Asianet Suvarna News Asianet Suvarna News

ಕೈಕೊಟ್ಟ ಬಾಯ್‌ಫ್ರೆಂಡ್‌ : ಮುಖದ ಮೇಲೆ ಟ್ಯಾಟೋ ಹಾಕಿಸಿಕೊಂಡ ಯುವತಿ

ಇಲ್ಲೊಬ್ಬಳು ಯುವತಿ ಮುಖಕ್ಕೆ ತನಗೆ ಕೈ ಕೊಟ್ಟ ಯುವಕನ ಫೋಟೋದ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಯಾಕೆ ಅಂತೀರಾ ಈ ಸ್ಟೋರಿ ಓದಿ. 

Women tattooed his ex boyfriend face in her cheeks, her videos goes viral in social Media akb
Author
First Published Nov 4, 2022, 8:59 PM IST

ಪ್ರಪಂಚದಲ್ಲಿ ಎಂತೆಂಥಾ ಜನರಿರುತ್ತಾರೆ ನೋಡಿ. ಸಾಮಾನ್ಯವಾಗಿ ಪ್ರೀತಿಸುವವರಿಂದ ಮೋಸ ಹೋಗಿ ದೂರಾದಾಗ ಬಹುತೇಕರು ಅವರೆಲ್ಲಾ ನೆನಪುಗಳನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಾರೆ. ಬ್ರೇಕ್ ಅಪ್ ಆದ ಬಹುತೇಕರು ತಮ್ಮ ಬದುಕಿನಲ್ಲಿ ಬಹಳ ಕಾಲ ಜೊತೆಗೆ ಇದ್ದ ತಮ್ಮ ಪಾಲಿನ ಪ್ರಪಂಚವೆನಿಸಿಕೊಂಡ ವ್ಯಕ್ತಿಗಳು ದೂರಾವಾದಾಗ ಬಹುತೇಕರು ಖಿನ್ನತೆಗೆ ಜಾರುತ್ತಾರೆ. ಹಳೆಯ ನೆನಪುಗಳಿಂದ ಹೊರಬರಲು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಪ್ರೀತಿಸುವಾಗ ಪರಸ್ಪರರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡವರು ನಂತರ ದೂರಾದಾಗ ಅದನ್ನು ಅಳಿಸುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಮುಖಕ್ಕೆ ತನಗೆ ಕೈ ಕೊಟ್ಟ ಯುವಕನ ಫೋಟೋದ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಯಾಕೆ ಅಂತೀರಾ ಈ ಸ್ಟೋರಿ ಓದಿ. 

ನರಲಿ ನಜ್ಮ್ ಎಂಬಾಕೆಯೇ ಹೀಗೆ ತನ್ನ ಮುಖದ (Face) ಮೇಲೆ ತನ್ನ ಹಳೆಯ ಬಾಯ್‌ಫ್ರೆಂಡ್ (Boyfriend) ಫೋಟೋವನ್ನು ಹಚ್ಚೆ (Tattoo) ಹಾಕಿಸಿಕೊಂಡವಳು. ಈಕೆ ಪ್ರತಿದಿನ ತನ್ನ ಹಾಗೂ ತನ್ನ ಸಂಬಂಧಗಳ ಬಗ್ಗೆ ಟಿಕ್‌ಟಾಕ್ (Tiktak)ಹಾಗೂ ಯೂಟ್ಯೂಬ್‌ ಚಾನೆಲ್‌ಗಳಲ್ಲಿ (Youtube channel) ಅಪ್‌ಡೇಟ್ ನೀಡುತ್ತಿರುತ್ತಾಳೆ. ಇತ್ತೀಚೆಗಷ್ಟೇ ಈಕೆ ತನ್ನ ಬಾಯ್‌ಫ್ರೆಂಡ್‌ ಜೊತೆ ಮಗುವನ್ನು ಪಡೆದಿದ್ದಳು. ಮತ್ತು ಆತನಿಗೆ ಈ ಜೋಡಿ ಕಿಂಗ್ ಎಂದು ಹೆಸರಿಟ್ಟಿದ್ದರು. 

ದೇವರು ಕೊಟ್ಟಿದ್ದಕ್ಕೆಲ್ಲಾ ಕತ್ತರಿ ಹಾಕಿದ್ರೆ ಹಿಂಗೇ ಆಗೋದು ನೋಡಿ..!

ಆದರೆ ಇತ್ತೀಚೆಗೆ ತನ್ನ ಗೆಳೆಯ ತನಗೆ ಮೋಸ ಮಾಡಿದ ಎಂದು ನರಲಿ ನಜ್ಮ್  ದೂರುತ್ತಿದ್ದಾಳೆ. ನಾನು ಹೆರಿಗೆ ನೋವಿನಲ್ಲಿದ್ದ (Labor pain)ಸಮಯದ ವೇಳೆಯೂ ಆಕೆ ನನಗೆ ಮೋಸ ಮಾಡಿದ್ದಾನೆ ಎಂದು ಆಕೆ ತನ್ನ ಟಿಕ್‌ಟಾಕ್ ಪೋಸ್ಟ್‌ನಲ್ಲಿ ದೂರಿದ್ದಾಳೆ. ಆದರೆ ಈಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೋಸ್ಟ್‌ವೊಂದಕ್ಕೆ ಆಕೆಯ ಬಾಯ್‌ಫ್ರೆಂಡ್ ಪ್ರತಿಕ್ರಿಯಿಸಿದ್ದು, ಆಕೆಗೆ ಏನಾಗುತ್ತಿದೆ ಎಂದು ನನಗೆ ಗೊತ್ತಿಲ್ಲ, ಆಕೆ ಚೆನ್ನಾಗಿದ್ದಾಳೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾನೆ. 

