ಬೆಡಗಿಯೊಬ್ಬಳು ವಿಮಾನದ ಹೊರಗೆ ಫುಲ್‌ಅಪ್ ಮಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ಈ ಸಾಹಸಕ್ಕೆ ನೋಡುಗರು ಬೆಚ್ಚಿದ್ದಾರೆ. ಜೊತೆಗೆ ಆಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಕೈಡೈವ್ ಒಂದು ಸಾಹಸ ಕ್ರೀಡೆ, ಸ್ಕೈಡೈವ್‌ ಮಾಡಲು ಗಟ್ಟಿ ಗುಂಡಿಗೆ ಬೇಕು. ಅತ್ಯಂತ ಎತ್ತರದಿಂದ ಸೊಂಟಕ್ಕೆ ಹಗ್ಗ ಕಟ್ಟಿ ಕೆಳಗೆ ಹಾರುವ ಪ್ರಕ್ರಿಯೆಯಾದ ಈ ಸ್ಕೈಡೈವ್‌ ಎಲ್ಲರಿಗೂ ಸುಲಭ ಸಾಧ್ಯವಲ್ಲ. ಇಂತಹ ಸ್ಕೈಡೈವ್‌ ಸಾಹಸಕ್ಕೂ ಮೊದಲು ಇನ್ನು ಒಂದು ಹೆಜ್ಜೆ ಮುಂದೆ ಇಟ್ಟಿರುವ ಬೆಡಗಿಯೊಬ್ಬಳು ವಿಮಾನದ ಹೊರಗೆ ಫುಲ್‌ಅಪ್ ಮಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ಈ ಸಾಹಸಕ್ಕೆ ನೋಡುಗರು ಬೆಚ್ಚಿದ್ದಾರೆ. ಜೊತೆಗೆ ಆಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುಶ್ಅಪ್ ಪುಲ್ ಅಪ್ಸ್ ಮುಂತಾದ ಸಾಹಸವನ್ನು ಭೂಮಿ ಮೇಲೆ ಮಾಡುವುದು ಸಾಮಾನ್ಯ. ಅನೇಕರು ನೆಲದ ಮೇಲಿಂದ ಫುಲ್‌ ಅಪ್‌ ಮಾಡುವುದಕ್ಕೆ ಭಾರಿ ಕಷ್ಟ ಪಡುತ್ತಾರೆ. ಆದರೆ ನಡು ಆಕಾಶದಲ್ಲಿ ವಿಮಾನದಿಂದ ಹೊರಗೆ ನೇತಾಡುತ್ತಾ ಮಾಡುವುದೆಂದರೆ ಸುಲಭದ ಮಾತಲ್ಲ. ಇದೊಂದು ಅಸಾಮಾನ್ಯ ಸಾಹಸವೇ ಸರಿ. ಸ್ಕೈಡೈವಿಂಗ್‌ನಂತಹ ಸಾಹಸಗಳಲ್ಲಿ ತೊಡಗಿಸಿಕೊಳ್ಳಲು ಧೈರ್ಯ ಮತ್ತು ನಿರ್ಭೀತ ಮನಸ್ಸಿನ ಅಗತ್ಯವಿರುತ್ತದೆ. ಅಂತಹ ಧೈರ್ಯಶಾಲಿಗಳಲ್ಲಿ ಒಬ್ಬರು ಕೇಟೀ ವಸೆನಿನಾ ಒಬ್ಬರು, ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಾಹಸದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

