* ಕಾರಿನಲ್ಲಿ ಜೋಡಿಯ ರೊಮ್ಯಾನ್ಸ್* ಗೆಳೆಯನಿಗಿದ್ದ ಕಾಯಿಲೆ ತಿಳಿಯದೆ ಹೆಜ್ಜೆ ಮುಂದಿಟ್ಟ ಯುವತಿ* ಲೈಂಗಿಕ ಸೋಂಕು ತಗುಲಿದಾಕೆಗೆ ಸಿಕ್ತು ಭಾರೀ ಮೊತ್ತ

ವಾಷಿಂಗ್ಟನ್(ಜೂ.09): ಯುವತಿಯೊಬ್ಬಳು ತಾನು ಮಾಜಿ ಗೆಳೆಯನ ಜೊತೆ ಕಾರಿನಲ್ಲಿ ಸೆಕ್ಸ್‌ ಮಾಡಿ ಲೈಂಗಿಕ ಸೋಂಕಿಗೆ ಒಳಗಾಗಿದ್ದೇನೆಂದು ವಾದಿಸಿದ್ದಾಳೆ. ಬಳಿಕ ತನ್ನ ಮಾಜಿ ಪ್ರಿಯಕರನ ಕಾರಿನ ಇನ್ಶೂರೆನ್ಸ್‌ ಕಂಪನಿಯಿಂದ ಈ ಬಗ್ಗೆ ಪರಿಹಾರ ನೀಡುವಂತೆ ಕೇಳಿದ್ದಾಳೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಪ್ರಕರಣದಲ್ಲಿ ಯುವತಿಗೆ ಸುಮಾರು 40 ಕೋಟಿ ರೂ. ಈ ಘಟನೆಯನ್ನು ನ್ಯಾಯಾಲ ಕಾರಿನಲ್ಲಿ ಸಂಭವಿಸಿದ ಅಪಘಾತ ಎಂದು ಪರಿಗಣಿಸಿದೆ.

ಅಮೆರಿಕದ ಮಿಸೌರಿಯಲ್ಲಿ ಈ ಪ್ರಕರಣ ನಡೆದಿದೆ. 2014 ರಲ್ಲಿ, ಈ ಜೋಡಿ ಹ್ಯುಂಡೈ ಜೆನೆಸಿಸ್ ಕಾರಿನಲ್ಲಿ ಸೆಕ್ಸ್‌ ಮಾಡಿದ್ದರು. ವಾಸ್ತವವಾಗಿ, ಹುಡುಗಿಯ ಮಾಜಿ ಗೆಳೆಯ ಲೈಂಗಿಕವಾಗಿ ಹರಡುವ ರೋಗವನ್ನು ಹೊಂದಿದ್ದ. ಇದರಿಂದ ಯುವತಿಗೂ ಆ ರೋಗ ಬಂದಿತ್ತು. ಪ್ರಕರಣದ ನಡೆದ 5 ವರ್ಷಗಳ ನಂತರ, Missouri Court of Appeals ಈಗ GEICO ಜನರಲ್ ಇನ್ಶುರೆನ್ಸ್ ಕಂಪನಿ ಯುವತಿಗೆ ಭಾರೀ ಹಾನಿಯನ್ನು ಪಾವತಿಸುವಂತೆ ತೀರ್ಪು ನೀಡಿದೆ. ಯಾಹೂ ನ್ಯೂಸ್ ವರದಿಯ ಪ್ರಕಾರ, ಮೂವರು ನ್ಯಾಯಾಧೀಶರ ಸಮಿತಿಯು ಈ ನಿರ್ಧಾರವನ್ನು ನೀಡಿದೆ.

ಡೈಲಿ ಮೇಲ್‌ಗೆ ಲಭ್ಯವಾದ ಕೋರ್ಟ್‌ ಪೇಪರ್‌ಗಳ ಪ್ರಕಾರ, ಯುವತಿ ಫೆಬ್ರವರಿ 2021 ರಲ್ಲಿ GEICO ನಿಂದ ಹಾನಿಯನ್ನು ಕೋರಿದ್ದಳು. ಜೋಡಿ 2017 ರಿಂದ ಲೈಂಗಿಕ ಸಂಬಂಧವನ್ನು ಹೊಂದಿದ್ದರು. ನ್ಯಾಯಾಲಯದ ದಾಖಲೆಗಳ ಪ್ರಕಾರ, ಯುವತಿ ತನ್ನ ಮಾಜಿ ಗೆಳೆಯನಿಗೆ ಗಂಟಲು ಕ್ಯಾನ್ಸರ್ ಟ್ಯೂಮರ್ ಮತ್ತು HPV (ಹ್ಯೂಮನ್ ಪ್ಯಾಪಿಲೋಮವೈರಸ್) ಇದೆ ಎಂದು ಆರೋಪಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಕಾಂಡೋಂ ಬಳಸದೆ ಅವರೊಂದಿಗೆ ಸಂಸಾರ ನಡೆಸುತ್ತಿದ್ದರು.

ಮೇ 2021 ರಲ್ಲಿ, ದಂಪತಿ ವಾಹನದೊಳಗೆ ಸೆಕ್ಸ್‌ ನಡೆಸಿದ್ದರೆಂದು ನ್ಯಾಯಾಧೀಶರು ಕಂಡುಕೊಂಡಿದ್ದಾರೆ. ಈ ಕಾರಣದಿಂದಾಗಿ, ಹುಡುಗಿಗೆ HPV ಸೋಂಕು ತಗುಲಿದ್ದು, ಸೋಂಕಿನ ಬಗ್ಗೆ ಮಾಹಿತಿ ಮರೆಮಾಚಿದ್ದಕ್ಕೆ ಮಾಜಿ ಪ್ರಿಯಕರನನ್ನೇ ಹೊಣೆ ಮಾಡಲಾಗಿದ್ದು, ಹುಡುಗಿಗೆ 40 ಕೋಟಿ ರೂ. ನಿಡುವಂತೆ ಆದೇಶಿಸಿದೆ. ಈ ಮೊತ್ತವನ್ನು GEICO ನಿಂದ ಮಹಿಳೆಗೆ ಹಾನಿ ಮತ್ತು ಗಾಯಗಳುಂಟು ಮಾಡಿದ್ದಕ್ಕೆ ನೀಡಲಾಗುತ್ತದೆ.

ತೀರ್ಪಿನ ನಂತರ, GEICO ಈ ವಿಷಯದ ಮರು-ವಿಚಾರಣೆಗಾಗಿ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ಮೂವರು ನ್ಯಾಯಾಧೀಶರ ಸಮಿತಿ ಕೂಡ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.