ಆಕೆ ಮಗುವಿಗೆ ಜನ್ಮ ನೀಡಿದ ನಂತರ ನನ್ನ ಹಾಗೂ ಆಕೆಯ ಮಧ್ಯೆ ಏನಾಗಿದೆ ಎಂಬುದೇ ತಿಳಿಯುತ್ತಿಲ್ಲ. ಆಕೆ ನಾನು ಆಕೆಗೆ ಮೋಸ (Cheating) ಮಾಡುತ್ತಿರುವುದನ್ನು ಪತ್ತೆ ಮಾಡಿದಳು ಹಾಗೂ ನಾನು ಆಕೆಗೆ ಹೇಳಿದೆ ಈ ರೀತಿ ಇನ್ನೊಮ್ಮೆ ಆಗುವುದಿಲ್ಲ ಎಂದು, ಈಗ ಆಕೆಗೆ ನನ್ನ ಜೊತೆ ಇರಲು ಇಷ್ಟವಿಲ್ಲ ಎಂದು ಆತ ಬರೆದುಕೊಂಡಿದ್ದಾನೆ. 

ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ ಹಾಕಿಸಿ ಕೊಳ್ಳಲು ಇಲ್ಲವೇ ಇಲ್ಲ ಜಾಗ...

ಆದರೆ ತನ್ನೊಂದಿಗೆ ಬ್ರೇಕ್ ಅಪ್‌ಗೆ (Break off) ಮುಂದಾಗಿರುವ ಆಕೆ ಏಕೆ ಆಕೆಯ ಮುಖದ ಮೇಲೆ ನನ್ನ ಮುಖದ ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದು ತಿಳಿಯುತ್ತಿಲ್ಲ. ಆಕೆ ನನ್ನೊಂದಿಗೆ ಇರಲು ಇಷ್ಟಪಡುತ್ತಿಲ್ಲ. ಆದರೆ ಆಕೆ ಮುಖದ ಮೇಲೆ ನನ್ನ ಮುಖದ ಮೂರು ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾಳೆ ಅಲ್ಲದೇ ಎರಡು ಕಡೆ ನನ್ನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಇದನ್ನು ನೋಡಿದರೆ ಹುಚ್ಚೆನಿಸುತ್ತಿದೆ ಎಂದು ಆಕೆಯ ಬಾಯ್‌ಫ್ರೆಂಡ್ ಹೇಳಿಕೊಂಡಿದ್ದಾನೆ. ಆದರೆ ಇತ್ತ ತನ್ನ ಈ ಟ್ಯಾಟೂ ಬಗ್ಗೆ ಹೇಳಿಕೊಂಡಿರುವ ಆಕೆ, ಈ ಟ್ಯಾಟೂವನ್ನು ನನ್ನ ಬಾಯ್‌ಫ್ರೆಂಡ್‌ಗಾಗಿ ನಾನು ಹಾಕಿಸಿಕೊಂಡಿಲ್ಲ ಎಂದು ಹೇಳಿಕೊಂಡಿದ್ದಾಳೆ. 

ಈಕೆಯ ವಿಚಿತ್ರ ವರ್ತನೆಯ ಬಗ್ಗೆ ಅನೇಕರು ಕನಿಕರ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಈ ಮೂಲಕ ಈಕೆ ರಿವೇಂಜ್ ತೀರಿಸಿಕೊಳ್ಳುತ್ತಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.  ಬಹುಶಃ ಈಕೆ ತನ್ನ ಬಾಯ್‌ಫ್ರಂಡ್‌ನ ಎಲ್ಲರೂ ಗುರುತಿಸಬೇಕು. ಹಾಗೂ ಆತನಿಗೆ ಯಾರೂ ಸಂಗಾತಿ ಸಿಗಬಾರದು ಎಂದು ಹೀಗೆ ಮಾಡುತ್ತಿರಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಆದರೆ ಎಲ್ಲರೂ ಬ್ರೇಕ್ ಆಪ್ ಆದ ಎಲ್ಲ ನೆನಪನ್ನು ಅಳಿಸಲು ಪ್ರಯತ್ನಿಸಿದರೆ ಈಕೆ ಆತನ ಫೋಟೋವನ್ನೇ ಟ್ಯಾಟೂ ಹಾಕಿಸಿಕೊಂಡಿರುವುದು ವಿಚಿತ್ರ ಎನಿಸಿದೆ. 
 

Follow Us:
Download App:
  • android
  • ios