ಗರ್ಭಿಣಿಯಿದ್ದಾಗಲೇ ಮತ್ತೆ ಗರ್ಭ ಧರಿಸಿದ ಮಹಿಳೆ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನಿಂದ ಬಯಲಾಯ್ತು ವಿಚಿತ್ರ

ನ್ಯೂಯಾರ್ಕ್‌(ಡಿ2): ಈಗಾಗಲೇ ಗರ್ಭಿಣಿಯಾಗಿರುವ ಮಹಿಳೆ ಮತ್ತೆ ಗರ್ಭಿಣಿಯಾಗುವುದು ಸಾಧ್ಯ ಎಂದು ನಿಮಗನಿಸುತ್ತಿದೆಯೇ ಆದರೆ ಸಾಧ್ಯ ಎಂಬಂತಹ ಘಟನೆಯೊಂದು ವಿದೇಶದಲ್ಲಿ ನಡೆದಿದೆ. ಈಗಾಗಲೇ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದ ಮಹಿಳೆಯೊಬ್ಬರು ಮತ್ತೆ ಗರ್ಭಿಣಿಯಾದ ಘಟನೆ ನಡೆದಿದೆ. ಅಲ್ಟ್ರಾಸೌಂಡ್‌ಗೆ ಹೋದಾಗ ಮಹಿಳೆ ಒಮ್ಮೆ ಗರ್ಭಿಣಿಯಾಗಿ 10 ದಿನಗಳ ನಂತರ ಮತ್ತೆ ಗರ್ಭಿಣಿಯಾಗಿದ್ದಾಳೆಂದು ತಿಳಿದು ಬಂದಿದೆ. ಹೀಗಾಗಿ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದ ಮಹಿಳೆಯ ಹೊಟ್ಟೆಯೊಳಗೆ ತ್ರಿವಳಿ ಮಕ್ಕಳು ಬೆಳೆದವು ಎಂಬುದು ತಿಳಿದು ಬಂದಿದೆ. 

ಚಾರ್ಲೊಟ್‌ (Charlotte) ಹೆಸರಿನ ಅಮೆರಿಕಾ ಮೂಲದ ಮಹಿಳೆ ತಮ್ಮ ಈ ಅನುಭವವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯ ಪ್ರಕಾರ ಆಕೆ ಹಾಗೂ ಪತಿ ಸಹಜವಾಗಿ, ನೈಸರ್ಗಿಕವಾಗಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಅಲ್ಲದೇ ಇಬ್ಬರು ಈ ಬಗ್ಗೆ ತುಂಬಾ ಖುಷಿಯಾಗಿದ್ದರು. ಇದು ಆಕೆಗೆ ಚೊಚ್ಚಲ ಗರ್ಭಧಾರಣೆಯಾಗಿದೆ. ಅಲ್ಟ್ರಾಸೌಂಡ್‌ ವೇಳೆ ವೈದ್ಯರು ಗರ್ಭದಲ್ಲಿ ಮೂರು ಮಗು ಇರುವ ಬಗ್ಗೆ ತಿಳಿಸಿದಾಗ ಆಕೆಗೆ ಮಾತೇ ಹೊರಡದಂತಾಗಿತ್ತು. ವೈದ್ಯರು ಅವಳಿಗಳ ಗರ್ಭಧಾರಣೆಯಾದ 10 ದಿನಗಳ ಬಳಿಕ ಈ ಮೂರನೇ ಮಗುವಿನ ಗರ್ಭಧಾರಣೆಯಾಗಿದೆ ಎಂದು ಹೇಳಿದರು ಆದರೆ ಆಕೆಯ ಪತಿ ಇದನ್ನು ನಂಬಲು ಸಿದ್ಧವಿರಲಿಲ್ಲ. ಇದೊಂದು ಎಪ್ರಿಲ್‌ ಫೂಲ್ ಅಲ್ಲವೇ ಎಂದು ಆತ ಕೇಳಿದ ಎಂದು ಮಹಿಳೆ ಹೇಳಿದ್ದಾಳೆ.

Pregnancy Dreams: ಈ ಒಂದು ಕಾರಣಕ್ಕಾಗಿ ಗರ್ಭಿಣಿಯರಿಗೆ ದುಸ್ವಪ್ನಗಳು ಹೆಚ್ಚು..

ಸದ್ಯ ಈಕೆಯ ಟಿಕ್‌ಟಾಕ್‌ ಪ್ರೊಫೈಲ್‌ ಸ್ವಲ್ಪ ಪ್ರಸಿದ್ದವಾಗಿದ್ದು, ಮೂರು ಮಕ್ಕಳ ತಾಯಿ ಒಂದು ಇನ್ಸ್ಟಾಗ್ರಾಮ್‌ ಖಾತೆಯನ್ನು ಕೂಡ ತೆರೆದಿದ್ದು ತಮ್ಮ ತಾಯ್ತನದ ಜೀವನವನ್ನು ಈ ಖಾತೆಯಲ್ಲೂ ಫೋಟೋಗಳನ್ನು ಹಾಕುವ ಮೂಲಕ ಅವರ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಗರ್ಭಾವಸ್ಥೆಯ ಆರಂಭದಲ್ಲಾದ ಘಟನೆಯನ್ನು ಅವರೀಗ ಹಂಚಿಕೊಂಡಿದ್ದು, ಪ್ರಸ್ತುತ ಅವರೀಗ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೂರು ಕೂಡ ಹೆಣ್ಣು ಮಕ್ಕಳೇ.

ಮಗುವನ್ನು ಹೆಚ್ಚಾಗಿ ಎಡಗೈಯಲ್ಲಿ ಎತ್ತಲು ಕಾರಣ ಏನು?

