ಲಂಡನ್(ಏ.16)‌: ಕೋರೋನಾ ಸೋಂಕು ಬುಧವಾರ ವಿಶ್ವದಾದ್ಯಂತ 38000ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 2003600ಕ್ಕೆ ತಲುಪಿದೆ.

ಇದೇ ವೇಳೆ ಬುಧವಾರ 4200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಒಟ್ಟು ಸಾವನಪ್ಪಿದವರ ಸಂಖ್ಯೆ 1.30 ಲಕ್ಷಕ್ಕೆ ತಲುಪಿದೆ. ಇನ್ನು ಈ ಪೈಕಿ ಯುರೋಪ್‌ವೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

'6 ದಿನ'ದ ಸೀಕ್ರೆಟ್: ಚೀನಾ ಮಾಡಿದ ದೊಡ್ಡ ಎಡವಟ್ಟು ಬಹಿರಂಗ!

ಯುರೋಪಿನ 40ಕ್ಕೂ ಹೆಚ್ಚು ದೇಶಗಳು ಕೊರೋನಾ ವೈರಸ್‌ನಿಂದ ಬಾಧಿತವಾಗಿವೆ. ಬುಧವಾರ ಮಧ್ಯಾಹ್ನದ ವೇಳೆಗೆ ಯುರೋಪ್‌ನಲ್ಲಿ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 1,010,858ಕ್ಕೆ ಏರಿಕೆ ಆಗಿದ್ದು, 85,271 ಮಂದಿ ಸಾವಿಗೀಡಾಗಿದ್ದಾರೆ.