Asianet Suvarna News Asianet Suvarna News

Earn Money: ಮನೆಯಲ್ಲೇ ಕುಳಿತು ಯುಟ್ಯೂಬ್ ಮೂಲಕ ಹಣ ಗಳಿಸಿ

ಹಣ ಗಳಿಸಬೇಕೆಂಬುದು ಎಲ್ಲರ ಗುರಿ. ಕೆಲವರು ಹಗಲು-ರಾತ್ರಿ ದುಡಿಯುತ್ತಾರೆ. ಆದ್ರೆ ಆದಾಯ ಮಾತ್ರ ಕಡಿಮೆಯಿರುತ್ತದೆ. ಒಳ್ಳೆಯ ಟ್ಯಾಲೆಂಟ್ ಇದ್ದೂ ಅದು ಪ್ರಯೋಜನಕ್ಕೆ ಬರ್ತಿಲ್ಲ ಎನ್ನುವವರು ನಿಮ್ಮ ಕಲೆಯನ್ನು ಯುಟ್ಯೂಬ್ ನಲ್ಲಿ ಪ್ರದರ್ಶಿಸಿ, ಆರಾಮವಾಗಿ ಹಣ ಗಳಿಸಬಹುದು. 
 

How To Earn Money From Youtube tips here
Author
Bangalore, First Published Jan 28, 2022, 7:51 PM IST

ಆನ್‌ಲೈನ್‌ (Online)ನಲ್ಲಿ ಹಣ (Money) ಗಳಿಸುವ ವಿಷ್ಯಕ್ಕೆ ಬಂದ್ರೆ ಯುಟ್ಯೂಬ್(Youtube) ಹೆಸರು ಪಟ್ಟಿಯಲ್ಲಿ ಮೊದಲಿರುತ್ತೆ. ಯೂಟ್ಯೂಬ್‌ನಲ್ಲಿ ವೀಡಿಯೊ(Video)ಗಳನ್ನು ಅಪ್‌ಲೋಡ್ ಮಾಡುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಯುಟ್ಯೂಬ್ ಚಾನೆಲ್ ಗಳಿವೆ. ಒಳ್ಳೆಯ ಮಾಹಿತಿಯನ್ನು ಜನರಿಗೆ ನೀಡುವ ಯುಟ್ಯೂಬರ್ ಗಳು ಲಕ್ಷಾಂತರ ರೂಪಾಯಿ ಗಳಿಸ್ತಿದ್ದಾರೆ. ಯುಟ್ಯೂಬ್ (YouTube)ನಲ್ಲಿ ಅನೇಕ ವಿಧಾನಗಳ ಮೂಲಕ ಆದಾಯ ಗಳಿಸಬಹುದು. ನೀವು ಮನೆಯಲ್ಲಿಯೇ ಕುಳಿತು,ಬಿಡುವಿನ ಸಮಯದಲ್ಲಿ ಯುಟ್ಯೂಬ್ ಚಾನೆಲ್ ನಡೆಸಬಹುದು. ಇದಕ್ಕೆ ಖರ್ಚು ಕಡಿಮೆ. ಶೂನ್ಯ ಬಂಡವಾಳದಲ್ಲಿ ನೀವು ಈ ಚಾನೆಲ್ ಶುರು ಮಾಡಬಹುದು. ಹೆಚ್ಚೆಚ್ಚು ಪ್ರಸಿದ್ಧಿಗೆ ಬಂದಂತೆ ನಿಮ್ಮ ಗಳಿಕೆ ಹೆಚ್ಚಾಗುತ್ತದೆ. ನಿಮ್ಮ ಪ್ರತಿಭೆಗೆ ಅನುಗುಣವಾಗಿ ವೀಡಿಯೊವನ್ನು ಮಾಡಬೇಕು.ಇದಕ್ಕೆ ಯಾವುದೇ ಪದವಿಯ ಅವಶ್ಯಕತೆಯಿಲ್ಲ.  
ಇಂಟರ್ನೆಟ್‌ನ ಮೂಲಭೂತ ಮಾಹಿತಿಯನ್ನು ಹೊಂದಿರುವ ಯಾರಾದರೂ  ಯುಟ್ಯೂಬ್  ನಿಂದ ಹಣವನ್ನು ಗಳಿಸಬಹುದು. ಯುಟ್ಯೂಬ್ ಹೊಸ ಬಳಕೆದಾರರು ನೀವಾಗಿದ್ದರೆ ಇದನ್ನು ಓದಿ ಮತ್ತು ಯೂಟ್ಯೂಬ್‌ನಿಂದ ಹೇಗೆ ಹಣ ಗಳಿಸಬಹುದು ಎಂಬ ಮಾಹಿತಿ ತಿಳಿದುಕೊಳ್ಳಿ. 

