Pakistan Telecom Company: ನೆರೆಯ ದೇಶ ಪಾಕಿಸ್ತಾನದಲ್ಲಿರುವ ಟೆಲಿಕಾಂ ಕಂಪನಿಗಳು ಯಾವವು? ಇವುಗಳಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದಿದ ಟೆಲಿಕಾಂ ಕಂಪನಿ ಯಾವುದು? ಇಲ್ಲಿಯ ರೀಚಾರ್ಜ್ ವ್ಯವಸ್ಥೆ ಹೇಗಿದೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ.
ಇಸ್ಲಾಮಾಬಾದ್: ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಸೇರಿದಂತೆ ಮೂರು ಖಾಸಗಿ ಟೆಲಿಕಾಂ ಕಂಪನಿಗಳಿವೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಭಾರತದ ಮೂರು ಖಾಸಗಿ ಕಂಪನಿಗಳಾಗಿವೆ. ಈ ನಾಲ್ಕು ಟೆಲಿಕಾಂ ಕಂಪನಿಗಳ ಮೂಲಕ ಜನರು ನೆಟ್‌ವರ್ಕ್ ಸಂಪರ್ಕ ಪಡೆದುಕೊಳ್ಳುತ್ತಾರೆ. ನೆರೆಯ ದೇಶವಾದ ಪಾಕಿಸ್ತಾನದಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಕಾರ್ಯನಿರ್ವಹಿಸುವುದಿಲ್ಲ. ಹಾಗಾದ್ರೆ ಪಾಕಿಸ್ತಾನಿಯರು ಬಳಸುವ ಟೆಲಿಕಾಂ ಕಂಪನಿಗಳು ಯಾವವು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಪಾಕಿಸ್ತಾನದಲ್ಲಿ Jazz, ಟೆಲಿನಾರ್, Zong, Ufone ಮತ್ತು SCOM ಟೆಲಿಕಾಂ ಕಂಪನಿಗಳು ನೆಟ್‌ವರ್ಕ್ ಸೇವೆಯನ್ನು ನೀಡುತ್ತಿವೆ. ಈ ನಾಲ್ಕು ಟೆಲಿಕಾಂ ಕಂಪನಿಗಳಲ್ಲಿ ಜನರು ಯಾವ ನೆಟ್‌ವರ್ಕ್ ಬಳಕೆ ಮಾಡ್ತಾರೆ ಎಂಬ ಪ್ರಶ್ನೆಗೆ ಉತ್ತರ Jazz ಆಗಿದೆ. ಪಾಕಿಸ್ತಾನದಲ್ಲಿ Jazz ಅತಿಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ ನಂಬರ್ ಒನ್ ಕಂಪನಿಯಾಗಿದೆ. 7.3 ಕೋಟಿ ಪಾಕಿಸ್ತಾನಿಯರು Jazz ಸಿಮ್ ಬಳಕೆ ಮಾಡುತ್ತಾರೆ. ಟೆಲಿನಾರ್ 4.8 ಕೋಟಿ, Zong 4.5 ಕೋಟಿ, SCOM 1.68 ಕೋಟಿ ಮತ್ತು Ufone 2.3 ಕೋಟಿ ಬಳಕೆದಾರರನ್ನು ಹೊಂದಿವೆ. 2023ರ ಪ್ರಕಾರ ಪಾಕಿಸ್ತಾನದ ಒಟ್ಟು ಜನಸಂಖ್ಯೆ 21.75 ಕೋಟಿ ಆಗಿದೆ.
ಪಾಕಿಸ್ತಾನ ಮೊಬೈಲ್ ಕಮ್ಯುನಿಕೇಷನ್ ಲಿಮಿಟೆಡ್ (PMLC) ಅತಿಹೆಚ್ಚು ಬಳಕೆದಾರರನ್ನು ಹೊಂದಿದೆ. ಪಾಕಿಸ್ತಾನ ಮೊಬೈಲ್ ಕಮ್ಯುನಿಕೇಷನ್ ಲಿಮಿಟೆಡ್ ಕಂಪನಿಯನ್ನು Jazz ಎಂದು ಕರೆಯಲಾಗುತ್ತದೆ. Mobilink ಮತ್ತು Warid Pakistan ಕಂಪನಿಗಳ ವಿಲೀನದಿಂದಾಗಿ ಪಾಕಿಸ್ತಾನ ಮೊಬೈಲ್ ಕಮ್ಯುನಿಕೇಷನ್ ಲಿಮಿಟೆಡ್ ಆಗಿದೆ. ಭಾರತದಲ್ಲಿದಂತೆ ಪಾಕಿಸ್ತಾನದಲ್ಲಿಯೂ ಮೊಬೈಲ್ ರೀಚಾರ್ಜ್‌ನ್ನು ಆನ್‌ಲೈನ್ ಪ್ಲಾಟ್‌ಫಾರಂ ಅಥವಾ ಮೊಬೈಲ್ ಆಪ್‌ಗಳಿಂದ ಮಾಡಬಹುದಾಗಿದೆ. ಆನ್‌ಲೈನ್ ರೀಚಾರ್ಜ್ ಮಾಡುವಾಗ ಗ್ರಾಹಕರ ಮೊಬೈಲ್ ಸಂಖ್ಯೆ, ಮೊತ್ತ, ಪೇಮೆಂಟ್ ವಿಧಾನ (ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್, ಪೇಪಲ್) ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ.
