Asianet Suvarna News Asianet Suvarna News

ಚಿರತೆ ಬಾಯಿಗೆ ಹೂಸು ಬಿಟ್ಟು ಪ್ರಾಣ ಉಳಿಸಿಕೊಂಡ ಕಾಡುಕತ್ತೆ: ವಿಡಿಯೋ ವೈರಲ್‌

ತನ್ನನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದ ಚಿರತೆಯ ಬಾಯಿಗೆ ಹೂಸು ಬಿಟ್ಟು ಕಾಡುಕತ್ತೆ ಮರಿಯೊಂದು ತನ್ನ ಪ್ರಾಣವನ್ನು ಉಳಿಸಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

Wild donkey saved his life by fart on cheetah mouth sat
Author
First Published Aug 28, 2023, 3:08 PM IST

ವೈರಲ್‌ ವಿಡಿಯೋ: ಸಾಮಾನ್ಯವಾಗಿ ಕಾಡು, ನಾಡು ಅಥವಾ ಭೂಮಿ, ಮರ, ಗಿಡಗಳ ಮೇಲೆ ವಾಸಿಸುವ ಪ್ರಾಣಿ, ಪಕ್ಷಿಗಳು ತಮ್ಮ ಆಹಾರವನ್ನು ಬೇಟೆಯಾಡಲು ಹಾಗೂ ತಮ್ಮ ಜೀವವನ್ನು ಉಳಿಸಿಕೊಳ್ಳಲು ತಮ್ಮದೇ ವಿಭಿನ್ನ ಮತ್ತು ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದರೆ, ಇಲ್ಲೊಂದು ಕಾಡುಕತ್ತೆಯ ಮರಿ ವೇಗವಾಗಿ ಅಟ್ಟಿಸಿಕೊಂಡು ಬೇಟೆಯಾಡಲು ಬಂದ ಚಿರತೆಯಿಂದ ತಪ್ಪಿಸಿಕೊಳ್ಳಲು ಚಿರತೆ ಬಾಯಿಗೆ ಹೂಸು ಬಿಟ್ಟು ಪ್ರಾಣ ಉಳಿಸಿಕೊಂಡಿದೆ. ಈ ವಿಡಿಯೋ ವೈರಲ್‌ ಆಗಿದ್ದು, ಕತ್ತೆಯ ತಂತ್ರಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. 

ಭೂಮಿಯ ಮೇಲೆ ಆಹಾರ ಸರಪಳಿಯೇ ವಿಭಿನ್ನವಾಗಿದೆ. ಹುಲ್ಲ- ಜಿಂಕೆ- ಹುಲಿ, ಹುಲ್ಲು-ಮಿಡತೆ- ಓತಿಕ್ಯಾತ- ಹಾವು- ಹದ್ದು, ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ನಿಸರ್ಗದಲ್ಲಿರುವ ಎಲ್ಲ ಸಸ್ಯ ಮತ್ತು ಪ್ರಾಣಿಗಳು ಆಹಾರ ಆಗಿರುತ್ತವೆ. ಇನ್ನು ಇನ್ನೊಂದು ಪ್ರಾಣಿಗೆ ಆಹಾರ ಆಗುವುದಕ್ಕೂ ಮೊದಲು ಕೀಟ, ಪ್ರಾಣಿ ಹಾಗೂ ಪಕ್ಷಿಗಳು ವಿಭಿನ್ನ ರಕ್ಷಣಾ ತಂತ್ರವನ್ನು ಹೊಂದಿರುತ್ತವೆ. ಅದರಲ್ಲಿಯೂ ಕಾಡು ಪ್ರಾಣಿಗಳು ಮಾತ್ರ ಮಾಂಸಾಹಾರ ಪ್ರಾಣಿಗಳಾದ ಚಿರತೆ, ಹುಲಿ, ಸಿಂಹ ಹಾಗೂ ಇತರೆ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವುದು ನಿಜಕ್ಕೂ ಕಷ್ಟಸಾಧ್ಯವಾಗಿರುತ್ತದೆ. ಪ್ರಾಣಿಗಳು ಸಣ್ಣದಾಗಿರುವಾಗ ಅದರ ಓಡುವ ಅಸಮರ್ಥತೆಯನ್ನು ತಿಳಿದು, ಇವುಗಳ ಮೇಲೆಯೇ ಹೆಚ್ಚು ದಾಳಿ ಮಾಡುವುದು ಬೇಟೆಯಾಡುವ ಪ್ರಾಣಿಗಳ ತಂತ್ರಗಳಲ್ಲಿ ಒಂದಾಗಿರುತ್ತದೆ.

ನ್ಯೂಜಿಲೆಂಡ್‌ನಲ್ಲಿ ಹಸುಗಳ ತೇಗು, ಹೂಸಿಗೂ ತೆರಿಗೆ..!

