ಶೀರ್ಷಾಸನ, ಸರ್ವಾಂಗಾಸನ ಎಲ್ಲಾ ಮುಗೀತು, ಈಕೆ ತೋರಿಸ್ತಾಳೆ ಸ್ನೇಕ್ ಯೋಗಾಸನ!
ಶೀರ್ಷಾಸನ, ಸರ್ವಾಂಗಾಸನ, ಭುಜಂಗಾಸನ ಸೇರಿದಂತೆ ಯೋಗ ಆಸನ ನೀವು ಕೇಳಿರುತ್ತೀರಿ. ಇದೀಗ ಹೊಸ ಆಸನವನ್ನು ಯುವತಿ ಪತ್ತೆ ಹಚ್ಚಿದ್ದಾಳೆ. ಇದು ಸ್ನೇಕ್ ಯೋಗಾಸನ. ಇದನ್ನು ಹೇಗೆ ಮಾಡಬೇಕು ಅನ್ನೋದು ಈಕೆ ವಿಡಿಯೋ ಮೂಲಕ ತೋರಿಸಿದ್ದಾಳೆ.
ಅಂತಾರಾಷ್ಟ್ರೀಯ ಯೋಗದಿನಾಚರಣೆಯಿಂದ ಯೋಗ ವಿಶ್ವದೆಲ್ಲೆಡೆ ಪಸರಿಸಿದೆ. ಇದರ ನಡುವೆ ಹಲವು ತಮಗೆ ತೋಚಿದ ಆಸನಗಳನ್ನು ಮಾಡುತ್ತಾ ವಂಚಿಸುತ್ತಿರುವ ಘಟನೆಗಳು ವರದಿಯಾಗಿದೆ. ಇಲ್ಲೊಬ್ಬ ಯುವತಿ ಹೊಸ ಆಸನ ಕಂಡು ಹಿಡಿದ್ದಾಳೆ. ಇದು ಸ್ನೇಕ್ ಯೋಗಾಸನ. ಯೋಗ ಆಸನಗಳ ಬೈಕಿ ಭುಜಂಗಾಸನ ಹೆಚ್ಚು ಕಡಿಮೆ ಹಾವಿನ ರೀತಿ ಮೈ ಬಳಸುವುದಾಗಿದೆ. ಈಕೆಯ ಸ್ನೇಕ್ ಯೋಗಾಸನದಲ್ಲಿ ನಿಜ ಹಾವನ್ನೇ ದೇಹಕ್ಕೆ ಸುತ್ತಿಕೊಂಡು, ಕುತ್ತಿಗೆ ಮೇಲೆ, ದೇಹದ ಮೇಲೆ ಬಿಟ್ಟುಕೊಂಡು ಪದ್ಮಾಸನದಲ್ಲಿ ಕುಳಿತುಕೊಳ್ಳುವುದೇ ಹೊಸ ಆಸನ.
ಕಂಟೆಂಟ್ ಕ್ರಿಯೆಟರ್ ಝೆನ್ ಝಾಂಗ್ ಈ ಯೋಗಾಸನ ಕುರಿತು ಮಾಹಿತಿ ನೀಡಿದ್ದಾರೆ. ಈಕೆ ಯೋಗ ಕೇಂದ್ರಕ್ಕೆ ತೆರಳಿದಾಗ ಇಲ್ಲಿ ಹೊಸ ಯೋಗಾಸನ ಈಕೆಗೆ ಹೇಳಿಕೊಟ್ಟಿದ್ದಾರೆ. ಅದು ಅಕ್ಷರಶ ನೈಜ ಹಾವಿನ ಜೊತೆ ಯೋಗಾಸನ. ಯೋಗ ಕೇಂದ್ರಕ್ಕೆ ತೆರಳಿದ ಝೆನ್ ಯಾಂಗ್ ಬಳಿಕ ಯೋಗಾ ಟೀಚರ್, ಒಂದು ಕಲ್ಲನ್ನು ಆರಿಸುವಂತೆ ಸೂಚಿಸಿದ್ದಾರೆ. ಇದರಂತೆ ಕಲ್ಲು ಆರಿಸಿ ನೀಡಿದ್ದಾರೆ. ಈ ಕಲ್ಲನ್ನು ಸ್ಮರಣಿಕೆಯಾಗಿ ಯೋಗ ಕೇಂದ್ರದಲ್ಲಿ ಇಡಲಾಗುತ್ತದೆ. ಬಳಿಕ ಯೋಗಾಸನ ಆರಂಭಗೊಳ್ಳುತ್ತದೆ.
