ಅಮೆರಿಕಾದ ಟೆಕ್ಸಾಸ್‌ನಿಂದ ಕಾಣೆಯಾಗಿದ್ದ ಭಾರತೀಯ ಮೂಲದ ಟೆಕ್ಕಿ ಲಹರಿ ಪಥಿವಾಡಾ (Lahari Pathivada) ಶವವಾಗಿ ಪತ್ತೆಯಾಗಿದ್ದಾರೆ. ಮೇ.13 ರಂದು ಅವರ ಶವ ಸಮೀಪದ ಒಕ್ಲಹೋಮ್ ರಾಜ್ಯದಲ್ಲಿ ಟೆಕ್ಸಾಸ್‌ನಿಂದ ಸುಮಾರು 322 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ.

ನ್ಯೂಯಾರ್ಕ್‌: ಅಮೆರಿಕಾದ ಟೆಕ್ಸಾಸ್‌ನಿಂದ ಕಾಣೆಯಾಗಿದ್ದ ಭಾರತೀಯ ಮೂಲದ ಟೆಕ್ಕಿ ಲಹರಿ ಪಥಿವಾಡಾ (Lahari Pathivada) ಶವವಾಗಿ ಪತ್ತೆಯಾಗಿದ್ದಾರೆ. ಮೇ.13 ರಂದು ಅವರ ಶವ ಸಮೀಪದ ಒಕ್ಲಹೋಮ್ ರಾಜ್ಯದಲ್ಲಿ ಟೆಕ್ಸಾಸ್‌ನಿಂದ ಸುಮಾರು 322 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮೇ 13 ರದು ಲಹರಿ ಶವ ಪತ್ತೆಯಾಗಿದ್ದು, ಅವರು ಕೊನೆಯ ಬಾರಿ ಕಪ್ಪು ಟೊಯೋಟಾ ಗಾಡಿಯನ್ನು ಚಲಾಯಿಸಿಕೊಂಡು ಮೆಕಿನ್ನಿ ಉಪನಗರದಲ್ಲಿ ಕಾಣಿಸಿಕೊಂಡಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಿಚಾರವನ್ನು ಟೆಕ್ಸಾಸ್‌ನ WOW ಗುಂಪು ಖಚಿತಪಡಿಸಿದ್ದು, ಈ WOW ಗುಂಪು ಆಕೆ ನಾಪತ್ತೆಯಾಗಿರುವ ವಿಚಾರವನ್ನು ಕೂಡ ಎಲ್ಲೆಡೆ ತಿಳಿಸಿತ್ತು. ಟೆಕ್ಸಾಸ್‌ನ (Texas) ಕಾಲಿನ್ಸ್ ಕೌಂಟಿಯ ಮೆಕಿನ್ನಿ (McKinney) ನಿವಾಸಿಯೊಬ್ಬರು ಲಹರಿ ಪತಿವಾಡ ಅವರನ್ನು ಕೊನೆಯದಾಗಿ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ನೋಡಿದ್ದರು. ಆದರೆ ಮೇ 12 ರಂದು ಕೆಲಸ ಮುಗಿಸಿ ಆಕೆ ಮನೆಗೆ ವಾಪಸ್ ಬಂದಿಲ್ಲ ಇದರಿಂದ ಅವರ ಕುಟುಂಬದವರು ಚಿಂತೆಗೀಡಾಗಿದ್ದರು. ನಂತರ ಆಕೆಯ ಫೋನ್‌ ಟ್ರ್ಯಾಕ್ ಮಾಡಿದ ಪೊಲೀಸರು ಒಕ್ಲಹೋಮಾದಲ್ಲಿ ಅವರ ಫೋನ್ ಇರುವ ಬಗ್ಗೆ ತಿಳಿಸಿದ್ದರು.

.ಸ್ಟಾರ್‌ಬಕ್ಸ್‌ ಮುಂದೆ ಕೆನಡಾ ಪ್ರಜೆಯನ್ನು ಚಾಕುವಿನಿಂದ ಇರಿದು ಕೊಂದ ಭಾರತೀಯ

ಕಾನ್ಸಾಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಆಕೆ ಬ್ಲೂ ವ್ಯಾಲಿ ವೆಸ್ಟ್‌ನಲ್ಲಿ ಹೈಸ್ಕೂಲ್ ಪೂರೈಸಿದ್ದರು. ನಂತರ ಓವರ್‌ಲ್ಯಾಂಡ್ ಪಾರ್ಕ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಈಕೆಯ ನಿಗೂಢ ಕಣ್ಮರೆ ಹಾಗೂ ಸಾವಿನಿಂದ ಆಕೆಯ ಕುಟುಂಬ ಕಂಗೆಟ್ಟಿದೆ. ಲಹಿರಿ ಶವ ಪತ್ತೆಯಾಗುವ ಮೊದಲು ನಾಪತ್ತೆಯ ಬಗ್ಗೆ ತನಿಖೆ ನಡೆಸಲು ಓಕ್ಲಹೋಮಾ ಸೇರಿದಂತೆ ಇತರ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಮೆಕಿನ್ನೆ ಪೊಲೀಸರು ತಿಳಿಸಿದ್ದರು. ನಾಪತ್ತೆಯಾದ ಮಹಿಳೆಯ ಸಾವಿಗೇನು ಕಾರಣ ಎಂಬ ಬಗ್ಗೆ ಅಧಿಕಾರಿಗಳು ಇನ್ನೂ ಮಾಹಿತಿಯನ್ನು ಬಿಡುಗಡೆ ಮಾಡದ ಕಾರಣ ಲಹರಿ ಪತಿವಾಡ ನಾಪತ್ತೆಗೆ ಕಾರಣವಿನ್ನೂ ನಿಗೂಢವಾಗಿದೆ. 

ಅಮೆರಿಕಾದ ಗುರುದ್ವಾರದಲ್ಲಿ ಗುಂಡಿನ ದಾಳಿ: NRI ಸೇರಿ ಇಬ್ಬರಿಗೆ ಗಾಯ