ಮಿಸ್ಟರ್ ಬೀಸ್ಟ್ ಎಂದೇ ಫೇಮಸ್ ಆಗಿರೋ ಯೂಟ್ಯೂಬರ್ ಜಿಮ್ಮಿ ಡೊನಾಲ್ಡ್‌ಸನ್ ಚಿತ್ರ ವಿಚಿತ್ರ ವಿಡಿಯೋ ಶೇರ್ ಮಾಡುತ್ತಾನೆ. ಈ ಬಾರಿ ತಾನೇ ಶವ ಪೆಟ್ಟಿಗೆಯೊಳಗೆ ಮಲಗಿ, ಗೆಳೆಯರಿಂದ ಮಣ್ಣು ಮುಚ್ಚಿಸಿಕೊಂಡು ಏನು ಅವಾಂತರ ಮಾಡಿದ್ದಾನೆ ನೋಡಿ.

ಎಂಥೆಂಥವೋ ವಿಚಿತ್ರ, ಅಪಾಯಕಾರಿ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡೋ ಈತ ಇಂಥಹ ಮಂಗಾಟಗಳಿಂದ 30 ಮಿಲಿಯನ್‌ನಷ್ಟು ವ್ಯೂಸ್ ಪಡೆಯುತ್ತಿದ್ದ. ಆದರೆ ಈ ಬಾರಿ ಸ್ವಲ್ಪ ದೊಡ್ಡದಾಗಿ ಮಾಡಿದ. ಈತನ ಕೆಲವು ವಿಡಿಯೋ 100 ಮಿಲಿಯನ್ ವ್ಯೂಸ್ ಕೂಡಾ ಗಳಿಸಿದೆ.

ಇನ್ನೇನು ಮಗನ ಮದ್ವೆಯಾಗಿಬಿಡ್ತು ಅನ್ನುವಷ್ಟರಲ್ಲಿ, ವಧು ತನ್ನ ಮಗಳೇ ಎಂಬುದು ಗೊತ್ತಾಯ್ತು

ಈತ ಮಿಸ್ಟರ್ ಬೀಸ್ಟ್ ಬರ್ಗರ್ಸ್ ಎಂಬ ಚೈನ್ ರೆಸ್ಟೋರೆಂಟ್ ಆರಂಭಿಸಿದ್ದ. ಇದರಲ್ಲಿ ತಿನ್ನೋದಕ್ಕಾಗಿ ಜನರಿಗೆ ಹಣ, ಉಚಿತ ಐಪಾಡ್, ಏರ್‌ಪಾಡ್ಸ್ ಕೂಡಾ ನೀಡುತ್ತಿದ್ದ. ಇತ್ತೀಚಿನ ಸ್ಟಂಟ್‌ ಮೂಲಕ ಈತನ ವಿಡಿಯೋ 51 ಮಿಲಯನ್ ವ್ಯೂಸ್ ಪಡೆದಿದೆ. ಈತಶವಪೆಟ್ಟಿಗೆಯೊಳಗೆ ಮಲಗಿ ಗೆಳೆಯರನ್ನು ತನ್ನನ್ನು ಹೂಳಲು ಹೇಳಿದ್ದಾನೆ. ಈ ವಿಡಿಯೋಗೆ 57 ಮಿಲಿಯನ್ ವ್ಯೂಸ್ ಬಂದಿದೆ.

50 ಗಂಟೆ ಶವಪೆಟ್ಟಿಗೆಯೊಳಗಿದ್ದ ಈತ ತನ್ನ ಅನುಭವವನ್ನು ಶೇರ್ ಮಾಡಿದ್ದಾನೆ. ಇಷ್ಟು ಹೊತ್ತು ಮೂತ್ರ ಮಾಡಲಾಗದೆ ಕಷ್ಟಪಟ್ಟಿದ್ದನ್ನೂ ಹೇಳಿದ್ದಾನೆ. ಹಾಗೆಯೇ ಗೆಳೆಯರೊಂದಿಗೆ ಮಾತನಾಡುತ್ತಿದ್ದೆ ಎಂದೂ ಹೇಳಿದ್ದಾನೆ. ವ್ಯೂಸ್‌ಗಾಗಿ ಏನೇನು ಮಾಡ್ತಾರೆ ನೋಡಿ..!