ಯೂಟ್ಯೂಬ್ ಸ್ಟಾರ್‌ನನ್ನು ಬೆನ್ನಟ್ಟಿ ದೋಚಿದ ಕೋತಿಗಳು... ವಿಡಿಯೋ ನೋಡಿ
- ಯೂಟ್ಯೂಬ್ ಸ್ಟಾರ್‌ನ ಬೆನ್ನಟಿದ ಕೋತಿಗಳು
- ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಘಟನೆ
- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಕೋತಿಗಳು ಚೇಷ್ಟೆ ಮಾಡುವುದರಲ್ಲಿ ಎತ್ತಿದ ಕೈ. ಹೀಗೆ ಕೋತಿ ಕೈಗೆ ಸಿಲುಕಿದ ಯೂಟ್ಯೂಬ್ ಸ್ಟಾರ್ ಓರ್ವನ ಫಜೀತಿ ನೋಡಿ... ಯೂಟ್ಯೂಬ್ ಸ್ಟಾರ್ ಲೊಗನ್ ಪಾಲ್‌ನನ್ನು ಬೆನ್ನಟ್ಟಿದ ಕೋತಿಗಳು ಆತನ ಬ್ಯಾಗ್ ಕಿತ್ತಾಡಿ ದರೋಡೆ ಮಾಡಿವೆ. ಈ ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2.7 ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋ ವೀಕ್ಷಿಸಿದ್ದಾರೆ.
ಲೊಗನ್ ಪಾಲ್ ಇತ್ತೀಚೆಗೆ ದಕ್ಷಿಣ ಆಫ್ರಿಕಾ (South Africa) ಪ್ರವಾಸ ಕೈಗೊಂಡಿದ್ದರು. ಈ ವೇಳೆ ಕೋತಿಗಳ ಗುಂಪೊಂದು ಲೊಗನ್ ಪಾಲ್‌ಗೆ ಎದುರಾಗಿದ್ದು, ಕಿರುಕುಳ ನೀಡಲು ಶುರು ಮಾಡಿವೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ (Cape Town) ನಗರದಲ್ಲಿ 26 ವರ್ಷದ ಈ ಲೊಗನ್ ಪಾಲ್ ಮಂಗಗಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಲೊಗನ್ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಕಂಟೆಂಟ್‌ನ್ನು ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಎರಡು ಕೋತಿಗಳು ಅವರಿಗೆ ಎದುರಾಗಿವೆ.
ಬೆತ್ತಲೆ ದೇಹದ ಸ್ಟಾರ್‌ನ ರುಚಿಕರ ಅಡುಗೆ!
ವೈರಲ್ ವೀಡಿಯೋದಲ್ಲಿ, ಯೂಟ್ಯೂಬರ್‌ನ ದುಬಾರಿ ಕ್ಯಾಮೆರಾವನ್ನು ಮಂಗವೊಂದು ಹಿಡಿದುಕೊಂಡಿರುವುದನ್ನು ಕಾಣಬಹುದು. ಒಂದು ಕೋತಿ ಆತನ ಬ್ಯಾಗಿನೊಳಗೆ ಸಂಪೂರ್ಣ ತಲಾಶ್ ಮಾಡುತ್ತಿದ್ದರೆ. ಈ ವೇಳೆ ಇನ್ನೊಂದು ಕೋತಿ ಬೊಬ್ಬೆ ಹೊಡೆಯುತ್ತಿದ್ದ ಈತನನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿದೆ. ಈ ವೇಳೆ ಬ್ಯಾಗ್ ತಲಾಶ್ ಮಾಡುತ್ತಿದ್ದ ಮಂಗ ಬ್ಯಾಗ್‌ನಲ್ಲಿದ್ದ ಬಾಟಲೊಂದನ್ನು ಹೊತ್ತುಕೊಂಡು ಹೋಗುತ್ತದೆ.
