ಅನುಮಾನವೇ ಇಲ್ಲ, ತಾಯಂದಿರೆಲ್ಲರೂ ಸುಂದರಿಯರೇ
ಹೌದು, ನಾವು ತಾಯಂದಿರು ಎಲ್ಲ ಶೇಪ್‌ಗಳು, ಎಲ್ಲ ಸೈಜ್‌ಗಳಲ್ಲಿ ಬರುತ್ತೇವೆ. ತೂಕ ಹೆಚ್ಚಾಗದೆ ತಾಯಿಯಾಗಲು ಸಾಧ್ಯವೇ? ಆದರೆ, ಉತ್ತಮ ತಾಯಿ ಎಂದ ಮೇಲೆ ಆಕೆ ಕಪ್ಪಗಿರಲಿ, ದಪ್ಪಗಿರಲಿ, ವಯಸ್ಸು, ವೃತ್ತಿ, ರಿಲೇಶನ್‌ಶಿಪ್ ಸ್ಟೇಟಸ್ ಎಲ್ಲದರ ಹೊರತಾಗಿಯೂ ಆಕೆ ಸುಂದರಿಯೇ ಎಂಬುದಕ್ಕೆ ಎರಡು ಮಾತಿಲ್ಲ.
ಇತ್ತೀಚೆಗೆ ಟ್ವಿಟ್ಟರ್‌ನಲ್ಲೊಂದು ಟ್ರೆಂಡ್ ಸೃಷ್ಟಿಯಾಗಿತ್ತು ಸಂತೂರ್ ಮಾಮ್‌ಗಳದ್ದು. ಅಂದರೆ, ಸಂತೂರ್ ಜಾಹೀರಾತಿನಲ್ಲಿ ಬರುವ ಮಗುವಿದ್ದೂ ಬೊಜ್ಜಿಲ್ಲದೆ, ಚಿರಯೌವನೆಯಂತೆ ಕಾಣುವ ತಾಯಿಯಂತೆ ತಾವಿನ್ನೂ ಮಗುವಾದರೂ ಹೀಗಿದ್ದೇವೆ ನೋಡಿ ಎಂದು ತೋರಿಕೊಳ್ಳುವ ಫೋಟೋಗಳು. ಆದರೆ, ಮಗುವಿನಂಥ ಅತ್ಯದ್ಭುತ ಸಂಗತಿಯೊಂದನ್ನು ಹೆರಬಹುದಾದ ಸಾಮರ್ಥ್ಯ ಹೊಂದಿದೆ ಎಂದರೆ- ಅಂಥದೊಂದು ದೇಹವೇ ಸೌಂದರ್ಯ, ಅದ್ಭುತಗಳ ಸಮಾಗಮವಲ್ಲವೇ? ಆ ಸೌಂದರ್ಯಕ್ಕೊಂದು ಮಾನದಂಡದ ಅಗತ್ಯವಿದೆಯೇ?
ತಾಯಂದಿರೆಲ್ಲ ಸುಂದರಿಯರೇ
ಅವರನ್ನು ಸುಂದರಗೊಳಿಸಲು ಯಾವ ಸಾಬೂನು, ಶಾಂಪೂ, ಪೌಡರ್ ಇತ್ಯಾದಿಗಳ ಅಗತ್ಯವಿಲ್ಲ. ಮಗು ಹೆರುವುದೆಂದರೇನು ಸುಲಭದ ಮಾತಲ್ಲವಲ್ಲ. ಹೊಟ್ಟೆ ದೊಡ್ಡದಾಗಲೇಬೇಕು, ಹೊಲಿಗೆ ಬೀಳಲೇಬೇಕು, ಸ್ಟ್ರೆಚ್ ಮಾರ್ಕ್ ಉಳಿಯಲೇಬೇಕು, ಸೊಂಟ ಅಗಲವಾಗಲೇಬೇಕು, ಮಗುವನ್ನು ಪೋಷಿಸಲು ಶಕ್ತಿ ಪಡೆಯಲು ದೇಹ ದಪ್ಪಗಾಗಬೇಕು, ಅಲ್ಲಲ್ಲಿ ಕಪ್ಪುಕಲೆಗಳಾಗಬಹುದು. ಇನ್ನು ಮಗು ಹುಟ್ಟಿದ ಬಳಿಕ ನಿದ್ದೆಗೆಟ್ಟು ಕಣ್ಣಿನ ಸುತ್ತ ಕಪ್ಪಾಗುವುದು, ಸೆಲ್ಫ್ ಕೇರ್‌ಗೆ ಸಮಯ ಸಿಗದೆ ಕೂದಲು, ತ್ವಚೆ ಮಂಕಾಗುವುದು, ಬೇಕೆಂದ ಬಟ್ಟೆ ಧರಿಸಲಾಗದೆ ಸೌಂದರ್ಯ ಮೆರೆಸಲಾಗದಿರುವುದೆಲ್ಲವೂ ಸಾಮಾನ್ಯ. ಅವೆಲ್ಲವೂ ಅವಳೆಷ್ಟು ಉತ್ತಮ ತಾಯಿ ಎಂಬುದರ ಸೂಚನೆಗಳೇ ಹೊರತು ಅವುಗಳಿಂದ ಸೌಂದರ್ಯ ಅಳೆಯಲಾಗದು.
