ತಮಾಷೆಯಲ್ಲ, ಇದು ನಿಜ: ನಡೆಯಲಿದೆ ವೀರ್ಯಾಣು ರೇಸ್, ಲೈವ್ ಕಾಮೆಂಟ್ರಿ, ಬೆಟ್ಟಿಂಗ್ ಎಲ್ಲವೂ ಇರುತ್ತೆ!

Synopsis
ವೀರ್ಯಾಣುಗಳ ರೇಸ್ ಆಯೋಜಿಸಲಾಗಿದ್ದು, ಇದು ಪುರುಷರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ರೇಸ್ ಲೈವ್ ಕಾಮೆಂಟ್ರಿ ಮತ್ತು ಬೆಟ್ಟಿಂಗ್‌ನೊಂದಿಗೆ ಅಂತರರಾಷ್ಟ್ರೀಯ ಕ್ರೀಡಾಕೂಟದಂತೆ ನಡೆಯಲಿದೆ.
ಈ ಸುದ್ದಿ ಕೇಳಿದ್ರೆ ಒಂದು ಕ್ಷಣ ನಿಮ್ಮ ಮೊಗದಲ್ಲಿ ನಗು ಬರುತ್ತದೆ. ಇದ್ಯಾವುದೂ ಸೈನ್ಸ್-ಫಿಕ್ಷೆನ್ ಸಿನಿಮಾನೂ ಅಲ್ಲ. ಸಾಮಾನ್ಯವಾಗಿ ಕುದುರೆ, ಎತ್ತು, ಆಮೆ-ಮೊಲ, ಮನುಷ್ಯರ ನಡುವೆ ರೇಸ್ ನಡೆಯುತ್ತದೆ. ಬೈಕ್ ಮತ್ತು ಕಾರ್ ಸೇರಿದಂತೆ ವಿವಿಧ ವಾಹನಗಳ ನಡುವೆಯೂ ರೇಸ್ ನಡೆಯುತ್ತದೆ. ಇಂತಹ ರೇಸ್ ನೋಡಲು ಜನರು ದೂರ ದೂರದ ಪ್ರದೇಶಗಳಿಗೆ ತೆರಳುತ್ತಾರೆ. ಆದ್ರೆ ಇಂದು ನಾವು ಹೇಳುತ್ತಿರುವ ರೇಸ್ ಬಗ್ಗೆ ನೀವು ಒಮ್ಮೆಯೂ ಕಲ್ಪನೆಯೂ ಮಾಡಿಕೊಂಡಿರಲ್ಲ. ದೇಶವೊಂದರಲ್ಲಿ ವೀರ್ಯಾಣುವಿನ ರೇಸ್ ಆಯೋಜಿಸಲಾಗಿದ್ದು, ಈ ಸುದ್ದಿ ಸಂಚಲವನ್ನು ಸೃಷ್ಟಿಸಿದೆ.
ಅರೇ ಇದೇನು ವೀರ್ಯಾಣು ರೇಸ್ ಅಂತ ಛೀ ಛೀ ಅಂತ ಅನ್ನಬೇಡಿ. ಈ 'ಮೈಕ್ರೋ ಸ್ಪೋರ್ಟ್ಸ್' ರೇಸ್ ಹಿಂದೆ ಮಹತ್ವದ ಉದ್ದೇಶವನ್ನು ಹೊಂದಿದೆ. ಈ ರೇಸ್ ಮೂಲಕ ಪುರುಷರಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹಾಗಾದ್ರೆ ಈ ರೇಸ್ ಎಲ್ಲಿ ನಡೆಯುತ್ತಿದೆ? ಯಾರೆಲ್ಲಾ ಭಾಗವಹಿಸಬಹುದು ಎಂಬುದನ್ನೂ ನೋಡೋಣ ಬನ್ನಿ.
ರೇಸ್ ವೀಕ್ಷಣೆಗೆ ಹೈ ರೆಸೆಲ್ಯೂಶನ್ ಕ್ಯಾಮೆರಾ!