ಯುಟ್ಯೂಬ್ ನಲ್ಲಿ ಗಳಿಕೆ ಶುರುವಾಗ್ಬೇಕೆಂದ್ರೆ ನೀವು 1000 ಸಬ್ಸ್ಕ್ರೈಬ್ ಹೊಂದಿರಬೇಕು. ಜೊತೆಗೆ ನಾಲ್ಕು ಸಾವಿರ ನಿಮಿಷಗಳ ಕಾಲ ನಿಮ್ಮ ವಿಡಿಯೋ ವೀಕ್ಷಣೆಯಾಗಿರಬೇಕು. ಇದನ್ನು ಯುಟ್ಯೂಬ್ ಮೊನಿಟೈಜ್ ಮಾಡುತ್ತದೆ. ಮೊನಿಟೈಜ್ ಆದ್ಮೇಲೆ ನಿಮಗೆ ಗೂಗಲ್ ಆಡ್ಸೆನ್ಸ್ ಜಾಹಿರಾತು ಸಿಗುತ್ತೆ. 

ಯುಟ್ಯೂಬ್ ನಲ್ಲಿ ಅನೇಕ ವಿಧಗಳಲ್ಲಿ ಸುಲಭವಾಗಿ ಹಣ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿರುವುದು ಯುಟ್ಯೂಬ್ ಶಾರ್ಟ್. ಇದ್ರಲ್ಲಿ ಸಣ್ಣ ಸಣ್ಣ ವಿಡಿಯೋಗಳನ್ನು ಹಾಕಲಾಗುತ್ತದೆ.  ಯೂಟ್ಯೂಬ್ ಶಾರ್ಟ್ಸ್ 5 ಟ್ರಿಲಿಯನ್ ವೀಕ್ಷಣೆಗಳ ಗಡಿ ದಾಟಿದೆ. ನೀವೂ ಸಣ್ಣ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಗಳಿಕೆ ಶುರು ಮಾಡಬಹುದು. 

ಅಪ್ಲಿಕಂಟ್ ಮಾರ್ಕೆಟರ್ ರೂಪದಲ್ಲಿಯೂ ಕೆಲಸ ಮಾಡಿ ನೀವು ಹಣ ಗಳಿಸಬಹುದು. ಉತ್ಪನ್ನವನ್ನು ಪ್ರಚಾರ ಮಾಡುವುದು ನಿಮ್ಮ ಕೆಲಸವಾಗಿರುತ್ತದೆ. ಯಾವುದೇ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಅಥವಾ ಪ್ರಚಾರ ಮಾಡುವ ಮೂಲಕ ನೀವು ಯುಟ್ಯೂಬ್ ನಿಂದ ಹಣ ಗಳಿಸಬಹುದು. Amazon ಮತ್ತು eBay ನಂತಹ ಸಾವಿರಾರು ಕಂಪನಿಗಳು ಅಂಗಸಂಸ್ಥೆ ಮಾರ್ಕೆಟಿಂಗ್ ಸೇವೆಗಳನ್ನು ಬಳಸುತ್ತವೆ ಮತ್ತು ಅಂಗಸಂಸ್ಥೆ ಮಾರಾಟಗಾರರಿಗೆ ಆಕರ್ಷಕ ಸಂಬಳ ನೀಡುತ್ತವೆ. 

ವೀಡಿಯೊ ಟ್ಯುಟೋರಿಯಲ್ ಮೂಲಕವೂ ಆದಾಯ ಗಳಿಸಬಹುದು. ನೀವು ಯಾವುದೇ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದರೆ ನಿಮ್ಮ ಅನುಭವವನ್ನು ಯುಟ್ಯೂಬ್ ನಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಚಾನೆಲ್ ಪ್ರಸಿದ್ಧಿ ಪಡೆಯುತ್ತಿದ್ದಂತೆ ನೀವು ಫ್ರೀ ಟಿಪ್ಸ್ ಜೊತೆ ಪೇಯ್ಡ್ ಟಿಪ್ಸ್ ಕೂಡ ನೀಡಬಹುದು.  ಸಮಾಲೋಚನೆ ಮತ್ತು ವಿಮರ್ಶೆ ಮೂಲಕವೂ ನೀವು ಹಣ ಗಳಿಸಬಹುದು. ಸಣ್ಣ ವ್ಯಾಪಾರಸ್ಥರು ತಮ್ಮ ಉತ್ಪನ್ನವನ್ನು ವಿಮರ್ಶೆ ಮಾಡಲು ಬಯಸ್ತಾರೆ. ಅವರ ವಸ್ತುಗಳನ್ನು ವಿಮರ್ಶೆ ಮಾಡುವ ಮೂಲಕ ನೀವು ಹಣ ಗಳಿಸಬಹುದು. ನಿಮ್ಮ ಚಾನೆಲ್ ಎಷ್ಟು ಪ್ರಸಿದ್ಧಿ ಪಡೆದಿದೆ ಎನ್ನುವುದರ ಮೇಲೆ ನಿಮಗೆ ಕಂಪನಿಗಳು ನೀಡುವ ಹಣ ನಿರ್ಧಾರವಾಗುತ್ತದೆ. 

