ನಾವು ನೆರವಿಗೆ ಬರ್ತೆವೆ.. ಚೀನಾ ಅಧಿಕೃತ ಸಂದೇಶ
ಕೊರೋನಾ ವಿರುದ್ಧ ಹೋರಾಟ ನಿರಂತರ/ ಭಾರತದೊಂದಿಗೆ ನಾವಿದ್ದೇವೆ ಎಂದ ಚೀನಾ/ ನೆರವು ನೀಡುತ್ತೇವೆ ಎಂದು ಅಧಿಕೃತ ಸಂದೇಶ/ ಎರಡು ರಾಷ್ಟ್ರಗಳ ನಾಯಕರ ನಡುವೆ ಸಂದೇಶ
ನವದೆಹಲಿ (ಏ. 30) ಭಾರತದ ನೆರವಿಗೆ ನಾವು ಬರುತ್ತೇವೆ ಎಂದು ಚೀನಾ ಹೇಳಿತ್ತು. ಈಗ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂದೇಶ ರವಾನಿಸಿದ್ದು, ಕೋವಿಡ್ -19 ಪರಿಸ್ಥಿತಿಯನ್ನು ಎದುರಿಸಲು ಸಹಕಾರ ನೀಡುತ್ತೇವೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಕೊರೋನಾ ಆರಂಭವಾದ ನಂತರ ಎರಡು ರಾಷ್ಟ್ರಗಳ ನಾಯಕರ ನಡುವೆ ಇದೇ ಮೊದಲ ಸಾರಿ ಸಂವಹನವಾಗಿದೆ. ಇನ್ನೊಂದು ಕಡೆ ಎರಡು ದೇಶದ ವಿದೇಶಾಂಗ ಸಚಿವರ ನಡುವೆ ದೂರವಾಣಿ ಮಾತುಕತೆಯೂ ನಡೆದಿದೆ.
ಭಾರತದ ಹೋರಾಟಕ್ಕೆ ಜಪಾನ್ ನೆರವು, ಆಕ್ಸಿಜನ್, ವೆಂಟಿಲೇಟರ್ ಹೆಲ್ಪ್
ಶುಕ್ರವಾರ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಭಾರತದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯನ್ನು ಚೀನಾ ನಿಕಟವಾಗಿ ಅನುಸರಿಸುತ್ತಿದೆ ಎಂದು ಹೇಳಿದರು. ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರಿಗೆ ಸಂದೇಶ ಬಂದಿದೆ.
ಚೀನಾ ಮತ್ತು ಭಾರತದ ನಡುವೆ ಗಡಿ ವಿವಾದ ನಡೆದೇ ಇದೆ. ಚೀನಿ ಆಪ್ ಗಳನ್ನು ನಿಷೇಧ ಮಾಡಿದ್ದ ಭಾರತ ತಿರುಗೇಟು ನೀಡಿತ್ತು. ಆದರೆ ಈಗ ಎಲ್ಲರ ಪರಿಸ್ಥಿತಿ ಕೊರೋನಾ ವಿರುದ್ಧ ಹೋರಾಡುವುದಾಗಿದೆ.