ಟ್ರಂಪ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಲಾಸ್ ಎಂಜಲೀಸ್ ಮತ್ತೆ ಬೆಂಕಿಗೆ ಆಗುತ್ತಿದೆಯಾಗಿದೆ. ಕೇವಲ 1 ಗಂಟೆಯಲ್ಲಿ ಬರೋಬ್ಬರಿ 5000 ಏಕರೆ ಪ್ರದೇಶ ಸುಟ್ಟು ಭಸ್ಮವಾಗಿದೆ. ಇತ್ತ 50,000 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಲಾಸ್ ಎಂಜಲೀಸ್(ಜ.23) ಹಾಲಿವುಡ್ ಸಿನಿಮಾದ ಹೆಡ್‌ಕ್ವಾರ್ಟರ್ಸ್ ಎಂದೇ ಗುರುತಿಸಿಕೊಂಡಿರುವ ಲಾಸ್ ಎಂಜಲೀಸ್ ಮತ್ತೆ ಹೊತ್ತಿ ಉರಿದಿದೆ. ಡೋನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬೆನ್ನಲ್ಲೇ ಇತ್ತ ಲಾಸ್ ಎಂಜಲೀಸ್‌ನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಮೂರು ವಾರಕ್ಕೂ ಹೆಚ್ಚು ಕಾಲ ಸತತವಾಗಿ ಹೊತ್ತಿ ಉರಿದ ಲಾಸ್ ಎಂಜಲೀಸ್, ಕಳೆದ ಒಂದು ವಾರದಿಂದ ನಿಯಂತ್ರಣಕ್ಕೆ ಬಂದಿತ್ತು. ಆದರೆ ಇದೀಗ ಮತ್ತೆ ಬೆಂಕಿ ಕಾಣಿಸಿಕೊಂಡು ಕೇವಲ ಒಂದು ಗಂಟೆ 5,000 ಏಕರೆ ಪ್ರದೇಶ ಸುಟ್ಟು ಭಸ್ಮವಾಗಿದೆ. ಇದೀಗ ಎರಡನೇ ಭಾರಿಗೆ ಕಾಣಿಸಿಕೊಂಡ ಬೆಂಕಿಯಲ್ಲಿ ಸದ್ಯ 9,400 ಏಕರೆ ಪ್ರದೇಶ ಸುಟ್ಟು ಬೂದಿಯಾಗಿದೆ. ಬೆಂಕಿ ಧಗಧಗಿಸುತ್ತಿದ್ದ ಬೆನ್ನಲ್ಲೇ ಲಾಸ್ ಎಂಜಲೀಸ್ ಪೊಲೀಸ್ ಸ್ಥಳೀಯರಿಗೆ ವಾರ್ನಿಂಗ್ ನೀಡಿದ್ದಾರೆ. ಈಗಾಗಲೇ 50,000 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಹಾಲಿವುಡ್ ಸಿನಿಮಾ, ಟಿವಿ ಸೆಟ್‌ಗಳ ಪುನರ್ ಸೃಷ್ಟಿ ವಲಯವಾಗಿರುವ ಲೇಕ್ ಕ್ಯಾಸ್ಟೈಕ್ ಬಳಿ ಬೆಂಕಿ ಕಾಣಿಸಿಕೊಂಡು ಉರಿದಿದೆ. ಮೂರು ವಾರಗಳ ಹಿಂದೆ ಬೆಂಕಿಯಲ್ಲಿ ಬೆಂದು ಹೋದ ಈಟನ್ ಹಾಗೂ ಪ್ಯಾಲಿಸೇಡ್ಸ್‌ನಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿ ಇದೀಗ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಲಾಸ್ ಎಂಜಲೀಸ್ ಪೊಲೀಸ್, ರಕ್ಷಣಾ ಕಾರ್ಯಾಪಡೆ, ಸೇನೆ ನಿರಂತರ ಕಾರ್ಯಾಚರಣೆ ಮಾಡುತ್ತಿದೆ. ಬೆಂಕಿ ನಂದಿಸಲು ಹರಹಾಸ ಪಡುತ್ತಿದೆ. ಆದರೆ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಸದ್ಯಕ್ಕೆ ಈ ಬೆಂಕಿ ನಿಯಂತ್ರಣಕ್ಕೆ ತರುವ ಯಾವುದೇ ಸಾಧ್ಯತೆಗಳಿಲ್ಲ.
ಅಯ್ಯೋ ದೇವ್ರೇ! ಅಮೆರಿಕದ ಈಜು ತಾರೆ ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ 10 ಪದಕಗಳು ಕಾಡಿಚ್ಚಿನಲ್ಲಿ ಭಸ್ಮ!
ಮೂರು ವಾರಗಳ ಹಿಂದೆ ಪ್ಯಾಲಿಸೇಡ್ಸ್‌ನಲ್ಲಿ ಬೆಂಕಿಯಿಂದ ಶೇಕಡಾ 68ರಷ್ಟು ಕಾಡು ಹಾಗೂ ಪ್ರಾಣಿ ಸಂಪತ್ತು ನಾಶವಾಗಿದೆ. ಪ್ಯಾಲಿಸೇಡ್ಸ್‌ನಲ್ಲಿ ಬರೋಬ್ಬರಿ 23,448 ಏಕರೆ ಪ್ರದೇಶ ಬೆಂಕಿಗೆ ನಾಶವಾಗಿದೆ. ಇತ್ತ ಈಟನ್ ವಲಯದಲ್ಲಿನ ಬೆಂಕಿಯಲ್ಲಿ ಶೇಕಾಡ 91ರಷ್ಟು ಭೂ ಪ್ರದೇಶ ಸುಟ್ಟು ಭಸ್ಮವಾಗಿದೆ. ಒಟ್ಟು 14,021 ಏಕರೆ ಪ್ರದೇಶ ಸುಟ್ಟು ಬೂದಿಯಾಗಿದೆ.
ಇತ್ತ ಸ್ಯಾನ್ ಡಿಯೋಗೋದಲ್ಲಿ ಕಾಣಿಸಿಕೊಂಡ ಬೆಂಕಿಗೆ ಅಪಾರ ನಷ್ಟವಾಗಿದೆ. ನದಿ ಬಳಿರುವ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ ಶೇಕಡಾ 45ರಷ್ಟು ನಿಯಂತ್ರಣಕ್ಕೆ ತರಲಾಗಿದೆ. ಸದ್ಯ ಲಾಸ್ ಎಂಜಲಿಸ್‌ನಲ್ಲಿ ಬೆಂಕಿ ನಿಯಂತ್ರಣಕ್ಕೆ ತರುವುದು ಅತ್ಯಂತ ಸವಾಲಾಗಿ ಪರಿಣಮಿಸುತ್ತಿದೆ.
ಲಾಸ್ ಎಂಜಲೀಸ್ ಬೆಂಕಿ ಅನಾಹುತ ಸಂಪೂರ್ಣ ನಿಯಂತ್ರಣಕ್ಕೆ ತರುವುದು ಕಷ್ಟ ಸಾಧ್ಯ ಏನ್ನಲಾಗುತ್ತಿದೆ. ಲಾಸ್ ಎಂಜಲೀಸ್ ಇಡೀ ಭೂಪ್ರದೇಶ ಬೆಂಕಿಯಲ್ಲಿ ಬೆಂದು ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅರ್ಧ ಅಮೆರಿಕ ಧಗಧಗ, ಇನ್ನರ್ಧ ಗಡಗಡ! ಒಂದೇ ದೇಶ, ಎರಡು ಪ್ರಾಕೃತಿಕ ವೈಪರಿತ್ಯ!
