ವಿಶ್ವದ ಅತಿದೊಡ್ಡ ಹಸು ಭಾರತದ ನೆಲ್ಲೂರಿನ ವಯಟಿನಾ-19 ಎಂಬುದಾಗಿದೆ. ಇದೀಗ ಕಿಂಗ್ ಕಾಂಗ್ ಎಂಬ ಕೋಣವು 185 ಸೆಂ.ಮೀ ಎತ್ತರವಿರುವ ಮೂಲಕ ವಿಶ್ವದ ಅತಿ ಎತ್ತರದ ಕೋಣ ಎಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿದೆ. ಇದರ ಮೂಲ ದೇಶದ ಮಾಹಿತಿ ಇಲ್ಲಿದೆ ನೋಡಿ..

ವಿಶ್ವದ ಅತಿದೊಡ್ಡ ಹಸು ವಯಟೀನಾ-19 ಭಾರತದ ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ಮೂಲದ್ದಾಗಿದೆ. ಈ ಹಸುವಿನ ತೂಕ ಸುಮಾರು 1,100 ಕೆ.ಜಿ.ಗೂ ಅಧಿಕ ತೂಕದ ಎತ್ತು ಬ್ರೆಜಿಲ್‌ನಲ್ಲಿ 40 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಗಿನ್ನೆಸ್ ದಾಖಲೆ ಬರೆದಿತ್ತು. ಇದೀಗ ಥೈಲ್ಯಾಂಡ್ ದೇಶದ ಕೋಣ ಅತಿ ಎತ್ತರ ಜೀವಂತ ಕೋಣ ಎಂದು ಗಿನ್ನೆಸ್ ದಾಖಲೆಯನ್ನು ಬರೆದಿದೆ.

ಜಾಗತಿಕ ಮಟ್ಟದಲ್ಲಿ ಹಾಲಿ ಜೀವಂತವಾಗಿರುವ ಅತಿ ಎತ್ತರದ ಕೋಣ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಘೋಷಿಸಿದೆ. 5 ವರ್ಷ ವಯಸ್ಸಿನ 'ಕಿಂಗ್ ಕಾಂಗ್' ಎಂಬ ಕೋಣ ಈ ವಿಶ್ವ ದಾಖಲೆಗೆ ಪಾತ್ರವಾಗಿದೆ. ಕಿಂಗ್ ಕಾಂಗ್ 185 ಸೆಂ.ಮೀ (6 ಅಡಿ 0.8 ಇಂಚು) ಎತ್ತರವಿದೆ. ಇದು ಥೈಲ್ಯಾಂಡ್‌ನ ನಖೋನ್ ರಾಟ್ಚಸಿಮಾದ ನಿನ್ಲಾನಿ ಫಾರ್ಮ್‌ನ ಒಡೆತನದಲ್ಲಿದೆ. ಸಾಮಾನ್ಯವಾಗಿ ವಯಸ್ಕ ಎಮ್ಮೆಗಳಿಗಿಂತ ಕಿಂಗ್ ಕಾಂಗ್ 20 ಇಂಚು ಎತ್ತರವಾಗಿದೆ. 2021 ಏಪ್ರಿಲ್ 1 ರಂದು ಜನಿಸಿದ ಕ್ಷಣದಿಂದಲೂ ಕಿಂಗ್ ಕಾಂಗ್‌ನ ಗಮನಾರ್ಹ ಎತ್ತರ ಎದ್ದು ಕಾಣುತ್ತಿತ್ತು ಎಂದು ಫಾರ್ಮ್ ಮಾಲೀಕ ಹೇಳಿಕೊಂಡಿದ್ದಾರೆ.

