* ವಿಮಾನ ನಿಲ್ದಾಣಕ್ಕೆ ಬಿಕಿನಿಯಲ್ಲಿ ಆಗಮಿಸಿದ ಮಹಿಳೆ* ಕೊರೋನಾ ನಿಯಮಗಳನ್ನು ಪಾಲಿಸಿ ಮಾಸ್ಕ್ ಧರಿಸಿದ್ದಳು*  ಮಿಯಾಮಿ ವಿಮಾನ  ನಿಲ್ದಾಣಕ್ಕೆ ಸೀದಾ ಬೀಚ್ ನಿಂದಲೇ ಬಂದಳಾ?

ಮಿಯಾಮಿ(ಸೆ. 05) ಆಕೆ ವಿಮಾನ ಏರುವ ತವಕದಲ್ಲಿದ್ದಳು.. ಬೀಚ್ ನಿಂದ ಸೀದಾ ಏರ್ ಪೋರ್ಟ್ ಗೆ ಬಂದಿದ್ದಳೋ ಅದೂ ಗೊತ್ತಿಲ್ಲ. ಬಿಕಿನಿಯಲ್ಲೇ ಆಕೆ ಹಾಜರಿ ನೀಡಿದ್ದಳು!

ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣಕ್ಕೆ ಯುವತಿಯೊಬ್ಬಳು ಬಿಕಿನಿಯಲ್ಲಿ ಆಗಮಿಸಿದ್ದಾಳೆ. ಹಾ...ಕೊರೋನಾ ನಿಯಮದ ಕಾರಣ ಫೇಸ್ ಮಾಸ್ಕ್ ಧರಿಸಲು ಆಕೆ ಮರೆತಿಲ್ಲ.

ಬೆಂಕಿ ಹಚ್ಚಿದ ದಿಶಾ ಪಠಾಣಿ ಬಿಕಿನಿ ಲುಕ್

ಮಹಿಳೆಯ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಬಗೆ ಬಗೆಯ ಕಮೆಂಟ್ ಗಳು ಹರಿದು ಬಂದಿವೆ. 
ಆಕೆಯನ್ನು ನಿಜಕ್ಕೂ ಮೆಚ್ಚಿಕೊಳ್ಳಲೇಬೇಕು.. ಬಿಕಿನಿ ಧರಿಸಿದ್ದರೆ ಏನಾಯಿತು ಫೇಸ್ ಮಾಸ್ಕ್ ಮರೆತಿಲ್ಲ ಎಂದು ಕೆಲವರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮಹಿಳೆ ಯಾವಾಗ ಪಾಸ್ ಆದಳು ನಮಗೂ ಒಂದು ಚೂರು ಹೇಳಬಾರದಿತ್ತಾ? ಎಂದು ಪ್ರಶ್ನೆ ಮಾಡಿದವರು ಇದ್ದಾರೆ. 

View post on Instagram