ಸೌತ್ ಆಫ್ರಿಕಾ(ಎ.04):  ಕೊರೋನಾ ವಕ್ಕರಿಸಿದ ಬಳಿಕ ಕಚೇರಿ, ಸರ್ಕಾರಿ ಸಭೆ, ಶಾಲಾ-ಕಾಲೇಜಿನ ಪಾಠ ಸೇರಿದಂತೆ ಹಲವು ಮೀಟಿಂಗ್‌ಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಝೂಮ್ ಮೂಲಕ ಪ್ರತಿ ದಿನ ಮೀಟಿಂಗ್ ನಡೆಯುತ್ತಲೇ ಇದೆ. ಇದರ ಜೊತೆಗೆ ಹಲವು ಬಾರಿ ಎಡವಟ್ಟುಗಳು ಆಗಿವೆ. ಇದೀಗ ಈ ಪಟ್ಟಿಗೆ ಸೌತ್ ಆಫ್ರಿಕಾದ ಕೊರೋನಾ ತುರ್ತು ಸಭೆ ಸೇರಿಕೊಂಡಿದೆ.

ಝೂಮ್‌ ಮೀಟಿಂಗ್‌ ವೇಳೆ ಕಾರ್ಯದರ್ಶಿಯೊಂದಿಗೆ ಸರ್ಕಾರಿ ಅಧಿಕಾರಿ ರಾಸಲೀಲೆ!.

ಕೊರೋನಾ ಪ್ರಕರಣಗಳು ಸೌತ್ ಆಫ್ರಿಕಾದಲ್ಲೂ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಸರ್ಕಾರ ತುರ್ತು ಸಭೆ ಕರೆದಿತ್ತು. ಸೌತ್ ಆಫ್ರಿಕಾದ 23 ನಾಯಕರ ಪೈಕಿ ರಾಷ್ಟ್ರೀಯ ಸಾಂಪ್ರದಾಯಿಕ ನಾಯಕರ ಸದನದ ಸದಸ್ಯರಾದ ಕ್ಸೋಲೈಲ್ ಎನ್‌ಡೆವು ಪಾಲ್ಗೊಂಡಿದ್ದರು. ಸೌತ್ ಆಪ್ರಿಕಾದಲ್ಲಿನ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಒಬ್ಬೊಬ್ಬರೆ ಉಸ್ತುವಾರಿ ನಾಯಕರು ಮಾಹಿತಿ ಬಹಿರಂಗಪಡಿಸುತ್ತಿರುವ ವೇಳೆ ನಾಯಕ ಕ್ಸೋಲೈಲ್  ಪತ್ನಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ.

ಕೌನ್ಸಿಲ್ ಮೀಟಿಂಗ್ ಮಧ್ಯೆ ದಂಪತಿಯ ಸೆಕ್ಸ್: ಕ್ಯಾಮೆರಾ ಆಫ್ ಮಾಡೋದೇ ಮರೆತ್ರು

ಕ್ಸೋಲೈಲ್ ಅವರಿಗೆ ತಮ್ಮ ಹಿಂಭಾಗದಲ್ಲಿ ಪತ್ನಿ ಬಂದಿರುವುದು ಗಮನಕ್ಕೆ ಬಂದಿಲ್ಲ. ಪತ್ನಿಯ ನಗ್ನ ದೃಶ್ಯಗಳು ಕೊರೋನಾ ತರ್ತು ಸಭೆಯಲ್ಲಿ ಜಗಜ್ಜಾಹೀರಾಗಿದೆ. ಇದು ಇತರ ನಾಯಕರಿಗೆ ಮುಜುಗರ ತಂದಿದೆ. ತಕ್ಷಣವೇ ಮಧ್ಯ ಪ್ರವೇಶಿಸಿದ ಕೊರೋನಾ ನಿಯಂತ್ರಣ ಸಮಿತಿ ಅಧ್ಯಕ್ಷ ಫೈತ್ ಮುತಂಬಿ, ನಾಯಕ ಕ್ಸೋಲೈಲ್ ಅವರ ಹಿಂಭಾಗದಲ್ಲಿ ವಿವಸ್ತ್ರವಾಗಿ ಇರುವ ಮಹಿಳೆಯ ದೃಶ್ಯ ಎಲ್ಲರಿಗೂ ಕಾಣಿಸತ್ತಿದೆ. ಹೀಗಾಗಿ  ಮೀಟಿಂಗ್ ನಡೆಯುತ್ತಿರುವ ಕುರಿತು ಅವರಿಗೆ ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ.

ತಪ್ಪಿನ ಅರಿವಾದಾ ನಾಯಕ ಕ್ಸೋಲೈಲ್ ಕ್ಷಮೆ ಯಾಚಿಸಿದ್ದಾರೆ. ತಮಗೆ ಝೂಮ್ ಮೀಟಿಂಗ್ ಎಲ್ಲಾ ಹೊಸದು. ತಂತ್ರಜ್ಞಾನದ ಅರಿವಿಲ್ಲ. ನಾನು ಕ್ಯಾಮಾರ ನೋಡುತ್ತಿದ್ದೆ. ಹಿಂಭಾಗದಲ್ಲಿ, ಇತರ ಸ್ಕ್ರೀನ್ ನೋಡುವ, ಕ್ಯಾಮ್ ಆಫ್ ಮಾಡುವ ಕುರಿತು ತಿಳಿದಿಲ್ಲ. ಕ್ಷಮೆ ಇರಲಿ ಎಂದಿದ್ದಾರೆ. ಬಳಿಕ ಸಭೆ ರದ್ದುಗೊಂಡಿದೆ.

ವಿಡಿಯೋ ಕಾನ್ಫರೆನ್ಸ್ ವೇಳೆ ಬಟ್ಟೆ ಬಿಚ್ಚಿದ ನಾಯಕಿ, ಸಚಿವರೆಲ್ಲಾ ಶಾಕ್!.

ನಿಗದಿತ ಸಮಯಕ್ಕೆ ಸಭೆ ಮುಗಿಯಬೇಕಿತ್ತು. ಆದರೆ ಕೆಲ ತಾಂತ್ರಿಕ ಸಮಸ್ಯೆ, ಕೆಲ ನಾಯಕರಿಗೆ ಝೂಮ್ ಮೀಟಿಂಗ್ ಪಾಲ್ಗೊಳ್ಳುವ ತಂತ್ರಜ್ಞಾನದ ಮಾಹಿತಿ ಕೊರತೆಯಿಂದ ಸಭೆ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ರಾತ್ರಿ ಮೀಟಿಂಗ್ ಮುಂದುವರಿದ ಕಾರಣ ಕ್ಸೋಲೈಲ್ ಪತ್ನಿ ಸ್ನಾನ ಮಾಡಲು ರೂಮ್‌ಗೆ ತೆರಳಿದಾಗ ಮೀಟಿಂಗ್‌ನಲ್ಲಿ ಇತರ ನಾಯಕರಿಗೆ ಕ್ಸೋಲೈಲ್ ಪತ್ನಿಯ ನಗ್ನ ದರ್ಶನವಾಗಿದೆ.