ಮತ್ತೆ ದಿಶಾ ಬಿಕಿನಿ ಹವಾ... ಹಾಟ್ ವಿಡಿಯೋದಲ್ಲಿ ಅದೇನೋ ಮಿಸ್ಸಿಂಗ್!
ಮುಂಬೈ(ಆ. 26) ಬಾಲಿವುಡ್ ನಟಿ ದಿಶಾ ಪಠಾನಿ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಮಾಲ್ಡೀವ್ಸ್ ನಲ್ಲಿ ರಜಾ ದಿನ ಕಳೆದ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ತಮ್ಮ ಇಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ದಿಶಾ ಮಿಸ್ಸಿಂಗ್ ಎಂದು ಬರೆದುಕೊಂಡಿದ್ದಾರೆ. ತಮ್ಮ ಬಾಯ್ಫ್ರೆಂಡ್ ಟೈಗರ್ ಅಂತೆ ತಾವೂ ಫಿಟ್ನೆಸ್ ಫ್ರೀಕ್. ಈಕೆ ಪ್ರತಿ ಬಾರಿ ಮಿಂಚೋದು ಬಿಕಿನಿಯಲ್ಲೇ.
ನಟಿ ಪೋಸ್ಟ್ ಮಾಡುವ ಸ್ವಿಮ್ ಸೂಟ್ ಫೋಟೋ ಬೇಗನೆ ವೈರಲ್ ಆಗುತ್ತವೆ. ಟೈಗರ್ ಶ್ರಾಫ್ ಗೆಳತಿ ಒಂದಲ್ಲ ಒಂದು ಬಿಕಿನಿ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ.
ಕೊರೋನಾ ಕಾರಣಕ್ಕೆ ಸಿನಿಮಾ ಕೆಲಸಗಳು ನಿಂತಿದ್ದು ಸೆಲೆಬ್ರಿಟಿಗಳು ದೇಶ ಬಿಟ್ಟು ಪ್ರವಾಸಕ್ಕೂ ಹೋಗಿಲ್ಲ ಎಂಬುದನ್ನು ದಿಶಾ ಸೂಚ್ಯವಾಗಿ ಹೇಳಿದ್ದಾರೆ.
ಮಿಲಯನ್ ಲೆಕ್ಕದಲ್ಲಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಹೊಂದಿರುವ ನಟಿ ಬಾಲಿವುಡ್ ನ ಹಾಟ್ ಕೇಕ್ ಎಂದೇ ಹೆಸರು ಪಡೆದುಕೊಂಡವರು.
ಅಭಿಮಾನಿಗಳು ದಿಶಾ ಅವತಾರವನ್ನು ಕೊಂಡಾಡಿದ್ದು ಫಿಟ್ ಆಂಡ್ ಫೈನ್ ಎಂದು ಫುಲ್ ಮಾರ್ಕ್ಸ್ ನೀಡಿದ್ದಾರೆ. ಓ ದೇವರೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.