ಸ್ವಿಮಿಂಗ್ ಫೂಲ್‌ನಲ್ಲಿ ಪ್ರಬಲ ವೀರ್ಯಾಣು ಇದ್ರೆ ಮಹಿಳೆ ಪ್ರಗ್ನೆಂಟ್!...
ಹೌದು, ನಾವು ತಾಯಂದಿರು ಎಲ್ಲ ಶೇಪ್‌ಗಳು, ಎಲ್ಲ ಸೈಜ್‌ಗಳಲ್ಲಿ ಬರುತ್ತೇವೆ. ತೂಕ ಹೆಚ್ಚಾಗದೆ ತಾಯಿಯಾಗಲು ಸಾಧ್ಯವೇ? ಆದರೆ, ಉತ್ತಮ ತಾಯಿ ಎಂದ ಮೇಲೆ ಆಕೆ ಕಪ್ಪಗಿರಲಿ, ದಪ್ಪಗಿರಲಿ, ವಯಸ್ಸು, ವೃತ್ತಿ, ರಿಲೇಶನ್‌ಶಿಪ್ ಸ್ಟೇಟಸ್ ಎಲ್ಲದರ ಹೊರತಾಗಿಯೂ ಆಕೆ ಸುಂದರಿಯೇ ಎಂಬುದಕ್ಕೆ ಎರಡು ಮಾತಿಲ್ಲ.
ಆರೋಗ್ಯವೇ ಸೌಂದರ್ಯ
ಇಷ್ಟೆಲ್ಲ ಆದ ಮೇಲೂ ದೇಹದ ಫಿಟ್ನೆಸ್ ನಿಭಾಯಿಸಿ, ಆರೋಗ್ಯವಾಗಿಟ್ಟುಕೊಳ್ಳುವುದು, ತಾಯಿಯಾದ ಮೇಲೂ ಮಾಮ್‌ನಂತೆ ಕಾಣಿಸುವುದಿಲ್ಲ ಎಂದು ಹೇಳಿಸಿಕೊಳ್ಳುವುದು ಮೆಚ್ಚುವ ಸಂಗತಿಯೇ. ಹಾಗಂಥ ಇದನ್ನು ಮೆಚ್ಚುವ ಭರದಲ್ಲಿ ಉಳಿದ ತಾಯಂದಿರಿಗೆ ಕೀಳರಿಮೆ ಉಂಟಾಗುವಂತೆ ಮಾಡಬಾರದಲ್ಲ... ಸೋಷ್ಯಲ್ ಮೀಡಿಯಾಗಳನ್ನು ನಾವು ಬಳಸುವ ರೀತಿಯಿಂದ ನಮಗೂ ಮತ್ತೊಬ್ಬರಿಗೂ ಉಪಯೋಗವಾಗಬೇಕೇ ಹೊರತು, ನೇರವಾಗಿಯೋ, ಅನೇರವಾಗಿಯೋ ಮತ್ತೊಬ್ಬರಿಗೆ ಏಜ್ ಶೇಮಿಂಗ್, ಬಾಡಿ ಶೇಮಿಂಗ್ ಮಾಡಿ, ಗೊತ್ತೊ ಗೊತ್ತಿಲ್ಲದೆಯೋ ಅವರ ಮನಸ್ಸನ್ನು ಘಾಸಿಗೊಳಿಸುವಂತಾಗಬಾರದು. ಈ ವೇದಿಕೆಯಲ್ಲಿ ಆರೋಗ್ಯಕರ ದೇಹ, ಮನಸ್ಸು ಹಾಗೂ ಚಿಂತನೆಗಳನ್ನು ನಾವು ಎಷ್ಟು ಬೇಕಾದರೂ ಶೋ ಆಫ್ ಮಾಡಬಹುದು. ಏಕೆಂದರೆ ಆರೋಗ್ಯವೇ ಸೌಂದರ್ಯ.
ಗಂಡ ಕೊಡೋ ಆ ಒಂದು ಏಟು ಯಾವತ್ತೂ 'ಕೇವಲ ಒಂದೇಟು' ಆಗಿರೋಲ್ಲ......