ಈ ವೇಳೆ ಬೊಬ್ಬೆ ಹೊಡೆಯುವ ಲೊಗನ್ ಪಾಲ್ (Logan Paul) ನಾನು ಏನು ಮಾಡಲಿ ಎಂದು ಕ್ಯಾಮರಾಮನ್ ಅನ್ನು ಕೇಳುತ್ತಾನೆ. ಅದಕ್ಕೆ ಕ್ಯಾಮರಾಮನ್ ಅದು ನಿನ್ನ ಕ್ಯಾಮರಾವನ್ನು ಕಸಿದು ಕೊಂಡಿದೆ ಎಂದು ಹೇಳುತ್ತಾನೆ. ವಿಡಿಯೋದ ಕೊನೆಯಲ್ಲಿ ಕೋತಿ ಲೊಗನ್ ಬ್ಯಾಗ್‌ನಿಂದ ಎನರ್ಜಿ ಡ್ರಿಂಕ್‌ನ ಬಾಟಲನ್ನು ಹೊತ್ತೊಯ್ಯುತ್ತದೆ.
Earn Money: ಮನೆಯಲ್ಲೇ ಕುಳಿತು ಯುಟ್ಯೂಬ್ ಮೂಲಕ ಹಣ ಗಳಿಸಿ
ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಇಡೀ ವಿಡಿಯೋ ಲೊಗನ್ ಅವರ ಮಾರ್ಕೆಟಿಂಗ್ ಗಿಮಿಕ್ ಎಂದು ಕೆಲವರು ಟೀಕಿಸಿದ್ದಾರೆ. ಯೂಟ್ಯೂಬರ್ ಆಗಿ ಬದಲಾದ ಲೊಗನ್ ಪಾಲ್ ಮೂಲತಃ ಓರ್ವ ಬಾಕ್ಸರ್, ಕಳೆದ ವರ್ಷ ಜೂನ್‌ನಲ್ಲಿ ಫ್ಲಾಯ್ಡ್ ಮೇವೆದರ್ (Floyd Mayweather) ಅವರೊಂದಿಗಿನ ಪ್ರದರ್ಶನದ ನಂತರ ಬಾಕ್ಸರ್ ಲೋಗನ್ ಪಾಲ್ ತುಲನಾತ್ಮಕವಾಗಿ ಸಣ್ಣ ಪ್ರೊಫೈಲ್ ಅನ್ನು ಇಟ್ಟುಕೊಂಡಿದ್ದಾರೆ. ಎಂಟು ಸುತ್ತಿನ ಈ ಪ್ರದರ್ಶನ ಹೋರಾಟದಲ್ಲಿ ಫ್ಲಾಯ್ಡ್ ಮೇವೆದರ್ ಯೂಟ್ಯೂಬ್ ತಾರೆಯ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು.
ಇತ್ತೀಚೆಗೆ ಮಂಗಗಳು ತಮ್ಮದೇ ಮುಖವನ್ನು ಫೋನ್ ಕ್ಯಾಮರಾದಲ್ಲಿ ತೀವ್ರ ಕುತೂಹಲದಿಂದ ನೋಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬರು ಮಂಗಗಳಿಗೆ ಫೋನ್ ಕ್ಯಾಮರಾವನ್ನು ಆನ್ ಮಾಡಿ ಕೊಟ್ಟಿದ್ದಾರೆ. ಇದನ್ನು ಫೋನ್ ಕೈಗೆ ಸಿಕ್ಕ ಕೂಡಲೇ ಕುತೂಹಲದಿಂದ ನೋಡುವ ಮಂಗಗಳ ಗುಂಪು ಫೋನ್‌ನಲ್ಲಿ ತಮ್ಮಂತೆ ಕಾಣುವ ಪ್ರಾಣಿಯನ್ನು ನೋಡಿ ಫೋನ್‌ನ ಸ್ಕ್ರೀನ್ ಅನ್ನು ಕೈಯಿಂದ ಕೆರೆಯಲು ಶುರು ಮಾಡುತ್ತವೆ. ಬಳಿಕ ಒಂದು ಮಂಗ ಫೋನ್ ಹಿಡಿದು ಫೋನ್‌ನ ಸ್ಕ್ರೀನ್‌ಗೆ ಮುತ್ತು ನೀಡುತ್ತದೆ. ಫೋನ್ ಒಳಗಿರುವವರನ್ನು ಹೊರಗೆ ತರುವುದು ಹೇಗೆ ಎಂಬ ಯೋಚನೆಗೀಡಾದ ಮಂಗಗಳು, ಒಳಗಿರುವ ಮಂಗಗಳಿಗಾಗಿ ಫೋನ್ ಸ್ಕ್ರೀನ್ ಅನ್ನು ಕೆರೆಯುತ್ತಿರುವುದು ನೋಡುವುದಕ್ಕೆ ಮಜಾವಾಗಿದೆ.