ಇಸ್ಲಾಮಾಬಾದ್(ಜ.21): ಪಾಕಿಸ್ತಾನ ಗೋಧಿ ಹಿಟ್ಟಿನ ತೀವ್ರ ಕೊರತೆ ಎದುರಿಸುತ್ತಿದ್ದು, ಅಲ್ಲಿನ ಚಪಾತಿ ಪ್ರಿಯರು ಪರಿತಪಿಸುವಂತಾಗಿದೆ.

ಪಾಕ್‌ನ ಖೈಬರ್ ಪಖ್ತೂನ್ ಖವಾ  ಪ್ರಾಂತ್ಯದ  ರಾಜಧಾನಿ  ಪೇಷಾವರ್ ನಗರದಲ್ಲಿ ಗೋಧಿ ಹಿಟ್ಟು  ಮಾರಾಟ ಮಾಡುವ 2,500 ಮಳಿಗೆಗಳಿದ್ದು, ಗೋಧಿ  ಹಿಟ್ಟಿನ ಕೊರತೆ ಕಾರಣ ಈ  ಅಂಗಡಿಗಳು  ಬಹುತೇಕ ಮುಚ್ಚಲ್ಪಟ್ಟಿವೆ.

ಬಲೂಚಿಸ್ತಾನ್, ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂನ್  ಖವಾ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿನ ಕೊರತೆ ಹೆಚ್ಚಾಗಿದ್ದು, ಗೋಧಿ ಹಿಟ್ಟಿನ ಅಭಾವದ ಕಾರಣ  ಚಪಾತಿ ಪ್ರಿಯರು  ತಮ್ಮ ಆಹಾರ ಅಗತ್ಯಗಳಿಗೆ  ಅಕ್ಕಿಯ ಮೊರೆ ಹೋಗಿದ್ದಾರೆ. 

ಕಾಶ್ಮೀರ ಕ್ಯಾತೆ: ಪಾಕ್‌ನಲ್ಲಿ ಟೊಮೆಟೋ ಬೆಲೆ ಕೇಜಿಗೆ 300 ರು.!

ಅಲ್ಲದೇ ಪಾಕಿಸ್ತಾನ ಮಾರುಕಟ್ಟೆಯಲ್ಲಿ ಗೋಧಿ  ಬೆಲೆ ತೀವ್ರ ಏರಿಕೆ  ಕಂಡಿದ್ದು, ಬೆಲೆ ನಿಯಂತ್ರಣಕ್ಕೆ  ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಗೋಧಿಯೇ ಪ್ರಮುಖ ಆಹಾರವಾಗಿರುವ ಪಾಕಿಸ್ತಾನದಲ್ಲಿ ಚಪಾತಿ, ನಾನ್ ಗೋಧಿ ಹಿಟ್ಟಿನ ರುಮಾಲಿ ರೋಟಿಗಳು ಜನಪ್ರಿಯ. ಆದರೆ ಗೋದಿ ಹಿಟ್ಟಿನ ಕೊರತೆಯಿಂದಾಗಿ ಹೋಟೆಲ್‌ಗಳಲ್ಲೂ ಚಪಾತಿ ಮಾಡುವುದನ್ನು ನಿಲ್ಲಿಸಲಾಗಿದೆ.

ಪರಿಣಾಮ ಚಪಾತಿ ಪ್ರಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಗೋಧಿ ಹಿಟ್ಟಿನ ಬೆಲೆ ನಿಯಂತ್ರಣಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.