ನಾನಿಲ್ಲಿ, ಅವಳಲ್ಲಿ ಮಧ್ಯೆ ಮೂರು ಮಕ್ಕಳು; ರಾತ್ರಿಯ ನೋವು ತೋಡಿಕೊಂಡ ಪೋಲಿ ಗಂಡ

ಒಬ್ಬ ವ್ಯಕ್ತಿ ತನ್ನ ಪತ್ನಿ ಮಕ್ಕಳಿಂದಾಗಿ ಹಾಸಿಗೆಯಲ್ಲಿ ತನ್ನಿಂದ ದೂರ ಮಲಗಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋದಲ್ಲಿ ಮಕ್ಕಳ ನಡುವೆ ಮಲಗಿರುವ ಪತ್ನಿಯನ್ನು ತೋರಿಸುತ್ತಾ ತನ್ನ ನೋವನ್ನು ಹಂಚಿಕೊಂಡಿದ್ದಾನೆ.

Husband Share Bedroom Private Video and Netizen trolled

Viral Video: ಜನರು ಬೆಳಗ್ಗೆ ಏಳುತ್ತಲೇ ಮೊಬೈಲ್ ಹಿಡಿದುಕೊಂಡು ಸೋಶಿಯಲ್ ಮೀಡಿಯಾ ಖಾತೆಗಳನ್ನು ಓಪನ್ ಮಾಡುತ್ತಾರೆ. ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಇರೋ ಪರಿಣಾಮ ಎಲ್ಲರೂ ತಮ್ಮ ಸುತ್ತಲೂ ನಡೆಯುವ ಘಟನೆ ಮತ್ತು ತಮ್ಮ ದಿನಚರಿಯನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಒಂದಿಷ್ಟು ಮಂದಿ ಖಾಸಗಿ ಕ್ಷಣಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡು ಟ್ರೋಲ್ ಆಗುವ ಮೂಲಕ ಪೇಚಿಗೆ ಸಿಲುಕುತ್ತಾರೆ.  ಇದೀಗ ಅಂತಹವುದೇ ಒಂದು ವಿಡಿಯೋ ವೈರಲ್ ಆಗಿದ್ದು, ಬೆಡ್‌ರೂಮ್‌ನಲ್ಲಿ  ತನ್ನ  ಪತ್ನಿ ದೂರ ಮಲಗಿರೋದನ್ನು ಹೇಳಿದ್ದಾನೆ. ಮಕ್ಕಳಾದಂತೆ ಹೇಗೆ ಪತ್ನಿ ಹಾಸಿಗೆಯಲ್ಲಿ ದೂರವಾಗಿದ್ದಾಳೆ ಎಂಬುದನ್ನು ಸಹ ವಿವರಿಸಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು, ಈ ವಿಷಯವನ್ನ ಬಹಿರಂಗವಾಗಿ ಹಂಚಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋವನ್ನು Pandurang Jyoti ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 58 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು,  600ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ಪಾಂಡುರಂಗ ಜ್ಯೋತಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ 1.1  ಲಕ್ಷಕ್ಕೂ ಅಧಿಕ ನೆಟ್ಟಿಗರು ಫಾಲೋ ಮಾಡುತ್ತಿದ್ದಾರೆ. ಪಾಂಡುರಂಗ ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಊರಿನಲ್ಲಿ ಆಂಜನೇಯನ ದೇವಸ್ಥಾನ ಇದೆ ಅಲ್ಲವಾ ಅಲ್ಲಿ ಹೋಗಿ ಮಲಗು ಎಂದು ತರೇಹವಾರಿ ಕಮೆಂಟ್‌ಗಳು ಬಂದಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ ಪಾಂಡುರಂಗ ಎಂಬ ವ್ಯಕ್ತಿ, ಇವನು ನನ್ನ ಮೊದಲ ಮಗ, ಇವನು ಎರಡನೇಯವನು, ಆಕೆ ಮಗಳು. ಕೊನೆಯಲ್ಲಿ ಗೋಡೆಯತ್ತ ಮುಖ ಮಾಡಿರುವ ಮಲಗಿರೋಳು  ನನ್ನ ಹೆಂಡತಿ. ಮೊದಲು ಇಲ್ಲಿ ಮಲಗಿದ್ದವಳು. ಮಕ್ಕಳು ಬಂದ ನಂತರ ಹೆಂಡತಿ ದೂರವಾಗುತ್ತಾ ಹೋದಳು.  ನಮ್ಮಿಬ್ಬರ ಮಧ್ಯೆ  ಮೂರು ಮಕ್ಕಳು ಮಲಗಿದ್ದರಿಂದ ನಾನು ಈ ಕಡೆ, ಅವಳು ಆ ಕಡೆ ಎಂದು ಪಾಂಡುರಂಗ ತನ್ನ ನೋವನ್ನು ತೋಡಿಕೊಂಡಿದ್ದಾನೆ.

