Xi Jinping China Coup: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಮಿಲಿಟರಿ ದಂಗೆ ನಡೆದಿದೆ. ಅವರನ್ನು ಪಿಎಲ್‌ಎ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಅವರು ಹತ್ಯೆಯಾಗಿದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ. 

ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಅಲ್ಲದೆ, ಅವರನ್ನು ಪೀಪಲ್ಸ್‌ ಲಿಬರೇಷನ್‌ ಆರ್ಮಿ (Peoples Liberation Army) (PLA) ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂಬ ವದಂತಿಗಳು (Rumours) ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದೆ. ಇದು, ಶುಕ್ರವಾರದಿಂದ ಇಂಟರ್‌ನೆಟ್‌ನಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ. ‘#ChinaCoup ಹಾಗೂ #‍‍‍‍‍‍‍‍XiJinping ಹ್ಯಾಶ್‌ಟ್ಯಾಗ್‌ಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ. ಹಲವಾರು ಪರಿಶೀಲಿಸದ ಖಾತೆಗಳು ಚೀನಾದಲ್ಲಿ ಮಿಲಿಟರಿ ದಂಗೆಯ ಬಗ್ಗೆ ಟ್ವೀಟ್‌ ಮಾಡಿದ್ದು, ಕ್ಸಿ ಜಿನ್‌ಪಿಂಗ್ ಎಸ್‌ಸಿಒ (Shanghai Cooperation Organization) ಶೃಂಗಸಭೆಗಾಗಿ ಸಮರ್ಕಂಡ್‌ನಲ್ಲಿದ್ದಾಗ (Samarkhand) ಈ ಮಿಲಿಟರಿ ದಂಗೆಯನ್ನು ಪ್ಲ್ಯಾನ್‌ ಮಾಡಲಾಗಿತ್ತು ಎಂದು ಹೇಳಲಾಗಿದೆ. ಅಲ್ಲದೆ, ಜಿನ್‌ಪಿಂಗ್ ಮೃತಪಟ್ಟಿದ್ದಾರೆ ಎಂಬ ವದಂತಿಗಳು ಸಹ ಹರಿದಾಡುತ್ತಿದೆ. ಇನ್ನು, ಈ ಎಲ್ಲ ಬೆಳವಣಿಗೆ ಅಥವಾ ವದಂತಿಗಳ ಬಗ್ಗೆ ಅಮೆರಿಕದ ಪತ್ರಕರ್ತ ಹಾಗೂ ಉದ್ಯಮಿ ಗ್ರ್ಯಾಂಟ್‌ ಸ್ಟಿಂಚ್‌ಫೀಲ್ಡ್‌ ಟ್ವೀಟ್‌ ಮಾಡಿದ್ದಾರೆ. 

ಚೀನಾ ಪ್ರಕ್ಷುಬ್ಧತೆಯಲ್ಲಿದೆ! ಕ್ಸಿ ಜಿನ್‌ಪಿಂಗ್ ಕಾಣೆಯಾಗಿದ್ದಾರೆ! ಇದು ದಂಗೆಯೇ? ಅವರು ಹತ್ಯೆಗೀಡಾಗಿದ್ದಾರೆಯೇ ಮತ್ತು ಯಾರೂ ಮಾತನಾಡದ ಮಿಲಿಟರಿ ರಹಸ್ಯವನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ಗ್ರ್ಯಾಂಟ್‌ ಸ್ಟಿಂಚ್‌ಫೀಲ್ಡ್‌ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ. ಅವರು ತಮ್ಮ ವಿಡಿಯೋದಲ್ಲಿ ‘’ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಲವು ದಿನಗಳಿಂದ ಕಾಣಿಸುತ್ತಿಲ್ಲ. ಚೀನಾದಲ್ಲಿ ದಂಗೆ ನಡೆಯುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ನನಗೆ ಈ ಬಗ್ಗೆ ತೀವ್ರ ಸಂಶಯವಿದೆ. ಇದು ಅಸಾಧ್ಯವಲ್ಲ, ಆದರೂ ತುಂಬಾ ಅಸಂಭವವಾಗಿದೆ’’ ಎಂದು ಹೇಳಿದ್ದಾರೆ.

ಇದನ್ನು ಓದಿ: ಸಂಚಲನ ಸೃಷ್ಟಿಸಿದ ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಗೃಹಬಂಧನ?

Scroll to load tweet…

ಅಲ್ಲದೆ, ಅವರನ್ನು ಕೊಲೆ ಮಾಡಲಾಗಿದೆ ಎಂಬ ವದಂತಿಗಳ ಸಾಧ್ಯತೆ ಎಷ್ಟು..? ನಾನು ಈಗಾಗಲೇ ಹೇಳಿದಂತೆ ಅವರು ಕೆಲ ದಿನಗಳಿಂದ ಕಾಣಿಸಿಕೊಂಡಿಲ್ಲ. ಈ ವಾರ ಚೀನಾದಲ್ಲಿ ನಡೆದ ಪ್ರಮುಖ ಮಿಲಿಟರಿ ಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಭಾಗಿಯಾಗಬೇಕಿತ್ತು. ಆ ಮಹತ್ವದ ಸಭೆಯೊಳಗೆ ಸೇವೆಯಿಂದ ನಿವೃತ್ತಿಯಾಗಿರುವ ನಾರ್ತನ್‌ ವಾರಿಯರ್‌ನ (ಮಾಜಿ) ಜನರಲ್‌ ಭಾಗಿಯಾಗಿದ್ದರು. ಇದು ಹಲವರ ಅಚ್ಚರಿಗೆ ಕಾರಣವಾಗಿದೆ. ಆದರೆ, ಕ್ಸಿ ಜಿನ್‌ಪಿಂಗ್ ಆ ಸಭೆಯಲ್ಲಿ ಭಾಗಿಯಾಗಿರಲಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ದಾಳಿ ಮಾಡಿದರೆ ನಾವು ತೈವಾನ್‌ ಪರ ನಿಲ್ಲುತ್ತೇವೆ: ಮಹತ್ವದ ಹೇಳಿಕೆ ನೀಡಿದ Joe Biden

ಜತೆಗೆ, ಚೀನಾ ಕಮ್ಯೂನಿಸ್ಟ್‌ ಪಕ್ಷದ ಅಧಿಕಾರಿಗಳು ಶೇ. 50 ರಷ್ಟು ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ನೀಜಿಂಗ್ ಕಡೆಗೆ ಹೋಗುವ ವಾಹನಗಳನ್ನೂ ತಡೆ ಹಿಡಿಯಲಾಗುತ್ತದೆ. ಈ ಹಿನ್ನೆಲೆ ಚೀನಾದಲ್ಲಿ ಏನೋ ವಿಚಿತ್ರ ನಡೆಯುತ್ತಿದೆ. ನನ್ನ ಪ್ರಕಾರ ಮಿಲಿಟರಿ ದಂಗೆ ಅಸಂಭವ, ಕ್ಸಿ ಜಿನ್‌ಪಿಂಗ್ ಅವರನ್ನು ಹತ್ಯೆ ಮಾಡಲಾಗಿದೆಯೇ. ಇರಬಹುದು. ಇದು ಆಗಿಲ್ಲದಿದ್ದರೆ ಅವರು ಸಾರ್ವಜನಿಕವಾಗಿ ಏಕೆ ಕಾಣಿಸಿಕೊಂಡಿಲ್ಲ ಎಂಬುದು ನನಗೆ ನಂಬುವುದು ಕಷ್ಟವಾಗುತ್ತಿದೆ. ಅವರು ಕ್ವಾರಂಟೈನ್‌ನಲ್ಲಿದ್ದರೆ ವಿಡಿಯೋ ಮೂಲಕವಾದರು ಕಾನಿಸಿಕೊಳ್ಳಬೇಕಿತ್ತು’’ ಎಂದಿದ್ದಾರೆ. ಅಲ್ಲದೆ, ಈ ಬಗ್ಗೆ ನಾನು ಒಂದು ಕಣ್ಣಿಡುತ್ತೇನೆ. ಏಕೆಂದರೆ, ತೀವ್ರ ಅಂತಾರಾಷ್ಟ್ರೀಯ ಪರಿಣಾಮಗಳನ್ನು ಬೀರಬಹುದು ಎಂದೂ ಅಮೆರಿಕದ ಪತ್ರಕರ್ತ ಹಾಗೂ ಉದ್ಯಮಿ ಗ್ರ್ಯಾಂಟ್‌ ಸ್ಟಿಂಚ್‌ಫೀಲ್ಡ್‌ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ವಿಡಿಯೋ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.