ವಿಶ್ವದ ಅತಿ ಎತ್ತರ, ಅತಿ ಕುಳ್ಳ ಮಹಿಳೆಯರ ಸಮಾಗಮ: ಕುತೂಹಲದ ಕ್ಷಣದ ವಿಡಿಯೋ ವೈರಲ್
ವಿಶ್ವದ ಅತಿ ಎತ್ತರ ಟರ್ಕಿ ಮಹಿಳೆಯ ಮತ್ತು ಅತ್ಯಂತ ಕುಳ್ಳ ಭಾರತದ ಮಹಿಳೆಯರ ಸಮಾಗಮವಾಗಿದ್ದು, ಇದರ ವಿಡಿಯೋ ವೈರಲ್ ಆಗಿದೆ.
7 ಅಡಿ 1 ಇಂಚು ಎತ್ತರ ಇರೋ 27 ವರ್ಷದ ರುಮೇಸಾ ಹಾಗೂ 7 ಅಡಿ 1 ಇಂಚು ಇರೋ 30 ವರ್ಷದ ಜ್ಯೋತಿ ಅಮ್ಗೆ... ಅಬ್ಬಾ ಎಷ್ಟು ಕುತೂಹಲ ಅಲ್ವಾ? ಇವರಿಬ್ಬರೂ ವಿಶ್ವದ ಅತಿ ಎತ್ತರ ಮತ್ತು ಅತಿ ಕುಳ್ಳಗಿರುವ ಯುವತಿಯರು. ಗಿನ್ನೆಸ್ ದಾಖಲೆಗಳಲ್ಲಿ ಹೆಸರು ಪಡೆದಿರುವ ಈ ಎತ್ತರ ಮತ್ತು ಕುಳ್ಳಗಿರುವ ಯುವತಿಯ ಸಂಗಮ ಇದೀಗ ಆಗಿದೆ. ಇವರಿಬ್ಬರೂ ಪರಸ್ಪರ ಭೇಟಿಯಾಗುವ ಅಪರೂಪದ ಕ್ಷಣಕ್ಕೆ ಲಂಡನ್‌ನ ಪ್ರತಿಷ್ಠಿತ ಸವೊಯ್ ಹೋಟೆಲ್ ಸಾಕ್ಷಿಯಾಯಿತು. ಇವರಿಬ್ಬರೂ ಚಹಾ ಸವಿಯುತ್ತಾ ತಮ್ಮ ಜೀವನದ ಕಥೆ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು guinness world records ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ವೈರಲ್ ಆಗುತ್ತಿದೆ.
2024 ರ ಗಿನ್ನೆಸ್ ವಿಶ್ವ ದಾಖಲೆಯ ದಿನವನ್ನು ಆಚರಿಸುವ ಸಲುವಾಗಿ ಇಂಥದ್ದೊಂದು ಭೇಟಿಯನ್ನು ಆಯೋಜಿಸಲಾಗಿತ್ತು. ವಿಶ್ವದ ಅತೀ ಎತ್ತರದ ಹಾಗೂ ಅತೀ ಕುಬ್ಜ ಮಹಿಳೆಯರು ಭೇಟಿಯಾಗುವ ಮೂಲಕ ಮತ್ತೊಮ್ಮೆ ದಾಖಲೆ ಪುಟ ಸೇರಿದ್ದಾರೆ. ಇವರಿಬ್ಬರ ಕುರಿತು ಹೇಳುವುದಾದರೆ, ಟರ್ಕಿಯಲ್ಲಿ ವಾಸಿಸುತ್ತಿರುವ ರುಮೇಸಾ ಅವರು ವಿಶ್ವದ ಅತಿ ಎತ್ತರದ ಮಹಿಳೆ, ಆಗಿದ್ದು, ಅವರು ವೆಬ್ ಡೆವಲಪರ್ ಆಗಿದ್ದಾರೆ. ಸೆಂಟಿ ಮೀಟರ್ ಲೆಕ್ಕದಲ್ಲಿ ಹೇಳುವುದಾದರೆ, 215.16 ಸೆಂ.ಮೀ. ಇನ್ನು ಜ್ಯೋತಿ ಅವರು ಭಾರತದವರೇ ಆಗಿದ್ದು, ಅವರ ಎತ್ತರ 2 ಅಡಿ 1 ಇಂಚು ಅರ್ಥಾತ್ 62.8 ಸೆಂಟಿ ಮೀಟರ್.
ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್ ಮಾಡ್ತೀರಾ ಕೇಳಿದ್ರೆ ವಿಜಯ್ ಸೂರ್ಯ ತರ್ಲೆ ಉತ್ತರ ಕೇಳಿ!
2014ರಲ್ಲಿ ರುಮೇಸಾ ಅವರ 18ನೇ ವಯಸ್ಸಿನಲ್ಲಿ ಇವರ ಹೆಸರು `ಅತೀ ಎತ್ತರದ ಹದಿಹರೆಯದ ಯುವತಿ' ಎಂದು ದಾಖಲಾಗಿತ್ತು. ಇದೀಗ, ದಾಖಲೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅವರು, ವಿಶ್ವದಲ್ಲಿ ಸದ್ಯ ಇರುವ ಅತೀ ಎತ್ತರದ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇವರು ವೀವರ್ ಸಿಂಡ್ರೋಮ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಇವರು ಹೆಚ್ಚಾಗಿ ವ್ಹೀಲ್‌ಚೇರ್‌ನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಇನ್ನು ವಾಕರ್ ಸಹಾಯದಿಂದ ಸ್ವಲ್ಪ ನಡೆಯಬಹುದಾಗಿದೆ.
ಜ್ಯೋತಿ ಅವರನ್ನು ರುಮೇಸಾ 'ಗಾರ್ಜಿಯಸ್ ಲೇಡಿ' ಎಂದು ಬಣ್ಣಿಸಿದ್ದಾರೆ. ಹಲವು ವರ್ಷಗಳಿಂದ ಈ ಭೇಟಿಗೆ ಕಾಯುತ್ತಿದ್ದೆ ಎಂದಿದ್ದಾರೆ. ಈ ಇಬ್ಬರೂ ಚಹಾ ಹೀರುತ್ತಾ, ಮೇಕಪ್ ಮತ್ತು ಡ್ರೆಸ್‌ಗಳ ಬಗ್ಗೆ ಹಾಗೂ ದೇಹದ ಕಾಳಜಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇಷ್ಟೇ ಅಲ್ಲದೇ ಇಬ್ಬರೂ ನೆಚ್ಚಿನ ಹವ್ಯಾಸಗಳು, ಅಭ್ಯಾಸಗಳ ಬಗ್ಗೆಯೂ ಮಾತನಾಡಿದ್ದಾರೆ. 30 ವರ್ಷ ವಯಸ್ಸಿನ ಜ್ಯೋತಿ ಆಮ್ಗೆ ಅವರು ಮಹಾರಾಷ್ಟ್ರದ ನಾಗ್ಪುರದವರು. ಇವರು ಬಿಗ್ ಬಾಸ್ ಸೇರಿದಂತೆ ಹಲವು ಟಿವಿ ಶೋಗಳು, ಡಾಕ್ಯುಮೆಂಟರಿ, ಸೀರೀಸ್ ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ. ಇವರಿಗೆ ಸೆಲೆಬ್ರಿಟಿಯಷ್ಟೇ ಜನಪ್ರಿಯತೆ ಇದ್ದು, ಲೋನಾವಾಲಾದಲ್ಲಿರುವ ವ್ಯಾಕ್ಸ್ ಮ್ಯೂಸಿಯಂನಲ್ಲಿ ಇವರ ಮೇಣದ ಪ್ರತಿಮೆಯನ್ನು ಇಡಲಾಗಿದೆ.
ಪುಟ್ಟಕ್ಕನ ಮಕ್ಕಳು ನೋಡಿದ ಅಜ್ಜಿಗೆ ಹಾರ್ಟ್ ವೀಕ್, ಭಾಗ್ಯಲಕ್ಷ್ಮಿ ಮಾತ್ರ ತೋರಿಸ್ಬೇಡಿ ಅಂದ್ರು ಮತ್ತೊಬ್ಬರು!