ಬ್ರಿಟನ್(ಏ.30): ಬ್ರಿಟನ್‌ನ ಮಹಿಳೆ ಗರ್ಭಿಣಿಯಾಗಿದ್ದಾಗ ಆಕೆಯ ಹೊಟ್ಟೆ ತುಸು ಹೆಚ್ಚೆ ಉಬ್ಬಿತ್ತು. ಗರ್ಭಿಣಿಯರಲ್ಲಿ ಕೆಲವರಿಗೆ ಹೆಚ್ಚಾಗಿ ಹೊಟ್ಟೆ ಬರುವುದು, ಇನ್ನು ಕೆಲವರಿಗೆ ತೀರಾ ಕಮ್ಮಿ ಎನಿಸುವುದು ಎಲ್ಲವೂ ಇರುತ್ತದೆ. ಆದರೆ ಈಕೆಗೆ ಹೊಟ್ಟೆ ದೊಡ್ಡದಾಗಿತ್ತು. ವೈದ್ಯರು ಈಕೆ ಅವಳಿ ಮಕ್ಕಳನ್ನು ಹೆರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ನಡೆದಿದ್ದೇ ಬೇರೆ.. ನವಜಾತ ಶಿಶುವನ್ನು ನೋಡಿದ ವೈದ್ಯ ಬಳಗಕ್ಕೆ ಅಚ್ಚರಿಯಾಗಿತ್ತು.

ಸಾಮಾನ್ಯವಾಗಿ ನವಜಾತ ಹೆಣ್ಣು ಶಿಶುವಿನ ತೂಕ 3.4 ಕೆಜಿಯಷ್ಟಿರುತ್ತದೆ. ಇದಕ್ಕಿಂತ ಸಾಕಷ್ಟು ಕಮ್ಮಿ ತೂಕದಲ್ಲಿಯೂ ಮಕ್ಕಳು ಜನಿಸುತ್ತಾರೆ. ಆದರೆ ಇದಕ್ಕಿಂತ ತೂಕ ಹೆಚ್ಚಿರುವುದು ಮಾತ್ರ ಭಾರೀ ಅಪರೂಪ. ಆದರೆ ಈ ಮಗು ಬರೋಬ್ಬರಿ 5.8 ಕೆಜಿ ತೂಗುತ್ತಿತ್ತು.

ಕೊರೋನಾ ರೋಗಿಗಳಿಗೆ ಮನೆಯಲ್ಲೇ ಐಸೊಲೇಷನ್, ತ್ರಿಬಲ್ ಮಾಸ್ಕ್ ಕಡ್ಡಾಯ..!

ನಿರೀಕ್ಷೆಗಿಂತ ಹೆಚ್ಚು ತೂಕವಿರುವ ಶಿಶುಗಳಿಗೆ ಜನ್ಮ ನೀಡಿದ ಅನೇಕ ವಿಶೇಷ ಪ್ರಕರಣಗಳಿವೆ. ಜನನದ ಸಮಯದಲ್ಲಿ ಸ್ವಲ್ಪ ಹೆಚ್ಚುವರಿ ತೂಕ ಆರೋಗ್ಯಕ್ಕೆ ಯಾವುದೇ ಅಪಾಯವನ್ನುಂಟುಮಾಡುವುದಿಲ್ಲ. ಆದರೆ ನಿರೀಕ್ಷಿತ ತೂಕದ ಸಂಖ್ಯೆ ಹೆಚ್ಚಿನದಾದಾಗ, ಅದು ಖಂಡಿತವಾಗಿಯೂ ಅಚ್ಚರಿಯಾಗುವ ವಿಚಾರ.

ಮಹಿಳೆ 5.8 ಕೆಜಿ ತೂಕದ ಯುಕೆಯ ಎರಡನೇ ಅತಿ ದೊಡ್ಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 21 ವರ್ಷದ ಅಂಬರ್ ಕಂಬರ್ಲ್ಯಾಂಡ್ ಗರ್ಭಿಣಿಯಾಗಿದ್ದಾಗ ಸ್ವಲ್ಪ ಹೆಚ್ಚೇ ದೊಡ್ಡ ಹೊಟ್ಟೆ ಇತ್ತು. ಅವಳು ಅವಳಿ ಮಕ್ಕಳನ್ನು ಹೆರುತ್ತಾಳೆ ಎಂದು ನಂಬಿದ್ದ ವೈದ್ಯರಿಗೆ ಅಚ್ಚರಿಯಾಗಿತ್ತು.

ನಿಮಗೆ ಈಗಾಗ್ಲೇ ಕೊರೋನಾ ಬಂದು ಗುಣಮುಖರಾಗಿದ್ದೀರಾ ? ಹಾಗಾದ್ರೆ ವ್ಯಾಕ್ಸೀನ್ ಯಾವಾಗ ತೆಗೆದುಕೊಳ್ಳಬೇಕು ?

ಮಹಿಳೆ ಏಪ್ರಿಲ್ 16 ರಂದು ತನ್ನ ಮಗುವಿಗೆ ಜನ್ಮ ನೀಡಿದಳು. ಶಿಶು ಈಗ ಯುಕೆಯಲ್ಲಿ ಎರಡನೇ ಅತಿದೊಡ್ಡ ಹೆಣ್ಣು ಮಗುವಾಗಿದೆ. ಇದು 2012 ರಲ್ಲಿ ಜನಿಸಿದ ಭಾರವಾದ ಮಗುವಿಗಿಂತ ಕೇವಲ 2 ಪೌಂಡ್ ಕಡಿಮೆ ಇದೆ ಅಷ್ಟೆ.

ಗರ್ಭಾವಸ್ಥೆಯಲ್ಲಿ ಅವಳಿ ಎಂದು ವೈದ್ಯರು ಭಾವಿಸಿದ್ದರು. ನಾವು ಅಲ್ಟ್ರಾಸೌಂಡ್‌ಗಳಲ್ಲಿ ಒಂದನ್ನು ಮಾತ್ರ ನೋಡಬಹುದಾದರೂ ಇಂತಹ ಪ್ರಕರಣ ನೋಡಿದ್ದರಿಂದ ಇಬ್ಬರು ಮಕ್ಕಳಿರಬಹುದೆಂದು ನಂಬಿದ್ದೆವು ಎನ್ನುತ್ತಾರೆ ವೈದ್ಯರು. ಮಗು ತನ್ನ 32 ನೇ ವಾರದಲ್ಲಿ 36 ವಾರಗಳ ಮಗುವಿನ ಗಾತ್ರವನ್ನು ತಲುಪಿದೆ.