Home Loan EMIs:ಗೃಹ ಸಾಲ ಮರುಪಾವತಿ ತಡವಾದ್ರೆ ಈ ತೊಂದ್ರೆ ತಪ್ಪದು!

ಇತ್ತೀಚಿನ ದಿನಗಳಲ್ಲಿ ಜನರು ಓದಿ ತಿಳಿಯುವುದಕ್ಕಿಂತ ನೋಡಿ ತಿಳಿಯುತ್ತಿದ್ದಾರೆ. ಹಾಗಾಗಿಯೇ ಯುಟ್ಯೂಬ್ ವಿಡಿಯೋಗಳಿಗೆ ಬೇಡಿಕೆ ಹೆಚ್ಚಿದೆ. ನೀವು ಕೂಡ ವಿಡಿಯೋ ಅಪ್ಲೋಡ್ ಮಾಡಬಹುದು. ಕೇವಲ ಕಲಿಕೆ ವಿಷ್ಯವನ್ನು ಮಾತ್ರ ನೀವು ಹೇಳಬೇಕಾಗಿಲ್ಲ. ಡಾನ್ಸ್,ಜೋಕ್,ಸಂಗೀತ ಹೀಗೆ ಮನರಂಜನೆ ವಿಷ್ಯವನ್ನು ಹಂಚಿಕೊಳ್ಳಬಹುದು. ನಿಸರ್ಗ,ನ್ಯೂಸ್,ಸಿನಿಮಾ ಸುದ್ದಿ ಹೀಗೆ ಬೇರೆ ಬೇರೆ ವಿಷ್ಯಗಳನ್ನು ಹಂಚಿಕೊಳ್ಳಬಹುದು. ನೀವು ಈಗಾಗಲೇ ಬ್ಲಾಗರ್ ಆಗಿದ್ದರೆ ಅದನ್ನು ಯುಟ್ಯೂಬ್ ಮೂಲಕ ನೀಡಬಹುದು. ಅನೇಕ ಬ್ಲಾಗರ್,ಯುಟ್ಯೂಬ್ ಮೂಲಕ ಹಣ ಗಳಿಸ್ತಿದ್ದಾರೆ.

LIC Pension Plan:ಈ ಪಾಲಿಸಿಯ ಒಂದು ಪ್ರೀಮಿಯಂ ಪಾವತಿಸಿದ್ರೆ ಸಿಗುತ್ತೆ ಮಾಸಿಕ 12 ಸಾವಿರ ರೂ. ಪಿಂಚಣಿ!

ಸ್ಥಳೀಯ ಮಾರುಕಟ್ಟೆಯಲ್ಲಿರುವ ಅಂಗಡಿ,ಹೊಟೇಲ್ ಗಳನ್ನು ನೀವು ಸಂಪರ್ಕಿಸಿ ಮಾತನಾಡಬಹುದು. ನಿಮ್ಮ ಅಂಗಡಿ,ಉತ್ಪನ್ನಗಳನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ ಪ್ರಚಾರ ಮಾಡುತ್ತೇವೆಂದು ಒಪ್ಪಂದ ಮಾಡಿಕೊಂಡು ನೀವು ಹಣ ಸಂಪಾದಿಸಬಹುದು. 
ಯುಟ್ಯೂಬ್ ನಲ್ಲಿ ಹಣ ಗಳಿಸುವುದು ನಿಮ್ಮ ಟ್ಯಾಲೆಂಟ್ ಮೇಲೆ ನಿಂತಿದೆ. ನೀವು ಯಾವುದೇ ಮಾಹಿತಿ ನೀಡದೆ ಬರೀ ಫೋಟೋ ಅಪ್ಲೋಡ್ ಮಾಡಿದ್ರೂ ಅದನ್ನು ವೀಕ್ಷಿಸುವ ಜನರಿದ್ದಾರೆ. ಜನರು ಏನು ಬಯಸ್ತಾರೆ ಎಂಬುದನ್ನು ನೀವು ಮೊದಲು ತಿಳಿದಿರಬೇಕು.

Follow Us:
Download App:
  • android
  • ios