Asianet Suvarna News Asianet Suvarna News

China; ಜಿನ್‌ಪಿಂಗ್‌ಗೆ ಕಮ್ಯೂನಿಸ್ಟ್ ಜೈಕಾರ, ಮುಂದಿನ ಅವಧಿಗೂ ಅಧ್ಯಕ್ಷ!

* ಚೀನಾದಲ್ಲೊಂದು ಮಹತ್ವದ ಘೋಷಣೆ
* ಕಮ್ಯೂನಿಸ್ಟ್ ಪಾರ್ಟಿಯ ಸರ್ವೋಚ್ಛ ನಾಯಕ ಜಿನ್ ಪಿಂಗ್
* ಚೀನಾದ ಶಾಶ್ವತ ಅಧ್ಯಕ್ಷರಾದ್ರಾ ಜಿನ್ ಪಿಂಗ್?
* ಮುಂದಿನ ಅವಧಿಗೂ ಜಿನ್ ಪಿಂಗ್ ಆಡಳಿತವೇ ಫಿಕ್ಸ್

With signature CPC resolution Xi Jinping tightens grip on power China mah
Author
Bengaluru, First Published Nov 11, 2021, 7:44 PM IST
  • Facebook
  • Twitter
  • Whatsapp

ಬೀಜಿಂಗ್(ನ. 11)  ಚೀನಾ (China) ಅಧ್ಯಕ್ಷ ಕ್ಸೀ ಜಿನ್ ಪಿಂಗ್ (Xi Jinping) ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ವದಂತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿದಾಡಿದ್ದವು. ಆದರೆ ಇದಕ್ಕೆಲ್ಲ ಉತ್ತರ ಎಂಬಂತೆ ಕಮ್ಯೂನಿಸ್ಟ್ ಪಾರ್ಟಿ ಸಭೆಯಲ್ಲಿ ಒಂದು ತೀರ್ಮಾನ ಹೊರಗೆ ಬಂದಿದೆ.

The Communist Party of China (CPC) ಗುರುವಾರ ಮಹತ್ವದ ಸಭೆ ನಡೆಸಿದೆ.  ಕ್ಸೀ ಜಿನ್ ಪಿಂಗ್  ಅವರನ್ನು ಅತ್ಯುನ್ನತ ನಾಯಕ ಎಂದು ಸರ್ವಾನುಮತದಿಂದ ತೀರ್ಮಾನ ಮಾಡಿದೆ. ಈ ಮೂಲಕ ಮುಂದಿನ ಅವಧಿಗೂ ಜಿನ್ ಪಿಂಗ್ ಅಧ್ಯಕ್ಷರಾಗುವುದು ಖಚಿತವಾಗಿದೆ.

ಕಮ್ಯೂನಿಷ್ಟ್ ಪಾರ್ಟಿ ನಿರ್ಣಯವನ್ನು ಪಾಸ್ ಮಾಡಿದೆ. ಈ ಹಿಂದೆ ಸಹ ಆಧುನಿಕ ಚೀನಾದ ನಿರ್ಮಾತೃ ಮಾವೋ ಝೆಡಾಂಗ್, ಚೀನಾ ಆರ್ಥಿಕತೆಯ  ಹರಿಕಾರ  ಡೆಂಗ್ ಕ್ಸಿಯಾಪಿಂಗ್ ಅವರಿಗೂ ಕಮ್ಯೂನಿಸ್ಟ್  ಪಾರ್ಟಿ ಇಂಥದ್ದೇ ಗೌರವ ನೀಡಿತ್ತು.

ಪಾಕ್ ಬತ್ತಳಿಕೆ ಸೇರಿದ ಚೀನಾದ ಅಸ್ತ್ರ

ನೂರು ವರ್ಷಗಳ ಸಾಧನೆಗೆ ಸಂಬಂಧಿಸಿ ಚೀನಾ ಕಮ್ಯುನಿಸ್ಟ್ ಪಾರ್ಟಿ (CPC)ಉನ್ನತ ಮಟ್ಟದ ಸಭೆ ನಡೆಸಿತು. ಈ ಸಭೆಯಲ್ಲಿ ಜಿನ್ ಪಿಂಗ್ ಅವರೇ ನಮ್ಮ ನಾಯಕರು ಎಂಬ ಪ್ರತಿಧ್ವನಿ ಕೇಳಿಬಂತು.

ಕಮ್ಯೂನಿಸ್ಟ್ ಪಕ್ಷದ   348 ಪ್ರಮುಖ ನಾಯಕರು ಪ್ರತಿ ಐದು ವರ್ಷಗಳಿಗೊಮ್ಮೆ ತನ್ನ ಹೊಸ ನಾಯಕರನ್ನು ಆಯ್ಕೆ ಮಾಡುತ್ತಾರೆ.  ಬೀಜಿಂಗ್ ನಲ್ಲಿ ಸೋಮವಾರ ನಾಯಕರ ನಡುವೆ ಮಹತ್ವದ ಸಭೆ ನಡೆದಿತ್ತು.