View post on Instagram

ಎಬ್ಸ್ ವರ್ಕೌಟ್‌ಗೆ ಇರುವ ಒಂದೇ ಒಂದು ದಾರಿ ಎಂದು ಬರೆದು #abworkout #skydiving ಹ್ಯಾಷ್‌ಟ್ಯಾಗ್ ಜೊತೆ ಈ ವಿಡಿಯೋವನ್ನು ಶೇರ್ ಮಾಡಿದ್ದು, ವಿಮಾನದ ಪಕ್ಕದಲ್ಲಿರುವ ಸ್ಟೀಲ್‌ ರಾಡ್‌ ಹಿಡಿದು ಅವರು ವರ್ಕೌಟ್ ಮಾಡ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹೀಗೆ ಮಾಡಿ ಸೆಕೆಂಡುಗಳಲ್ಲಿ ಅವರು ಅಲ್ಲಿಂದ ಕೈ ಬಿಟ್ಟು ಸ್ಕೈಡೈವ್ ಮಾಡುತ್ತಿದ್ದು, ಇದು ನೋಡುಗರನ್ನು ಕೆಲ ಕಾಲ ಬೆಚ್ಚಿ ಬೀಳಿಸುತ್ತಿದೆ. ಇಷ್ಟು ಭಾರೀ ಎತ್ತರದಲ್ಲಿ ಮಹಿಳೆಯ ಅನಿರೀಕ್ಷಿತ ಸಾಹಸಕ್ಕೆ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. 49 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ವಿಡಿಯೋ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. 

ಭಾರತದ ಫ್ಲ್ಯಾಗ್ ಹಿಡಿದು ಸ್ಕೈ ಡೈವಿಂಗ್ ಮಾಡಿದ ಸಫಾನ್‌ಗೆ ಅಣ್ಣಾಮಲೈ ಸ್ಫೂರ್ತಿ!

ನಾನಂತೂ ಈ ಸಾಹಸ ಮಾಡಲು ಎಂದಿಗೂ ಪ್ರಯತ್ನಿಸುವುದಿಲ್ಲ. ಇದನ್ನು ಮಾಡಲು ಹೋದರೆ ಖಂಡಿತ ನನಗೆ ಹೃದಯಾಘಾತವಾಗಬಹುದು. ಆದರೆ ಇಂತಹ ಕ್ಷಣದಲ್ಲೂ ಆ ಮಹಿಳೆ ಮಾತ್ರ ತುಂಬಾ ಉತ್ಸಾಹದಿಂದ ಇದ್ದಾರೆ ಎಂದು ಇದನ್ನು ನೋಡಿದ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ವ್ಯಾಯಾಮದಲ್ಲೇ ಇದೊಂದು ಮೈಲುಗಲ್ಲು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೇಟೀ ವಾಸೆನಿನಾ 1.39 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ ಮತ್ತು ಅವರು ತಮ್ಮ ಸಾಹಸಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಇಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಅಮೆರಿಕಾದಲ್ಲಿ ಕನ್ನಡದ ಸ್ಕೈ ಡೈವಿಂಗ್ ಪವರ್!

ಕೆಲ ದಿನಗಳ ಹಿಂದೆ ಯುವಕನೋರ್ವ ಆಕಾಶದಲ್ಲಿ ಫುಲ್ ಅಪ್‌ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಹಾರುತ್ತಿರುವ ಹೆಲಿಕಾಪ್ಟರ್‌ನ ಬದಿಯ ರಾಡ್‌ ಹಿಡಿದುಕೊಂಡು ಯುವಕನೋರ್ವ ಫುಲ್ ಅಪ್‌ ಮಾಡಿದ್ದ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಈ ಮೂಲಕ ಆತ ಗಿನ್ನೆಸ್ ಬುಕ್‌ ಅಪ್ ವರ್ಲ್ಡ್‌ ರೆಕಾರ್ಡ್ ಪುಟ ಸೇರಿದ್ದ. ಸ್ವತ ಗಿನ್ನೆಸ್ ರೆಕಾರ್ಡ್‌ ಸಂಸ್ಥೆ ಯುವಕನ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಅರ್ಮೇನಿಯಾದ ರೋಮನ್ ಸಹರಾದ್ಯಾನ್ ಎಂಬವರೇ ಹೀಗೆ ರೆಕಾರ್ಡ್ ಮಾಡಿದ ಯುವಕ.