ಗಿನ್ನೆಸ್ ದಾಖಲೆ ವೀರ, 112 ವರ್ಷದ ವಿಶ್ವದ ಹಿರಿಯ ವ್ಯಕ್ತಿ ನಿಧನ| ಗಿನ್ನೆಸ್ ದಾಖಲೆಗೆ ಪಾತ್ರವಾಗಿದ್ದ ಜಪಾನ್‌ನ 112 ವರ್ಷದ ಚಿತೆಂಸು ವಾಟನೇಬ್
ಟೋಕಿಯೋ[ಫೆ.26]: ವಿಶ್ವದ ಅತೀ ಹಿರಿಯ ವ್ಯಕ್ತಿ ಎಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿದ್ದ ಜಪಾನ್‌ನ 112 ವರ್ಷದ ಚಿತೆಂಸು ವಾಟನೇಬ್ ಅವರು ಭಾನುವಾರ ನಿಧನರಾಗಿದ್ದಾರೆ.
ಕಳೆದ ಫೆ.12 ರಂದಷ್ಟೇ ಅವರು ವಿಶ್ವದ ಅತಿಹಿರಿಯ ವ್ಯಕ್ತಿ ಎಂದು ಗಿನ್ನೆಸ್ ದಾಖಲೆಗೆ ಪಾತ್ರರಾಗಿ, ದಾಖಲೆ ಪತ್ರವನ್ನು ಸ್ವೀಕರಿಸಿದ್ದರು. ಚಿಸೆಂತು ಕೆಲ ದಿನಗಳಿಂದ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
1907ರಲ್ಲಿ ಜನಿಸಿದ್ದ ಅವರಿಗೆ, ಐದು ಮಕ್ಕಳು, 12 ಮೊಮ್ಮಕ್ಕಳು, 16 ಮರಿ ಮಕ್ಕಳು ಹಾಗೂ ಓರ್ವ ಗಿರಿ ಮೊಮ್ಮಗು ಇತ್ತು.