ಈ ಯೋಗಾಸನ ಮಹಿಳೆಯರಿಗೆ ಬೆಸ್ಟ್, ಆದ್ರೆ ಮಾಡುವಾಗ ತುಸು ಎಚ್ಚರ
ಇಲ್ಲಿನ ಯೋಗಾಸನ ಸಂಪೂರ್ಣ ಹಾವಿನ ಜೊತೆಗೆ. ಯಾವುದೇ ಆಸನೆ ಹೇಗಾದರೂ ಮಾಡಿ ಆದರೆ ದೇಹದಲ್ಲಿ ಹಾವು ಇರಬೇಕು. ಕೇವಲ ಹಾವಲ್ಲ, ಹೆಬ್ಬಾವು. ಹೀಗೆ ಝೆನ್ ಒಂದು ಹೆಬ್ಬಾವು ಹಿಡಿದುಕೊಂಡು ಯೋಗಾಸನ ಮಾಡಿದ್ದಾಳೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ಕೇಂದ್ರದಲ್ಲಿ ವಿವಿಧ ಬಗೆಯ ಹಾವುಗಳಿವೆ. ಇದರಲ್ಲಿ ಯೋಗಾ ಮಾಡಲು ಇಚ್ಚಿಸುವವರು ಯಾವ ಹಾವನ್ನು ಬೇಕಾದರೂ ಆರಿಸಿಕೊಳ್ಳಬಹುದು.
ಈ ವಿಡಿಯೋವನ್ನು ಝೆನ್ ಪೋಸ್ಟ್ ಮಾಡಿದ್ದಾರೆ. ಹಲವು ವಿದೇಶಿಗರು ಝೆನ್ ಸಾಹಸದ ಯೋಗವನ್ನು ಕೊಂಡಿದ್ದಾರೆ. ಈ ವಿಡಿಯೋ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದೇ ವೇಳೆ ಹಲವು ಭಾರತೀಯರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಯೋಗದ ಹೆಸರಿನಲ್ಲಿ ಈ ರೀತಿ ಮೋಸ ಮಾಡಬೇಡಿ. ಯೋಗದಲ್ಲಿ ಈ ರೀತಿ ಇಲ್ಲ. ಇದು ಜನರನ್ನು ಕಬಳಿಸಲು, ವಂಚಿಸಲು ಬಳಸುತ್ತಿರುವ ದಾರಿ ಎಂದು ಪ್ರತಿಕ್ರಿಯಿಸಿದ್ದಾರೆ.
ಹಾವು ಸೇರಿದಂತೆ ಯಾವುದೇ ಪ್ರಾಣಿಗಳನ್ನು ಈ ರೀತಿ ಹಿಂಸಿಸುವುದು ಕಾನೂನು ಬಾಹಿರ. ಇದು ನಕಲಿ ಯೋಗ. ಇಂತಹ ನಕಲಿ ಯೋಗ ಕೇಂದ್ರ ಹಾಗೂ ಯೋಗ ಶಿಕ್ಷಕರನ್ನು ಶಿಕ್ಷಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಈ ಯೋಗ ಮಾಡಿದ್ರೆ ವಯಸ್ಸಾದ್ರೂ ನೀವು ಯಂಗ್ ಆಗಿ ಕಾಣ್ತೀರಿ