ಥೈಲ್ಯಾಂಡ್‌ನ ನಿನ್ಲಾನಿ ಫಾರ್ಮ್‌ನಲ್ಲಿ ಕಿಂಗ್ ಕಾಂಗ್ ಜನಿಸಿದ್ದು, ಈ ಕೋಣದ ತಾಯಿ ಎಮ್ಮೆ ಹಾಗೂ ಕೋಣವೂ ಇನ್ನೂ ಆ ಫಾರ್ಮ್‌ನಲ್ಲಿವೆ. ನಮ್ಮ ಫಾರ್ಮ್‌ನಲ್ಲಿ ಕಿಂಗ್ ಕಾಂಗ್ ಹುಟ್ಟಿದ ತಕ್ಷಣವೇ ಅದರ ತುಂಬಾ ಎತ್ತರವಾಗಿರುವುದನ್ನು ನಾವು ಗಮನಿಸಿದ್ದೆವು. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಕಿಂಗ್ ಕಾಂಗ್‌ನ ದಿನಚರಿ ಪ್ರಾರಂಭವಾಗುತ್ತದೆ. ಎದ್ದ ತಕ್ಷಣ ಮೊದಲು ಕೊಳದಲ್ಲಿ ದೀರ್ಘ ಸ್ನಾನ, ನಂತರ ಅದಕ್ಕೆ ಆಹಾರ ನೀಡಲಾಗುತ್ತದೆ ಎಂದು ಕಿಂಗ್ ಕಾಂಗ್ ಅನ್ನು ನೋಡಿಕೊಳ್ಳುವ ಚೆರ್ಪಟ್ ವುಟ್ಟಿ ಹೇಳುತ್ತಾರೆ.

ಇದನ್ನೂ ಓದಿ: ₹40 ಕೋಟಿಗೆ ಮಾರಾಟವಾದ ನೆಲ್ಲೂರು ತಳಿ ಹಸು; ತೂಕ, ಬೆಲೆಯಲ್ಲಿ ಗಿನ್ನೆಸ್ ದಾಖಲೆ

Scroll to load tweet…

ಪ್ರತಿದಿನ 35 ಕಿಲೋಗ್ರಾಂ ಆಹಾರ ತಿನ್ನುವ ಕಿಂಗ್ ಕಾಂಗ್‌ನ ನೆಚ್ಚಿನ ಆಹಾರಗಳು ಹುಲ್ಲು, ಜೋಳ, ಬಾಳೆಹಣ್ಣು. ದೊಡ್ಡ ಗಾತ್ರವಿದ್ದರೂ ಕಿಂಗ್ ಕಾಂಗ್ ಆಕ್ರಮಣಕಾರಿಯಾಗಿಲ್ಲ. ಕಿಂಗ್ ಕಾಂಗ್ ಸೌಮ್ಯ ಮತ್ತು ಸ್ನೇಹಪರ ಎಂದು ಚೆರ್ಪಟ್ ವುಟ್ಟಿ ಹೇಳುತ್ತಾರೆ. ಫಾರ್ಮ್‌ನಲ್ಲಿ ಅವನನ್ನು 'ಯೆನು' ಎಂದು ಕರೆಯುತ್ತಾರೆ. ಯೆನು ಅಂದರೆ ದೊಡ್ಡ ಮರ್ಯಾದಸ್ಥ ಎಂದು ಅರ್ಥ. ಕಿಂಗ್ ಕಾಂಗ್‌ಗೆ ಕಾಲುಗಳಿಂದ ಮಣ್ಣಿನಲ್ಲಿ ಗುಂಡಿ ತೋಡುವುದು ಮತ್ತು ಜನರೊಂದಿಗೆ ಓಡುವುದು ಅವನ ನೆಚ್ಚಿನ ಹವ್ಯಾಸಗಳು. ಅವನು ಫಾರ್ಮ್‌ನ ಬಲಿಷ್ಠ ದೊಡ್ಡ ನಾಯಕನಂತೆ ಎಂದು ಫಾರ್ಮ್ ಮಾಲೀಕರು ಹೇಳುತ್ತಾರೆ.

ಇದನ್ನೂ ಓದಿ: ವಿಶ್ವದಲ್ಲಿ ಅತಿ ಉದ್ದನೆಯ ಕಣ್ಣು ರೆಪ್ಪೆಯನ್ನು ಹೊಂದಿದ ಯುವತಿ ಇವಳೇ ನೋಡಿ..!