ಸ್ಪರ್ಮ್ ರೇಸಿಂಗ್ ಹೆಸರಿನ ಸ್ಟಾರ್ಟ್‌ಅಪ್ ಈ ವಿಚಿತ್ರವಾದ ಆಯೋಜನೆಯನ್ನು ಮಾಡುತ್ತಿದೆ. ಈ ಸ್ಪರ್ಧೆ ಏಪ್ರಿಲ್ 25ರಂದು ಹಾಲಿವುಡ್‌ನ ಪಲ್ಲಾಡಿಯಮ್ ಎಂಬಲ್ಲಿ ನಡೆಯಲಿದೆ. ಈ ಸ್ಪರ್ಧೆ ವೀಕ್ಷಣೆಗೆ ಸುಮಾರು 1,000ಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಪರ್ಧೆ ಸಾಮಾನ್ಯ ರೇಸ್‌ಗಳಂತೆ ದೊಡ್ಡ ದೊಡ್ಡ ಮೈದಾನಗಳಲ್ಲಿ ನಡೆಯಲ್ಲ. ಇಲ್ಲಿ ಯಾವ ಪುರುಷರೂ ಭಾಗಿಯಾಗಲ್ಲ. ಈ ರೇಸ್‌ನಲ್ಲಿ ಭಾಗಿಯಾಗೋದು ವೀರ್ಯಾಣುಗಳು. ಈ ವೀರ್ಯಾಣುಗಳ ಸ್ಪರ್ಧೆಯ ವೀಕ್ಷಣೆಗೆ ಅತ್ಯಧಿಕ ರೆಸೆಲ್ಯೂಶನ್ ಕ್ಯಾಮೆರಾಗಳನ್ನು ರಚನೆ ಮಾಡಲಾಗಿದೆ. ಈ ಕ್ಯಾಮೆರಾಗಳಿಂದ ಅತ್ಯಂತ ಸೂಕ್ಷ್ಮ ವಸ್ತುಗಳನ್ನು ಕಾಣಬಹುದು.
ಈ ವೀರ್ಯಾಣುಗಳು ರೇಸ್‌ಗಾಗಿ ಮೈಕ್ರೋಸ್ಕೋಪಿಕ್ ಟ್ರ್ಯಾಕ್ ನಿರ್ಮಿಸಲಾಗಿದೆ. ಈ ಟ್ರ್ಯಾಕ್ ಮಾನವ ಸಂತಾನೋತ್ಪತ್ತಿ ವ್ಯವಸ್ಥೆಯ ರಚನೆಯನ್ನು ಅನುಕರಿಸುತ್ತದೆ. ಪ್ರೇಕ್ಷಕರು ನೈಜ ಸಮಯದಲ್ಲಿ ವೀರ್ಯಾಣುಗಳ ಚಲನೆಯನ್ನು ವೀಕ್ಷಿಸಿಸಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ.
ಇದನ್ನೂ ಓದಿ: ಹರಿಶ್ಚಂದ್ರ ಘಾಟ್‌ನಲ್ಲಿ ನನ್ನ 2 ಮಕ್ಕಳು ಮಲಗಿವೆ, ಆಮೇಲೆ ಮಗು ಮಾಡ್ಕೊಳ್ಳಲಿಲ್ಲ; 'ದೃಷ್ಟಿಬೊಟ್ಟುʼ ನಟ ಅಶೋಕ್ ಹೆಗಡೆ
ಲೈವ್ ಕಾಮೆಂಟ್ರಿ, ಬೆಟ್ಟಿಂಗ್ ಎಲ್ಲವೂ ಇರುತ್ತೆ!
ವೀರ್ಯಾಣುಗಳು ಅತ್ಯಂತ ಸೂಕ್ಷ್ಮವಾಗಿರಬಹುದು. ಆದ್ರೆ ಇದು ಯಾವುದೇ ಅಂತರಾಷ್ಟ್ರೀಯ ಕ್ರೀಡಾಕೂಟಗಳಿಂತ ಕಡಿಮೆ ಇರಲ್ಲ. ಸ್ಪರ್ಮ್ ರೇಸ್ ನಡೆಯುವಾಗಮ ಲೈವ್ ಕಾಮೆಂಟರಿ, ಸಮಯಕ್ಕೆ ತಕ್ಕಂತೆ ಸುದ್ದಿಗೋಷ್ಠಿಗಳು ನಡೆಯಲಿವೆ. ವೀಕ್ಷಕರು ಯಾವ ಸ್ಪರ್ಮ್ ಗೆಲ್ಲಲಿದೆ ಎಂದು ಅಂದಾಜಿಸಿ ಬೆಟ್ಟಿಂಗ್ ಸಹ ಆಡಬಹುದು. ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಎಲ್ಲಾ ಕ್ರೀಡೆಗಳಂತೆಯೇ ಅಯೋಜಿಸಲಾಗಿದೆ ಎಂದು ಸ್ಪರ್ಮ್ ರೇಸಿಂಗ್ ಸ್ಟಾರ್ಟ್‌ಅಪ್ ಖಚಿತಪಡಿಸಿದೆ. ಈ ನೂತನ ಮತ್ತು ವಿಭಿನ್ನ ಕಲ್ಪನೆಯ ರೇಸ್‌ಗೆ ಜೀವ ತುಂಬಲು ಸ್ಟಾರ್ಟಪ್ ಕರೇಜ್ ಮತ್ತು ಫಿಗ್ಮೆಂಟ್ ಕ್ಯಾಪಿಟಲ್‌ನಂತಹ ಸಂಸ್ಥೆಗಳಿಂದ $1 ಮಿಲಿಯನ್ ಹಣವನ್ನು ಸಂಗ್ರಹಿಸಲಾಗಿದೆ.