ರೀಚಾರ್ಜ್ ಸೌಲಭ್ಯವನ್ನು ಒದಗಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅಪ್ಲಿಕೇಶನ್‌ಗಳು ಹೀಗಿವೆ. MobileRecharge, Ding, doctorSIM, BOSS Revolution, TelephonePakistan, ಮತ್ತು Recharge.com ಆಗಿದೆ. ಈ ಪ್ಲಾಟ್‌ಫಾರಂಗಳು ಪಾಕಿಸ್ತಾನಿಯರಿಗೆ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತವೆ.
ಭಾರತದ ನಂಬರ್ 1 ಕಂಪನಿ ಯಾವುದು?
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ 42 ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದೆ. ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್ 4ನೇ ಸ್ಥಾನದಲ್ಲಿದೆ. ಜನವರಿಯಲ್ಲಿ ಬಿಎಸ್‌ಎನ್‌ಎಲ್ 1.5 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಬಿಎಸ್‌ಎನ್ಎಲ್ ಬಳಿಕ ವೊಡಾಫೋನ್ ಐಡಿಯಾ ಸಹ ಬಳಕೆದಾರರನ್ನು ಕಳೆದುಕೊಂಡ 2ನೇ ಅತಿದೊಡ್ಡ ಕಂಪನಿಯಾಗಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಹೈ ಅಲರ್ಟ್,ಪೆಹಲ್ಗಾಂ ರೀತಿಯಲ್ಲಿ ದಾಳಿಗೆ ಸಂಚು, ಕಾಶ್ಮೀರದ 48 ಪ್ರವಾಸಿ ತಾಣ ಬಂದ್
2024ರ ಜುಲೈನಲ್ಲಿ ಬೆಲೆ ಏರಿಕೆಯಿಂದಾಗಿ ಜನರು ಬಿಎಸ್‌ಎನ್‌ಎಲ್ ನತ್ತ ಮುಖ ಮಾಡಿದ್ದರು. ಈ ವೇಳೆ ಬಿಎಸ್‌ಎನ್‌ಎಲ್ ಸಹ ತನ್ನ ನೆಟ್‌ವರ್ಕ್‌ಗೆ ಬರೋ ಗ್ರಾಹಕರಿಗಾಗಿ ಹೊಸ ಆಫರ್ ನೀಡಿತ್ತು. ಆದ್ರೆ ನೆಟ್‌ವರ್ಕ್ ಸಮಸ್ಯೆಯಿಂದ ಬಿಎಸ್‌ಎನ್‌ಎಲ್ ಬಳಕೆದಾರರು ಖಾಸಗಿ ಟೆಲಿಕಾಂ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ.
ಬಿಎಸ್‌ಎನ್‌ಎಲ್‌ನಿಂದ 4G/5G ಸೇವೆ
ಜುಲೈ ಅಂತ್ಯದ ವೇಳೆಗೆ ಬಿಎಸ್‌ಎನ್‌ಎಲ್ 1 ಲಕ್ಷ 4G ಮೊಬೈಲ್ ಟವರ್ ಅಳವಡಿಕೆ ಮಾಡಲಿದೆ. ನಂತರ 4G ಯಿಂದ 5Gಗೆ ಬದಲಾವಣೆ ಮಾಡಲಾಗುವುದು ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಮತ್ತೊಂದು ಕ್ರಮ ಜರುಗಿಸಿದ ಭಾರತ, ಪಾಕ್ ರಕ್ಷಣಾ ಸಚಿವರ ಎಕ್ಸ್ ಖಾತೆ ಬ್ಲಾಕ್
