ಆಸ್ಟ್ರೇಲಿಯಾದಲ್ಲಿ ಪ್ರಯಾಣಿಕರ ಹೊಡೆದಾಟದ ಕಾರಣಕ್ಕೆ ವಿಮಾನ ತುರ್ತು ಲ್ಯಾಂಡಿಂಗ್ ಆಗಿದೆ. ವಿಮಾನವೇ ತುರ್ತು ಲ್ಯಾಂಡಿಂಗ್ ಆಗುವಷ್ಟರ ಮಟ್ಟಿಗೆ ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ಹಾವಳಿ ನೀಡಿದ್ದಾರೆ.
ಸಿಡ್ನಿ: ವಿಮಾನದಲ್ಲಿ ಹೋಗುವವರು ಸಮಾಜದ ಅತ್ಯುನ್ನತ ವರ್ಗದವರು, ಸುಶಿಕ್ಷಿತ ನಾಗರಿಕರು ಎಂಬುದು ಜನ ಸಾಮಾನ್ಯರಾದ ನಮ್ಮೆಲ್ಲರ ಅಭಿಪ್ರಾಯ, ಆದರೆ ಈ ಸುಶಿಕ್ಷಿತರೆನಿಸಿದವರೇ ವಿಮಾನದಲ್ಲಿ ಅನಾಗರಿಕರಂತೆ ವರ್ತಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ವಿಮಾನದ ಸಿಬ್ಬಂದಿಯನ್ನು ಎಳೆದಾಡುವ, ಅವರ ಮೇಲೆ ಹಲ್ಲೆ ಮಾಡುವ, ಕುಡಿದು ವಿಮಾನದಲ್ಲೇ ವಾಂತಿ ಮಾಡಿ ಸಹ ಪ್ರಯಾಣಿಕರಿಗೂ ಕಿರುಕುಳ ನೀಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಕೇಳಿ ಬರುತ್ತಿದ್ದು, ವಿಮಾನದಲ್ಲಿ ಹೋಗುವವರನ್ನು ಅಸಹ್ಯವಾಗಿ ನೋಡುವಂತಹ ಪರಿಸ್ಥಿತಿ ಬಂದಿದೆ. ಅದೇ ರೀತಿ ಈಗ ಆಸ್ಟ್ರೇಲಿಯಾದಲ್ಲಿ ಪ್ರಯಾಣಿಕರ ಹೊಡೆದಾಟದ ಕಾರಣಕ್ಕೆ ವಿಮಾನವೊಂದು ತುರ್ತು ಲ್ಯಾಂಡಿಂಗ್ ಆಗಿದೆ. ಹೀಗೆ ವಿಮಾನದೊಳಗೆ ಹೊಡೆದಾಡಿ ವಿಮಾನ ತುರ್ತು ಲ್ಯಾಂಡಿಂಗ್‌ಗೆ (emergency landing) ಕಾರಣವಾದಂತಹ ನಾಲ್ವರು ಆರೋಪಿಗಳನ್ನು ಆಸ್ಟ್ರೇಲಿಯಾ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.
ಸಾಮಾನ್ಯವಾಗಿ ಭೂಮಿಯಿಂದ ಸಾವಿರಾರು ಮೀಟರ್ ಎತ್ತರದಲ್ಲಿ ಹಾರುವ ವಿಮಾನಗಳು ತುರ್ತು ಅಗತ್ಯವಿದ್ದಲ್ಲಿ ಮಾತ್ರ ಎಮರ್ಜೆನ್ಸಿ ಲ್ಯಾಂಡಿಂಗ್ ಆಗುತ್ತವೆ. ಒಂದು ವೇಳೆ ಯಾರಾದರೂ ಸಾವನ್ನಪ್ಪಿದ್ದರೆ, ವೈದ್ಯಕೀಯ ಕಾರಣಕ್ಕೆ ಮಕ್ಕಳ ಜನನದಂತಹ ತುರ್ತು ಸಂದರ್ಭಗಳಲ್ಲಿ ಮಾತ್ರ ವಿಮಾನವನ್ನು ಅನವಾರ್ಯವಾಗಿ ಲ್ಯಾಂಡಿಂಗ್ ಮಾಡಲಾಗುತ್ತದೆ. ಒಮ್ಮೆ ವಿಮಾನ ಲ್ಯಾಂಡಿಂಗ್ ಆಗಲು ನಂತರ ಟೇಕಾಫ್ ಆಗಲು ಅತ್ಯಧಿಕ ಇಂಧನವೂ ಬೇಕಾಗುತ್ತದೆ. ಅಲ್ಲದೇ ಇದು ವಿಮಾನ ಪ್ರಯಾಣದ ವೆಚ್ಚವನ್ನು ಹೆಚ್ಚಿಸುತ್ತದೆ. ಅಲ್ಲದೇ ಏರ್ ಟ್ರಾಫಿಕ್‌ನಲ್ಲೂ ವ್ಯತ್ಯಯವನ್ನು ಉಂಟು ಮಾಡುತ್ತದೆ. ಇದೇ ಕಾರಣಕ್ಕೆ ಅತೀ ಅಗತ್ಯದ ಹೊರತಾಗಿ ವಿಮಾನಗಳು ತುರ್ತು ಲ್ಯಾಂಡಿಗ್ ಆಗುವುದಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ಪ್ರಯಾಣಿಕರ ಹೊಡೆದಾಟದ ಕಾರಣಕ್ಕೆ ವಿಮಾನ ತುರ್ತು ಲ್ಯಾಂಡಿಂಗ್ ಆಗಿದೆ. ವಿಮಾನವೇ ತುರ್ತು ಲ್ಯಾಂಡಿಂಗ್ ಆಗುವಷ್ಟರ ಮಟ್ಟಿಗೆ ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ಹಾವಳಿ ನೀಡಿದ್ದಾರೆ.