ಇದು ಮೂರನೇ ಸಾರಿ; ಇದೆ ಬಗೆಯ ನಿರ್ಣಯವನ್ನು ಈ ಹಿಂದೆ ಎರಡು ಸಾರಿ ತೆಗೆದುಕೊಳ್ಳಲಾಗಿತ್ತು. 1945 ರಲ್ಲಿ ಮಾವೋ ಮತ್ತು 1981 ರಲ್ಲಿ ಡೆಂಗ್  ಅಧಿಕಾರದಲ್ಲಿ ಇದ್ದಾಗ ಪಕ್ಷ ಅವರನ್ನು ಮುಂದಿನ ಅವಧಿಗೆ ನಾಯಕರು ಎಂದು ಹೇಳಿತ್ತು.

ಕೊರೋನಾಕ್ಕೆ ಚೀನಾ ಮೂಕ,  ಅಮೆರಿಕ ವರದಿಗೆ ಡ್ರಾಗನ್ ಅಸಮಾಧಾನ

ಎರಡು ಸಾರಿ ಅಧ್ಯಕ್ಷರಾದವರು ತಮ್ಮ ಹತ್ತು ವರ್ಷದ ಅವಧಿ ಮುಗಿಸಿದ ನಂತರ ನಿವೃತ್ತಿಯ ಕಡೆಗೆ ಹೆಜ್ಜೆ ಇಡುವ ವಾಡಿಕೆ ನಡೆದುಕೊಂಡು ಬಂದಿತ್ತು. ಆದರೆ ಇದೀಗ ಜಿನ್ ಪಿಂಗ್ ಮೂರನೇ ಅವಧಿಗೂ ಅಧ್ಯಕ್ಷರಾಗುವ ಕಾಲ ಬಂದಿದೆ. 68 ವರ್ಷದ ಜಿನ್ ಪಿಂಗ್  2013 ರಿಂದ ಚೀನಾ ಆಡಳಿತದ ಮುಖ್ಯಸ್ಥರಾಗಿದ್ದಾರೆ. 

ಶಾಶ್ವತ ಅಧ್ಯಕ್ಷ; ಇದರ ಜತೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಇನ್ನು ಮುಂದೆ ಶಾಶ್ವತ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎನ್ನುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಚೀನಾದ ಗ್ರೇಟ್ ಹಾಲ್'ನಲ್ಲಿ ನಡೆದ ವಾರ್ಷಿಕ ಸಭೆ(2018 )ಯಲ್ಲಿ ಸಂವಿಧಾನ ತಿದ್ದುಪಡಿಗಾಗಿ 3000 ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಗಳು ಸಭೆ ಸೇರಿದ್ದರು.

ಇದರಲ್ಲಿ ಕ್ಸಿ ಪರವಾಗಿ  2964 ಪ್ರತಿನಿಧಿಗಳು ಮತ ಚಲಾಯಿಸಿದರೆ, ವಿರುದ್ಧವಾಗಿ ಇಬ್ಬರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು. ಮೂವರು ಮತ ಚಲಾವಣೆಯನ್ನು ನಿರಾಕರಿಸಿದ್ದರು. ಆದರೆ ಈ ಸಭೆಯ ನಂತರ ಯಾವುದೇ ಅಧಿಕೃತ ನಿರ್ಣಯ ಹೊರಗೆ ಬಂದಿರಲಿಲ್ಲ. 

ಕೊರೋನಾ(Coronavirus) ಕಾಲ; ಇಡೀ ಪ್ರಪಂಚಕ್ಕೆ ಕೊರೋನಾ ಎಂಬ ಮಹಾಮಾರಿಯನ್ನು ಹರಿಯಬಿಟ್ಟ ಚೀನಾದ ಜತೆ ಅನೇಕ ದೇಶಗಳು ಸಂಬಂಧ ಮುರಿದುಕೊಂಡಿವೆ.  ಒಂದು ಕಡೆ ಏಷ್ಯಾ ಖಂಡದ ಮೇಲೆ ಪ್ರಭುತ್ವ ಸಾಧಿಸಲು ಚೀನಾ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ.   ಚೀನಾ ಮತ್ತು ಅಮೆರಿಕದ (USA)ನಡುವೆ  ಶೀತಲ ಸಮರ ಶುರುವಾಗಿರುವುದು ಯಾರಿಗೂ ಗೊತ್ತಿಲ್ಲದ ಸುದ್ದಿ ಏನಲ್ಲ.   ಚೀನಾದಲ್ಲಿ ಆರ್ಥಿಕ ಪರಿಸ್ಥಿತಿಯೂ ಹಳಿ ತಪ್ಪಿದ್ದು ಯುವ ಜನತೆಯ ಕೊರತೆಯೂ ಕಾಡುತ್ತಿದೆ.  ಚೀನಾದಲ್ಲಿ ಎಲ್ಲವೂ ಸರಿ ಇಲ್ಲದ ಕಾಲದಲ್ಲಿ ಅಧಿಕಾರಕ್ಕೆ ಸಂಬಂಧಿಸಿ ಇಂಥದ್ದೊಂತು ತೀರ್ಮಾನ ಬಂದಿದೆ.

 

Follow Us:
Download App:
  • android
  • ios