ನಮ್ಮ ಮುಖದಲ್ಲಿ ಸುಕ್ಕು ಕಾಣಿಸಿತೆಂದು, ತಲೆಕೂದಲು ಬಿಳಿಯಾಯಿತೆಂದು, ಸೊಂಟದಲ್ಲಿ ಬೊಜ್ಜು ತುಂಬಿತು, ನಿತಂಬ ಅಗಲವಾಗುತ್ತಿದೆ ಎಂದು ನಮ್ಮ ಮಕ್ಕಳು ನಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸಲಾರರು. ಅವರಿಗೆ ನಾವೇ ಪ್ರಪಂಚ. ದೇಹ ಬದಲಾಗುತ್ತದೆ, ಬೆಳೆಯುತ್ತದೆ... ನಾವೆಲ್ಲರೂ ‘ನಾರ್ಮಲ್’ ಎಂದು ಕರೆಯುವಂಥ ದೇಹಕ್ಕೆ ಮತ್ತೆ ಮತ್ತೆ ಹಿಂದಿರುಗಲು ಯಾವುದೇ ಡಿಫಾಲ್ಟ್ ಬಟನ್ ಇಲ್ಲ. ಬದಲಾವಣೆ ನಮ್ಮ ಅನುಭವಗಳ ಸಂಕೇತ, ಬೆಳವಣಿಗೆಯ ಪ್ರತೀಕ, ಮೆಚುರಿಟಿಯ ಸೂಚಕ.
ಇಂದಿನ ಜೀವನಶೈಲಿಯಲ್ಲಿ ಒತ್ತಡ, ನ್ಯೂಟ್ರಿಶನ್, ಪರಿಸರ ಎಲ್ಲವೂ ನಮ್ಮ ಚರ್ಮದ ಮೇಲೆ ದಾಳಿ ಮಾಡುತ್ತವೆ. ಅದನ್ನು ರಿವರ್ಸ್ ಮಾಡಲು ಯಾವ ಸಾಬೂನು ಅಥವಾ ಕಾಸ್ಮೆಟಿಕ್‌ಗಳಿಂದಾಗದು. ಅದನ್ನು ಒಪ್ಪಿಕೊಂಡು ಬದುಕುವುದು ಜಾಣತನ. ಅದು ಬಿಟ್ಟು ವಯಸ್ಸಿಗೆ ತಕ್ಕುದಲ್ಲದ ಐಡಿಯಲ್ ಮದರ್, ಡಾಟರ್, ಸಿಸ್ಟರ್, ವೈಫ್ ಇತ್ಯಾದಿ ಪಾತ್ರಗಳನ್ನು ಮಾಡೆಂಬ ಸಮಾಜದ ಅತಿಯಾದ ನಿರೀಕ್ಷೆಗಳನ್ನು ತಣಿಸಲು ಹೋದರೆ ದುಃಖ, ಅಸಮಾಧಾನ ಕಟ್ಟಿಟ್ಟ ಬುತ್ತಿ.
ಹೇಗೆ ಯಂಗ್ ಕಾಣುವುದೆಂದು ಹೇಳುವ ಜಗತ್ತಿಗೆ ಜಾಣಕಿವುಡು ಪ್ರದರ್ಶಿಸೋಣ. ವೈನ್‌ನಂತೆ ವರ್ಷಗಳು ಕಳೆದಂತೆಲ್ಲ ಅನುಭವದ ಮೂಸೆಯಲ್ಲಿ ಬೆಳವಣಿಗೆ ಕಾಣುವತ್ತ ಗಮನ ಹರಿಸೋಣ. ಒಳ್ಳೆಯ ಬದಲಾವಣೆಗಳಿಗೆ ಕಾರಣವಾಗುವಂಥ ವಿಷಯಕ್ಕೆ ಹ್ಯಾಷ್‌ಟ್ಯಾಗ್ ಬಳಸೋಣ. ದಶಕಗಳಿಂದಲೂ ಯಂಗ್ ಆಗಿಸುವ ಕತೆ ಕಟ್ಟುತ್ತಾ ಮಾರ್ಕೆಟಿಂಗ್ ಮಾಡುತ್ತಿರುವ ಸೌಂದರ್ಯದ ಸುಳ್ಳು ಆಮಿಷಗಳಿಗೆ ಬಲಿಯಾಗದೆ, ಗುಣ, ಅನುಭವ, ನಡೆನುಡಿಗಳಲ್ಲಿ ಸೌಂದರ್ಯ ಹುಡುಕುವ ಮೆಚುರಿಟಿ ಪಡೆಯೋಣ.