8 ಜನರು ಊಟ ಮಾಡಿದ್ದಕ್ಕೆ ₹77,000 ಬಿಲ್; ರೆಸ್ಟೋರೆಂಟ್ ವಿರುದ್ಧ ಯುವತಿ ಕಿಡಿ

ಲಾಬ್ಸ್ಟರ್‌ಗೆ ದುಬಾರಿ ಬೆಲೆ ಅಂತ ರೆಸ್ಟೋರೆಂಟ್‌ನವರು ಮೊದಲು ಹೇಳಿಲ್ಲ. ಹಬ್ಬದ ಸೀಸನ್‌ನಲ್ಲೂ ಇಷ್ಟು ಬೆಲೆ ಇರಲ್ಲ ಅಂತ ಯುವತಿ ಬರೆದಿದ್ದಾರೆ.

Womans Facebook Post About 77000 Rupee Lobster Bill Goes Viral

ಡೆನ್ಮಾರ್ಕ್: ರೆಸ್ಟೋರೆಂಟ್‌ಗಳಲ್ಲಿ ದುಬಾರಿ ಬೆಲೆ ವಿಚಾರ ಹೊಸದಲ್ಲ. ದುಬಾರಿ ಬಿಲ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಆಸ್ಟ್ರೇಲಿಯಾದ ಪರ್ತ್‌ನ ಯುವತಿ ರೀನ್ನಾ ಹೋ ಸಹ ಬಿಲ್ ಫೋಟೋ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಯುವತಿ ರೀನ್ನಾ  ನಾವು  ಊಟ ಮಾಡಿದ್ದು ಎಂಟು ಜನರು.  ಆದರೆ ₹77,268 ಬಿಲ್ ಕಟ್ಟಬೇಕಾಯ್ತು ಎಂದು ರೀನ್ನಾ ಹೋ ಹೇಳಿಕೊಂಡಿದ್ದಾಳೆ.

ಯುವತಿ ರೀನ್ನಾ, ತನ್ನ 8 ಗೆಳೆಯರು ಜೊತೆ  ಕ್ಯಾಂಟನ್ ಲೇನ್ ಚೈನೀಸ್ ರೆಸ್ಟೊರೆಂಟ್‌ಗೆ ತೆರಳಿದ್ದರು. ಎಂಟು ಜನರು ಸೇರಿ ಏಳು ಐಟಂಗಳನ್ನು ಆರ್ಡರ್ ಮಾಡಿದ್ದರು. ಎಂಟರಲ್ಲಿ ಏಳು ಫುಡ್‌ಗೆ 27 ಸಾವಿರ ರೂಪಾಯಿ ಬಿಲ್ ಮಾಡಲಾಗಿದೆ. ಆದ್ರೆ  ಆದ್ರೆ 'ಲೈವ್ ಲಾಬ್ಸ್ಟರ್' ಒಂದಕ್ಕೆ ₹50,484 ಬೆಲೆ ಎಂದು ಯುವತಿ ರೀನ್ನಾ ಹೇಳಿಕೊಂಡಿದ್ದಾಳೆ. ಲೈವ್ ಲಾಬ್ಸ್ಟರ್ ಬೆಲೆ ಯಾಕಿಷ್ಟು ಎಂದು ಯುವತಿ ಕೇಳಿದಾಗ, ಲಾಬ್ಸ್ಟರ್ ಬೆಲೆ ತೂಕ ಮತ್ತು ಮಾರ್ಕೆಟ್ ರೇಟ್ ಮೇಲೆ ಅವಲಂಬಿತವಾಗಿರುತ್ತದೆ ಅಂತ ರೆಸ್ಟೋರೆಂಟ್‌ನವರು ಹೇಳಿದ್ದಾರೆ. ಯುವತಿ ಲಾಬ್ಸ್ಟರ್ ಯಾವ ಮಾರುಕಟ್ಟೆಯಿಂದ ತರಲಾಗಿದೆ ಎಂದು ಯುವತಿ ಕೇಳಿದ್ರೆ ರೆಸ್ಟೋರೆಂಟ್‌ನ್ನು ಉತ್ತರ ಕೊಡಲಿಲ್ಲ ಎಂದು ಹೇಳಿಲ್ಲ. 