ಬಾಯಿ ಹಾಕಲು ಬಂದ ಚಿರತೆ ಬಾಯಿಗೆ ಹೂಸು: ಈಗ ವೈರಲ್‌ ಆಗುತ್ತಿರುವ ವೈರಲ್‌ ವೀಡಿಯೋದಲ್ಲಿ ಕಾಡು ಕತ್ತೆ ಜಾತಿಯ ಪ್ರಾಣಿಯೊಂದು ಚಿಕ್ಕದಾಗಿದ್ದು, ಹುಲ್ಲು ತಿನ್ನಲು ಗುಂಪಾಗಿ ಹೋದಾಗ ಚಿರತೆ ದಾಳಿ ಮಾಡಿದೆ. ಈ ವೇಳೆ ದೊಡ್ಡ ಕತ್ತೆಗಳು ಓಡಲು ಪ್ರಾಣಭೀತಿಯಿಂದ ಓಡಲು ಆರಂಭಿಸಿವೆ. ಆಗ, ಚಿಕ್ಕದಾಗಿದ್ದ ಕಾಡುಕತ್ತೆಯ ಮರಿಯ ಮೇಲೆ ಚಿರತೆ ಬೆನ್ನಟ್ಟಿಕೊಂಡು ದಾಳಿ ಮಾಡಲು ಆರಂಭಿಸಿದೆ. ಪ್ರಾಣಾಪಾಯದಿಂದ ವೇಗವಾಗಿ ಓಡುತ್ತಿದ್ದ ಕಾಡುಕತ್ತೆಯ ಮರಿ, ಬೆನ್ನಟ್ಟಿಕೊಂಡು ಬರುತ್ತಿದ್ದ ಹಾಗೂ ದಾಳಿಯ ವೇಳೆ ಬಾಯಿ ಹಾಕಿ ಕಚ್ಚಲು ಮುಂದಾಗಿದ್ದ ಚಿರತೆ ಬಾಯಿಗೆ ಹೂಸು ಬಿಟ್ಟಿದೆ.

ಹೂಸಿನ ದುರ್ವಾಸನೆಗೆ ಓಡುವುದನ್ನೇ ನಿಲ್ಲಿಸಿದ ಚಿರತೆ: ಇನ್ನು ದನ, ಕರು, ಎಮ್ಮೆ, ಕುರಿ ಅಥವಾ ಮೇಕೆಗಳು ಕೂಡ ತೇಗುವುದು ಹಾಗೂ ಹೂಸು ಬಿಡುವುದು ಸಾಮಾನ್ಯವಾಗಿದೆ. ಅದರಲ್ಲಿಯೂ ಪ್ರಾಣಿಗಳ ಹೂಸು ಅತಿ ಕೆಟ್ಟದಾಗಿ ದುರ್ವಾಸನೆ ಬೀರವುದು ಕೂಡ ಕೆಲವರ ಗಮನಕ್ಕೆ ಬಂದಿರಬಹುದು. ಅಂಥದ್ದರಲ್ಲಿ ಕತ್ತೆಮರಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ವೇಗವಾಗಿ ಓಡುತ್ತಲೇ ಬೆನ್ನಟ್ಟಿದ್ದ ಚಿರತೆ ಬಾಯಿ ಹಾಗೂ ಮೂಗಿಗೆ ಬಡಿಯುವಂತೆ ಹೂಸು ಬಿಟ್ಟಿದೆ. ಇದರಿಂದ ವೇಗವಾಗಿ ಓಡುವಾಗ ಚಿರತೆಗೆ ಆಮ್ಲಜನಕ ಕೊರತೆ ಉಂಟಾಗಿದ್ದ, ದುರ್ವಾಸನೆಯಿಂದ ಓಡಲು ಸಾಧ್ಯವಾಗದೇ ತನ್ನ ಬೇಟೆ ಆಡುವ ನಿರ್ಧಾರವನ್ನೇ ಕೈಬಿಟ್ಟಿದೆ. ಆಗ ಕತ್ತೆ ಮರಿ ಓಡಿ, ತನ್ನ ಪ್ರಾಣವನ್ನು ಉಳಿಸಿಕೊಂಡು ತನ್ನ ತಾಯಿಯೊಂದಿಗೆ ಸೇರಿಕೊಂಡಿದೆ.

ಬಾಯ್‌ ಫ್ರೆಂಡ್‌ ಹೂಸು ನಂಗಿಷ್ಟ ಅಂದ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್‌!

ನೈಜತೆಯ ಬಗ್ಗೆ ಸ್ಪಷ್ಟತೆ ಇಲ್ಲ: ಇನ್ನು ಈ ವಿಡಿಯೋ ಎಡಿಟ್‌ ಮಾಡಿರುವುದೋ ಅಥವಾ ನೈಸರ್ಗಿಕವಾಗಿ ಸೆರೆಸಿಕ್ಕ ವಿಡಿಯೋ ಆಗಿದೆಯೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ, ಟ್ವಿಟರ್‌ನಲ್ಲಿ ದಿ ಫಿಗೆನ್‌ ಎನ್ನುವವರು ಶೇರ್ ಮಾಡಿಕೊಂಡ ವಿಡಿಯೋ ಈಗ ಸಖತ್‌ ವೈರಲ್‌ ಆಗುತ್ತಿದೆ. ಅದಕ್ಕೆ, ತರಹೇವಾರಿ ಕಮೆಂಟ್‌ಗಳು ಕೂಡ ವ್ಯಕ್ತವಾಗಿವೆ. ನೀವು ಕೂಡ ನೋಡಿದರೆ ಪ್ರಾಣಿಗಳಲ್ಲಿರುವ ವಿಶೇಷ ಶಕ್ತಿಗಳು ನಿಮಗೂ ತಿಳಿಯುತ್ತದೆ.

Follow Us:
Download App:
  • android
  • ios