ನನ್ನ ಹೊಟ್ಟೆಯೂ ತುಂಬಾ ದೊಡ್ಡದಾಗಿತ್ತು. ಹಾಗೂ ಮಕ್ಕಳು ನವಮಾಸ ತುಂಬುವುದಕ್ಕೂ ಮೂರು ತಿಂಗಳು ಮೊದಲೇ ಜನಿಸಿದವು. ನಂತರದ 65 ದಿನಗಳು ನಮಗೆ ತುಂಬಾ ಕಷ್ಟದ ದಿನಗಳಾಗಿತ್ತು. ಮೂರು ಮಕ್ಕಳನ್ನು ಇನ್‌ಕ್ಯೂಬೆಟರ್‌ನಲ್ಲಿ ಇಡಲಾಗಿತ್ತು. ನಂತರ ಮೂರು ಮಕ್ಕಳನ್ನು ಕರೆದುಕೊಂಡು ಮನೆಗೆ ಬಂದ ದಿನ ನನ್ನ ಬದುಕಿನ ಅತ್ಯುತ್ತಮವಾದ ದಿನ. ನಾನು ಈ ಮೂವರು ಮಕ್ಕಳನ್ನು ಪ್ರೀತಿಸುತ್ತೇನೆ. ನಾನು ತುಂಬಾ ಖುಷಿಯಾಗಿದ್ದು, ಈ ವಿಚಾರವನ್ನು ಹಂಚಿಕೊಳ್ಳಲು ಖುಷಿಯಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಮಕ್ಕಳಿಗೆ ಇವಿ, ಜಾರ್ಜಿನಾ ಹಾಗೂ ವಿವಿನ್ನೆ ಎಂದು ಹೆಸರಿಡಲಾಗಿದೆ. ಈ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಮಕ್ಕಳು ತುಂಬಾ ಮುದ್ದಾಗಿವೆ. ತಮ್ಮ ತ್ರಿವಳಿ ಮಕ್ಕಳ ಫೋಟೋಗಳನ್ನು ಚಾರ್ಲೆಟ್‌ ಇನ್ಸ್ಟಾಗ್ರಾಮ್‌ನಲ್ಲಿ ಆಗಾಗ ಹಾಕುತ್ತಿರುತ್ತಾರೆ. 

ಗರ್ಭಿಣಿಯರಿಗೆ ದುಸ್ವಪ್ನಗಳು ಹೆಚ್ಚು..

ಕನಸುಗಳು ಪ್ರತಿಯೊಬ್ಬರಿಗೂ ಬೀಳುತ್ತವೆ ಹಾಗೂ ಇವು ಆರೋಗ್ಯಕಾರಿ ಕೂಡಾ. ಆದರೆ, ಗರ್ಭಿಣಿಯರಿಗೆ ಬೀಳುವ ಕನಸುಗಳೇ ವಿಭಿನ್ನವಾಗಿರುತ್ತವೆ. ಹೆಚ್ಚಿನ ಬಾರಿ ಗರ್ಭಿಣಿಯರಿಗೆ ಬೀಳುವ ಕನಸುಗಳು ಬೆಳಗಾದ ಮೇಲೂ ನೆನಪಿನಲ್ಲಿರುತ್ತವೆ. ಈ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಆಳವಾದ ಕನಸುಗಳು ಬೀಳುವ ಜೊತೆಗೆ, ದುಸ್ವಪ್ನ(nightmare)ಗಳೂ ಹೆಚ್ಚು. ಹಾಗಂಥ ಇದೇನು ಆತಂಕಕ್ಕೀಡಾಗುವ ವಿಚಾರವಲ್ಲ. ಗರ್ಭಿಣಿಯರಿಗೆ ಬೇರೆ ರೀತಿಯ ಕನಸುಗಳು ಬೀಳಲು ಕಾರಣವೇನು, ಅವುಗಳ ಅರ್ಥವೇನು ನೋಡೋಣ.

ಪ್ರಗ್ನೆನ್ಸಿಯಲ್ಲಿ ಹೆಚ್ಚುವ ಕನಸುಗಳು(Dreaming frequency)
ಪ್ರಗ್ನೆನ್ಸಿಯ ಬಳಿಕ ಕನಸು ಬೀಳುವುದು ಜಾಸ್ತಿಯಾಗಿದೆ ಎಂದು ಹೆದರುವವರು ಅನೇಕರು. ಇದಕ್ಕೆ ಕಾರಣ ಬಹಳ ಸರಳವಾಗಿದೆ. ಸಾಮಾನ್ಯವಾಗಿ 7-8 ಗಂಟೆ ವ್ಯಕ್ತಿಯ ನಿದ್ದೆಯ ಸಮಯವಿರುತ್ತದೆ. ಆದರೆ, ಗರ್ಭಾವಸ್ಥೆಯಲ್ಲಿದ್ದಾಗ ಮಹಿಳೆಗೆ ಹೆಚ್ಚು ಸುಸ್ತಾಗುತ್ತದೆ, ತಲೆ ತಿರುಗುತ್ತದೆ, ಸಂಕಟ ಹೆಚ್ಚುತ್ತದೆ. ಇಂಥ ದೈಹಿಕ ಬದಲಾವಣೆಗಳ ಕಾರಣದಿಂದ ಗರ್ಭಿಣಿಯರು ಹೆಚ್ಚು ಸಮಯ ಮಲಗುತ್ತಾರೆ. ಹೆಚ್ಚು ಸಮಯ ಮಲಗುವುದರಿಂದ ಸಾಮಾನ್ಯವಾಗೇ ಹೆಚ್ಚು ಕನಸುಗಳು ಬೀಳುತ್ತವೆ.