ಯುವತಿ ರೀನ್ನಾ ಇಷ್ಟಕ್ಕೆ ಸುಮ್ಮನಾಗದೇ ರೆಸ್ಟೋರೆಂಟ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.  ಒಂದು ಕೆಜಿ ಲಾಬ್ಸ್ಟರ್‌ಗೆ ಎಷ್ಟು ಬೆಲೆ ಎಂಬುದನ್ನು ಸಹ ರೆಸ್ಟೋರೆಂಟ್ ಎಂಬುದನ್ನು ಹೇಳಿಲ್ಲ. 5 ಎಕ್ಸ್‌ಟ್ರಾ ನೂಡಲ್ಸ್‌ಗೆ ತಲಾ ₹1,236 ಹೆಚ್ಚುವರಿ ಬೆಲೆ ಅಂತನೂ ಹೇಳಿಲ್ಲ. ನಾನು ಬಿಲ್ ಕಟ್ಟಿದ್ದೀನಿ, ಆದ್ರೆ ಏನೋ ತಪ್ಪಾಗಿದೆ ಅಂತ ಅನಿಸುತ್ತಿದೆ ಅಂತ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ರೆಸ್ಟೋರೆಂಟ್‌ ಆಹಾರದ ಬೆಲೆ ನಿಗದಿ ಸರಿಯಿಲ್ಲ ಅಂತಲೂ ಆರೋಪಿಸಿದ್ದಾರೆ. ರೀನ್ನಾ ರೆಸ್ಟೋರೆಂಟ್‌ಗೆ ಫೋನ್ ಮಾಡಿದ್ರು. ಲಾಬ್ಸ್ಟರ್ 2.04 ಕೆಜಿ ತೂಕ ಇತ್ತು, ಒಂದು ಪೌಂಡ್‌ಗೆ ₹9,916 ಬೆಲೆ ಅಂತ ರೆಸ್ಟೋರೆಂಟ್‌ನವರು ಹೇಳಿದ್ರಂತೆ. ಆದ್ರೆ ಆರ್ಡರ್ ಮಾಡುವಾಗ ಈ ವಿಷಯ ಹೇಳಿಲ್ಲ ಅಂತ ರೀನ್ನಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಆಫಿಸ್‌ನಲ್ಲಿಯೇ ಕುಚ್‌ ಕುಚ್‌; ಮುತ್ತಿನಮಳೆ ಸುರಿಸೋ ಆತುರದಲ್ಲಿ ಕ್ಯಾಮೆರಾ ಇರೋದನ್ನೇ ಮರೆತ್ರು!

ಸಾಮಾನ್ಯವಾಗಿ ಒಂದು ಪೌಂಡ್ ಲಾಬ್ಸ್ಟರ್‌ಗೆ ₹4,958-₹5,780 ಬೆಲೆ ಇರುತ್ತದೆ. ಹಬ್ಬದ ಸೀಸನ್‌ನಲ್ಲೂ ₹9,916 ಬೆಲೆ ಕೇಳೋದು ಸರಿಯಲ್ಲ ಅಂತ ರೀನ್ನಾ ಬರೆದಿದ್ದಾರೆ. 2 ಕೆಜಿ ಲಾಬ್ಸ್ಟರ್‌ನ ತಲೆ ದೊಡ್ಡದಾಗಿರಬೇಕು. ಆದ್ರೆ ಊಟದ ಸಮಯದಲ್ಲಿ ಯಾರೂ ಗಮನಿಸಿರಲಿಲ್ಲ. ಇದೀಗ ರೀನ್ನಾ ಅವರ ಪೋಸ್ಟ್ ವೈರಲ್ ಆಗಿದೆ. ರೆಸ್ಟೋರೆಂಟ್‌ನ ದುಬಾರಿ ಬೆಲೆ ವಿರುದ್ಧ ಅನೇಕರು ಬೆಂಬಲ ಸೂಚಿಸಿದ್ದಾರೆ. ವಿವಾದ ಹೆಚ್ಚಾದ ಮೇಲೆ ರೆಸ್ಟೋರೆಂಟ್‌ನವರು ಸ್ಪಷ್ಟನೆ ಕೊಟ್ಟಿದ್ದಾರೆ. ಲಾಬ್ಸ್ಟರ್ ಬೆಲೆ, ತೂಕದ ಬಗ್ಗೆ ಸ್ಪಷ್ಟವಾಗಿ ಹೇಳಿರಲಿಲ್ಲ ಅಂತ ಒಪ್ಪಿಕೊಂಡಿದ್ದಾರೆ. ಆದ್ರೆ ತಮ್ಮ ಬೆಲೆ ನಿಗದಿ ಸರಿ ಅಂತ ವಾದಿಸಿದ್ದಾರೆ.

ಇದನ್ನೂ ಓದಿ: ನಾನಿಲ್ಲಿ, ಅವಳಲ್ಲಿ ಮಧ್ಯೆ ಮೂರು ಮಕ್ಕಳು; ರಾತ್ರಿಯ ನೋವು ತೋಡಿಕೊಂಡ ಪೋಲಿ ಗಂಡ

Latest Videos
Follow Us:
Download App:
  • android
  • ios