1. ನೇರ ಯುದ್ಧ: ಸೇನಾ ಸಮರ ಘೋಷಿಸಬಹುದು. ಆದರೆ, ಭಾರತ ತನ್ನ ದಾಳಿ ಉಗ್ರರ ಮೇಲೆ, ಪಾಕ್‌ ಮೇಲಲ್ಲ ಅಂದಿದೆ. ಅಲ್ಲದೆ, ಭಾರತದ ಹಠಾತ್‌ ದಾಳಿ ಕಂಗೆಡಿಸಿದೆ. ಯುದ್ಧ ಸಾಧ್ಯತೆ ಕಮ್ಮಿ

2. ಪರೋಕ್ಷ ಯುದ್ಧ: ಗಡಿಯಲ್ಲಿ ಕಟ್ಟೆಚ್ಚರದಿಂದಾಗಿ ಉಗ್ರರನ್ನು ನುಸುಳಿಸುವುದು ಕಷ್ಟ. ಆದರೆ, ಕಾಶ್ಮೀರ ಮತ್ತಿತರೆಡೆಯಿಂದ ಈಗಾಗಲೇ ನುಸುಳಿದ ಉಗ್ರರ ಬಳಸಿ ಪರೋಕ್ಷ ಸಮರ ಸಾರಬಹುದು.

3. ದೇಶವ್ಯಾಪಿ ವಿಧ್ವಂಸ: ತನ್ನ ಮೇಲೆ ಕೆಂಡಾಮಂಡಲವಾಗಿರುವ ಭಾರತದ ಗಮನ ಬೇರೆಡೆಗೆ ಹರಿಸಲು ಉಗ್ರರನ್ನು ಬಳಸಿ ದೇಶಾದ್ಯಂತ ವಿಧ್ವಂಸಕ ಕೃತ್ಯಗಳಿಗೆ ಪ್ರಚೋದನೆ ನೀಡಬಹುದು

4. ಎಲೆಕ್ಷನ್‌ಗೆ ತೊಂದರೆ: ಇನ್ನೊಂದೆರಡು ತಿಂಗಳಲ್ಲಿ ಭಾರತದಲ್ಲ ನಡೆಯುವ ಲೋಕಸಭಾ ಚುನಾವಣೆ ನಡೆಯುವ ವೇಳೆ ಭಯೋತ್ಪಾದನಾ ಕೃತ್ಯಗಳು ಹೆಚ್ಚೆಚ್ಚು ನಡೆಯುವಂತೆ ಮಾಡಬಹುದು

5. ರಾಜತಾಂತ್ರಿಕ ಮೊರೆ: ಭಾರತ ತನ್ನ ದೇಶದೊಳಕ್ಕೇ ನುಗ್ಗಿ ಅಂತಾರಾಷ್ಟ್ರೀಯ ಕಟ್ಟಳೆಗಳನ್ನು ಉಲ್ಲಂಘಿಸಿದೆ ಎಂದು ಪ್ರತಿಪಾದಿಸಿ ವಿಶ್ವ ಸಮುದಾಯದ ಮೂಲಕ ರಾಜತಾಂತ್ರಿಕ ಒತ್ತಡಕ್ಕೆ ಪ್ರಯತ್ನಿಸಬಹುದು