ಪೈಲಟ್ ಸೀಟಿನಡಿ ಬೆಚ್ಚನೆ ಮಲಗಿದ್ದ ಹಾವು: ವಿಮಾನ ತುರ್ತು ಲ್ಯಾಂಡಿಂಗ್
ಈ ಪ್ರಯಾಣಿಕರನ್ನು ಆಸ್ಟ್ರೇಲಿಯಾದ ಪೊಲೀಸರು ಬಂಧಿಸಿದ್ದಾರೆ. ಆಸ್ಟೇಲಿಯಾದ ಫೆಡರಲ್ ಪೊಲೀಸರು ಹಾಗೂ ನಾರ್ತರ್ನ್ ಟೆರಿಟರಿ ಪೊಲೀಸರು ಈ ವಿಚಾರವನ್ನು ಖಚಿತಪಡಿಸಿದ್ದಾಗಿ ಅಲಿನ ನ್ಯೂಸ್ .ಕಾಮ್ ವೆಬ್‌ಸೈಟ್ ವರದಿ ಮಾಡಿದೆ. ಆಸ್ಟೇಲಿಯಾದ ಫೆಡರಲ್ ಪೊಲೀಸರಿಗೆ ಈ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಏಪ್ರಿಲ್ 20 ರಂದು ಕರೆ ಬಂದಿತ್ತು. ಈ ವಿಮಾನವೂ ಕೈರ್ನ್ಸ್ ನಿಂದ (Cairns) ಗ್ರೂಟ್ ಐಲ್ಯಾಂಡ್‌ಗೆ (Groote Eylandt) ಹೊರಟಿತ್ತು. ಈ ವೇಳೆ ಪ್ರಯಾಣಿಕರು ಹೊಡೆದಾಡಿದ್ದು, ಇವರ ಜಗಳ ಬಿಡಿಸಲಾಗದೇ ವಿಮಾನ ತುರ್ತು ಲ್ಯಾಂಡಿಂಗ್ ಆಗಿದೆ.
ಅಲ್ಲದೇ ವಿಮಾನದೊಳಗೆ ಪ್ರಯಾಣಿಕರು ಬಾಟಲಿಯಿಂದ ಹೊಡೆದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದೆ ಮುಂದೆ ಸೀಟಿನವರು ಎದುರು ಬದುರಾಗಿ ನಿಂತು ಬಾಟಲಿಯಿಂದ ಹೊಡೆದಾಡಿಕೊಳ್ಳುತ್ತಿದ್ದರೆ, ಉಳಿದ ಪ್ರಯಾಣಿಕರು ಸುತ್ತ ನಿಂತು ನೋಡುತ್ತಿದ್ದಾರೆ. ಹೀಗಾಗಿ ಪೈಲಟ್ ವಿಮಾನವನ್ನು ಕ್ವೀನ್ಸ್‌ಲ್ಯಾಂಡ್‌ಗೆ ತಿರುಗಿಸಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾನೆ.
ವಿಮಾನದಲ್ಲೇ ಪ್ರಾಣಬಿಟ್ಟ ಪ್ರಯಾಣಿಕ: ದೆಹಲಿ-ದೋಹಾ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್
ಅಲ್ಲಿ ವಿಮಾನದಲ್ಲಿ ಅಸಭ್ಯ ವರ್ತನೆ ತೋರಿ ಹಲ್ಲೆ ಮಾಡಿದ, ಕ್ಯಾಬಿನ್ ಸಿಬ್ಬಂದಿ ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ನಿರಾಕರಿಸಿದ ಮಹಿಳಾ ಪ್ರಯಾಣಿಕಳನ್ನು ವಿಮಾನದಿಂದ ಕೆಳಗಿಳಿಸಿ ವಿಮಾನ ಪ್ರಯಾಣ ಮುಂದುವರಿಸಿದೆ. ಆದರೆ ವಿಮಾನ ಮತ್ತೆ ಟೇಕಾಫ್ ಆದಾಗ ಅದಾಗ ಮತ್ತೆ ಜಗಳ ಶುರುವಾಗಿದ್ದು, ವಿಮಾನದ ವಿಂಡೋವನ್ನು ಪುಡಿಗಟ್ಟಲಾಗಿದೆ. ನಂತರ ವಿಮಾನ ಅಲ್ಯಂಗುಲಾದಲ್ಲಿ (Alyangula) ಲ್ಯಾಂಡ್ ಆಗಿದ್ದು, ಅಲ್ಲಿ ಮೂವರು ಪ್ರಯಾಣಿಕರನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ 23 ವರ್ಷದ ಯುವಕ ಮತ್ತೊಬ್ಬ 23 ವರ್ಷದ ಯುವತಿ ಹಾಗೂ 22 ವರ್ಷದ ಇನ್ನೊಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆಸ್ಟ್ರೇಲಿಯಾ ಮೂಲದ ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.
ಒಟ್ಟಿನಲ್ಲಿ ಮಹಿಳೆಯರ ಜಗಳ ವಿಮಾನವೊಂದು ಎಮರ್ಜೆನ್ಸಿ ಲ್ಯಾಂಡ್ ಆಗುವುದಕ್ಕೆ ಕಾರಣವಾಗಿದೆ.