ನವದೆಹಲಿ(ಮಾ.23): ವಿಶ್ವದ ಒಟ್ಟು ಜನಸಂಖ್ಯೆ ಅಂದಾಜು 780 ಕೋಟಿ. ಈ ಪೈಕಿ 230 ಕೋಟಿ ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟುಜನತೆ ಭಾನುವಾರ ಗೃಹಬಂಧನಕ್ಕೆ ಒಳಪಟ್ಟಿದ್ದರು.

ಹೌದು, ಜನತಾ ಕರ್ಫ್ಯೂ ಪರಿಣಾಮ ಭಾರತದ 130 ಕೋಟಿ ಜನ ಭಾನುವಾರ ಮನೆಯಲ್ಲೇ ಉಳಿದುಕೊಂಡಿದ್ದರು.

ಇನ್ನು ವಿಶ್ವದ 40ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಕೊರೋನಾ ಮುಂಜಾಗ್ರತಾ ಕ್ರಮವಾಗಿ 100 ಕೋಟಿಗೂ ಹೆಚ್ಚು ಜನ ಗೃಹಬಂಧನಕ್ಕೆ ಒಳಪಟ್ಟಿದ್ದಾರೆ. ಹೀಗೆ ಕೊರೋನಾ ಭೀತಿಯಿಂದಾಗಿ ಭಾನುವಾರ ವಿಶ್ವದ 230 ಕೋಟಿಗೂ ಹೆಚ್ಚು ಜನ ಕಡ್ಡಾಯ ಗೃಹಬಂಧನಕ್ಕೆ ಒಳಪಡುವಂತೆ ಆಯಿತು.