ಇದನ್ನೂ ಓದಿ: ಸೋದರನಿಂದ ಗರ್ಭಿಣಿಯಾದೆ, ಹಾಗಾಗಿ ಮದ್ವೆ ಆದ್ವಿ; ದೇವಸ್ಥಾನದಲ್ಲಿ ವಿಷಯ ರಿವೀಲ್ ಮಾಡಿದ ಯುವತಿ

ಈ ವಿಡಿಯೋ ನೋಡಿದ ನೆಟ್ಟಿಗರು, 3 ಸಾಕು ಬಿಡೋ ಮಾರಾಯ, ಈ ವಾರದ ಕಿಚ್ಚನ ಚಪ್ಪಾಳೆ ಇವನಿಗೆ ಎಂದಿದ್ದಾರೆ. ಪಾಪ ನಿನ್ ಕಷ್ಟ ನೋಡೋಕೆ ಆಗ್ತಿಲ್ಲ. ಹೀಗೆ ಆಗಬಾರ್ದಿತ್ತು ಡೇ ಟೈಮ್ ಎಂಜಾಯ್ ಮಾಡು ಗುರು. ನೈಟ್ ಆಗೋಲ್ಲ ಅದೇ ಗತಿ. ನಿನ್ನ ಗೋಳು ನನಗ‌ ಅರ್ಥ ಆಯ್ತು ಬೀಡು ಅಣ್ಣಾ. ಮಲಗೋದನ್ನು ವಿಡಿಯೋ ಮಾಡಬೇಕಲೇ ತು ಏನ್ ಕರ್ಮನೋ ನಿಮ್ಮದೆಲ್ಲಾ. ಸುಮ್ಮನೆ ಮುಚ್ಕೊಂಡು ಮಲಕೋ, ಇಲ್ಲ ಬಾ ಮನೆ ಕಟ್ಟಿಸಿಕೊಡ್ತೀವಿ. ನನಗೊಂದು ಸಂದೇಹ ಮೊದಲನೇ ಮಗು ಹುಟ್ಟಿದಮೇಲೆ ನಿಮ್ ಹೆಂಡತಿ ಮಗುವನ್ನು ಮದ್ಯ ಮಲಗಿಸಿದರು. ಅಂದ್ಮೇಲೆ ಎರಡನೇ ಮಗು ಎಂಗಾಯ್ತು? ಮದ್ಯ ಮಕ್ಕಳನ್ನೇ ಮಲಗಿಸಿ ಇಷ್ಟು ಮಕ್ಕಳಾಗಿದಾವೆ ಇನ್ನೇನಾದ್ರೂ ನಿನ್ ಪಕ್ಕ ಮಲಗಿದಿದ್ರೆ ಅಷ್ಟೇ ಕತೆ ಎಂದು ನೆಟ್ಟಿಗರು ಪೋಲಿ ಕಮೆಂಟ್ ಮಾಡಿದ್ದಾರೆ.

ವಿಡಿಯೋ ಲಿಂಕ್: https://www.instagram.com/p/DEv8WDtvqGu/

ಇದನ್ನೂ ಓದಿ: ಆಫಿಸ್‌ನಲ್ಲಿಯೇ ಕುಚ್‌ ಕುಚ್‌; ಮುತ್ತಿನಮಳೆ ಸುರಿಸೋ ಆತುರದಲ್ಲಿ ಕ್ಯಾಮೆರಾ ಇರೋದನ್ನೇ ಮರೆತ್ರು!

Latest Videos
Follow Us:
Download App:
  • android
  • ios