ಮೇಲ್ನೋಟಕ್ಕೆ ಇದು ಬಹುತೇಕರಿಗೆ ತಮಾಷೆ ಅಂತ ಅನ್ನಿಸಬಹುದು. ಗಂಭೀರವಾದ ವೈಜ್ಞಾನಿಕ ಮತ್ತು ಸಾಮಾಜಿಕ ಸಮಸ್ಯೆಯಾದ ಕ್ಷೀಣಿಸುತ್ತಿರುವ ಪುರುಷರ ಫಲವತ್ತತೆಯ ಬಗ್ಗೆ ಈ ರೇಸ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ 50 ವರ್ಷಗಳಲ್ಲಿ ಪ್ರಪಂಚದಾದ್ಯಂತ ಪುರುಷರ ವೀರ್ಯಾಣುಗಳ ಸಂಖ್ಯೆ 50% ಕ್ಕಿಂತ ಕಡಿಮೆಯಾಗಿದೆ ಎಂಬ ಸಂಶೋಧನೆ ವರದಿಗಳು ಹೇಳಿವೆ. ಹಾಗಾಗಿ ಈ ಕಾರ್ಯಕ್ರಮ ನೂತನವಾದ ಪ್ರಯತ್ನ ಎಂದು ಸ್ಟಾರ್ಟ್‌ಅಪ್ ಹೇಳಿದೆ. ಒತ್ತಡ, ಅಸಮತೋಲಿತ ಆಹಾರ, ಧೂಮಪಾನ, ಆಲ್ಕೊಹಾಲ್ ಸೇವನೆ ಮತ್ತು ಅನಿಯಮಿತ ಜೀವನಶೈಲಿಯಿಂದಾಗಿ ಪುರುಷರ ಫಲವತ್ತತೆ ಕಡಿಮೆಯಾಗಿದೆ.
ಪುರುಷರ ಫಲವತ್ತತೆ ಬಗ್ಗೆ ಜಾಗೃತಿ ಕಾರ್ಯಕ್ರಮ
ಪುರುಷರಿಗೆ ತಮ್ಮ ಆರೋಗ್ಯ ಮತ್ತು ಫಲವತ್ತತೆಗೆ ಜಾಗೃತಿ ಈ ಕಾರ್ಯಕ್ರಮದಿಂದ ಮೂಡಲಿದೆ. ವೀರ್ಯದ ಕುರಿತು ತಿಳಿದಾಗ ತಮ್ಮ ಸ್ವಂತ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆಯೂ ಗಮನ ಹರಿಸಲು ಪ್ರಾರಂಭಿಸುತ್ತಾರೆ. ಈ ರೇಸ್ ಪುರುಷರ ಆರೋಗ್ಯದ ಮಾಹಿತಿಯನ್ನು ಒದಗಿಸುತ್ತೆ ಮತ್ತು ಸಂವಾದವನ್ನು ಆರಂಭಿಸಲಿದೆ. ಇಂದಿನ ಜಗತ್ತಿನಲ್ಲಿ ಎಲ್ಲವೂ ಡಿಜಿಟಲ್ ಮತ್ತು ಸಂವಾದಾತ್ಮಕವಾಗುತ್ತಿರುವಾಗ, 'ಗೇಮಿಫೈಯಿಂಗ್' ಆರೋಗ್ಯ ಜಾಗೃತಿಯನ್ನು ಸಹ ಒಂದು ಸ್ಮಾರ್ಟ್ ಕ್ರಮವೆಂದು ಪರಿಗಣಿಸಬಹುದು.
ಇದನ್ನೂ ಓದಿ: ಈ ದೇಶದಲ್ಲಿ ಮಗು ಹುಟ್ಟಿದ್ರೆ ಸಿಗುತ್ತೆ 50 ಲಕ್ಷ… ಕಾರಣ ಜನಸಂಖ್ಯೆ!
ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಈ ವಿಶಿಷ್ಟ 'ಸ್ಪರ್ಮ್ ರೇಸ್' ವಿಜ್ಞಾನ ಮತ್ತು ಮನರಂಜನೆಯ ಅದ್ಭುತ ಸಮ್ಮಿಲನ ಮಾತ್ರವಲ್ಲ, ಇದು ಪುರುಷರ ಸಂತಾನೋತ್ಪತ್ತಿ ಆರೋಗ್ಯದ ಗಂಭೀರ ಸಮಸ್ಯೆಯನ್ನು ಅತ್ಯಂತ ಆಸಕ್ತಿದಾಯಕ ರೀತಿಯಲ್ಲಿ ಪ್ರಸ್ತುತಪಡಿಸುತ್ತಿದೆ. ನೀವು ಇದನ್ನು ತಮಾಷೆ ಅಥವಾ ಗಂಭೀರ ಸಾಮಾಜಿಕ ಪ್ರಯೋಗವೆಂದು ಪರಿಗಣಿಸಿದರೆ, ಈ ಘಟನೆಯು ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ ಮತ್ತು ಬಹುಶಃ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದ್ರೆ ಈ ಸ್ಪರ್ಧೆ ಹೇಗಿರುತ್ತೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.