಬರ್ 1 ಧಾರಾವಾಹಿಯಾಗಿ ಹೊರಹೊಮ್ಮಿತ್ತು. ಸದ್ಯ ಹೊಸ ತಿರುವುಗಳೊಂದಿಗೆ ಧಾರಾವಾಹಿ ಪ್ರಸಾರವಾಗುತ್ತಿದ್ದು, ಪ್ರೇಕ್ಷಕರನ್ನು ತನ್ನತ್ತ ಹಿಡಿದಿಟ್ಟುಕೊಂಡಿದೆ. ಮದುವೆಯಿಂದ ಮಗನ ಮೇಲೆ ವಿಶಾಲಕ್ಷಿ ಕೋಪಿಸಿಕೊಂಡಿದ್ದಳು. ಇದೀಗ ಕುಕ್ಕೆ ಸುಬ್ರಮಣ್ಯನ ಸನ್ನಿಧಾನದಲ್ಲಿ ತಾಯಿ ಮತ್ತು ಮಗ ಒಂದಾಗಿದ್ದಾರೆ. ಶ್ರಾವಣಿ ಮತ್ತು ಅನಂತ ಪದ್ಮನಾಭನ ಉಪಾಯದಿಂದ ಸುಬ್ಬು ಮತ್ತು ವಿಶಾಲಕ್ಷಿ ಒಂದಾಗಿದ್ದಾರೆ. ಕುಕ್ಕೆಯಿಂದ ಎಲ್ಲರೂ ಹಿಂದಿರುಗಿ ಬರೋವಷ್ಟರಲ್ಲಿ ಧಾರಾವಾಹಿಯ ಪ್ರಮುಖ ಪಾತ್ರವೇ ಬದಲಾಗಿದ್ದು, ದಿಢೀರ್ ಬದಲಾವಣೆಗೆ ವೀಕ್ಷಕರು ಸಹ ಶಾಕ್ ಆಗಿದ್ದಾರೆ.

ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಆರಂಭದಿಂದಲೂ ನಾಯಕ ನಟ ಧನಲಕ್ಷ್ಮೀ ಪಾತ್ರದಲ್ಲಿ ನಟಿ ಹರ್ಷಿತಾ ನಟಿಸಿದ್ದರು.  ಇದೀಗ ಹರ್ಷಿತಾ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಹೊಸ  ನಟಿಯ ಪರಿಚಯ ಮಾಡಲಾಗಿದೆ. ಕಾರಣಾಂತರಗಳಿಂದ ಹರ್ಷಿತಾ ಹೊರ ಬಂದಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಲರ್ಸ್ ಕನ್ನಡ  ವಾಹಿನಿಯ  'ಲಕ್ಷ್ಮೀ ಬಾರಮ್ಮಾ' ಧಾರಾವಾಹಿಯ ಗಂಗಾ ಪಾತ್ರದಲ್ಲಿ ಹರ್ಷಿತಾ ನಟಿಸುತ್ತಿದ್ದರು. ಆರಂಭದಲ್ಲಿ ಜಗಳ ಮಾಡಿಕೊಂಡು ಧಾರಾವಾಹಿಯಿಂದ ಹೊರ ಬಂದ್ರೂ ಎಂದು ಹೇಳಲಾಗಿತ್ತು. ಇದಕ್ಕೆ ಇನ್‌ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದರು. 

Latest Videos

ಶ್ರಾವಣಿ ಸುಬ್ರಮಣ್ಯ ಹಾಗೂ ರಾಧಿಕಾ ಧಾರಾವಾಹಿಯಲ್ಲಿ ಪಾತ್ರ ಮಾಡ್ತಾ ಇದ್ದರೂ ಇಲ್ಲಿಗೆ ಸಮಯ ಹೆಚ್ಚು ಕೊಟ್ಟೆ. ಆದರೂ ರಿಪ್ಲೇಸ್ ಗೆ ಹುಡುಕುತ್ತಾ ಇದ್ದರು. ನನ್ನಿಂದ ಅವರಿಗೂ ತೊಂದರೆ ಆಗುವುದು ಬೇಡ ಅಂತ ಹೇಳಿ ಪಾತ್ರದಿಂದ ಹೊರಗೆ ಬಂದೆ. ಒಂದು ಮಾತು ಹೇಳಿ ಪಾತ್ರದ ಬದಲಾವಣೆ ಮಾಡಬಹುದಿತ್ತು ಎಂದು ಹರ್ಷಿತಾ ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಇದನ್ನೂ ಓದಿ: ಬೆಸ್ಕಾಂ ಕೃಪೆಯಿಂದ ಸಬ್ಬುಗೆ ಸಿಕ್ತು ಶ್ರಾವಣಿಯ ಸಿಹಿ ಚುಂಬನ; ವಿಶಾಲಕ್ಷಿ ಶಾಕ್, ಪದ್ಮನಾಭ್ ಫುಲ್ ಖುಷ್!

ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಿಂದ ಹೊರ ಬಂದ ಬಳಿಕ ಶ್ರಾವಣಿ ಸುಬ್ರಮಣ್ಯದಲ್ಲಿ ಸಕ್ರಿಯವಾಗಿದ್ದರು. ಧಾರಾವಾಹಿ ಉತ್ತಮ ಟಿಆರ್‌ಪಿ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹರ್ಷಿತಾ ಅವರ ಬದಲಾವಣೆಯಾಗಿದೆ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ಹೊರಗೆ ಬಂದಿದ್ದು ಯಾಕೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ಶ್ರಾವಣಿಯನ್ನು ಸೊಸೆ ಅಂತ ಒಪ್ಪಿಕೊಳ್ಳಲ್ಲ
ಕುಕ್ಕೆ ಕ್ಷೇತ್ರದಲ್ಲಿ ಮಗ ಸುಬ್ಬು ಮತ್ತು ತಾಯಿ ವಿಶಾಲಕ್ಷಿ ಒಂದಾಗಿದ್ದಾರೆ. ಜೊತೆಯಾಗಿಯೇ ನಾಲ್ಕು ಜನರು ಬಂದಿರೋದನ್ನು ಕಂಡ ಕಾಂತಮ್ಮ, ಏನೇ ವಿಶಾಲವಾದ ಅಕ್ಷಿ ಶ್ರಾವಣಿಯನ್ನು ಸೊಸೆ ಎಂದು ಒಪ್ಪಿಕೊಂಡೆಯಾ ಎಂದು ಕೇಳಿದ್ದಾಳೆ. ನನಗೆ ಮಗ ಸಿಕ್ಕಿದ್ದಾನೆ.  ನಾನು ಯಾರನ್ನು ಸಹ ಸೊಸೆ ಎಂದು ಒಪ್ಪಿಕೊಳ್ಳಲ್ಲ ಎಂದು ವಿಶಾಲಕ್ಷಿ ಹೇಳಿದ್ದಾಳೆ. ಮತ್ತೊಂದೆಡೆ  ವೀರೇಂದ್ರ ದೇಸಾಯಿಯೇ ಫೋನ್ ಮಾಡಿ ಮಗಳು ಶ್ರಾವಣಿಯನ್ನು ಮನೆಗೆ ಕರೆದಿದ್ದಾನೆ.

ಇದನ್ನೂ ಓದಿ: ಶ್ರಾವಣಿ ಸುಬ್ರಮಣ್ಯ ನಿರ್ದೇಶಕರಿಗೆ ಲಲಿತಾ ದೇವಿ ಆರೋಗ್ಯದ ಕಾಳಜಿ ಇಲ್ಲವಾ? ಅಜ್ಜಿಯೇ ಇಷ್ಟು ಗಟ್ಟಿನಾ?

vuukle one pixel image
click me!