ಪೆಹಲ್ಗಾಂ ದಾಳಿಯ ಒಂದು ವಾರದಲ್ಲಿ ಕಾಶ್ಮೀರದ ಬಹುತೇಕ ಕಡೆ ಹೈ ಅಲರ್ಟ್ ಘೋಷಿಸಲಾಗಿದೆ. ಕಾಶ್ಮೀರದ 87 ಪ್ರವಾಸಿ ತಾಣಗಳ ಪೈಕಿ 48 ತಾಣಗಳ ಮೇಲೆ ದಾಳಿ ಸಾಧ್ಯತೆ ಕಾರಣ ಬಂದ್ ಮಾಡಲಾಗಿದೆ.

ನವದೆಹಲಿ(ಏ.29) ಪೆಹಲ್ಗಾಂಗ ಪ್ರತೀಕಾರಕ್ಕೆ ಭಾರತ ಸಜ್ಜಾಗುತ್ತಿರುವಾಗ ಭಾರತಕ್ಕೆ ಮತ್ತಷ್ಟು ಹಿನ್ನಡೆ ತರಲು ಇದೀಗ ಪೆಹಲ್ಗಾಂ ರೀತಿಯಲ್ಲಿ ದಾಳಿ ನಡೆಸಲು ಪಾಕಿಸ್ತಾನ ಉಗ್ರರು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಸ್ಲೀಪರ್ ಸೆಲ್ ಪಡೆಯನ್ನು ಬಳಸಿಕೊಂಡಿದೆ ಅನ್ನೋ ಸೂಚನೆಯನ್ನು ಭಾರತದ ಗುಪ್ತಚರ ಇಲಾಖೆ ನೀಡಿದೆ. ಪೆಹಲ್ಗಾಂ ರೀತಿಯಲ್ಲಿ ಕಾಶ್ಮೀರದ ಕೆಲ ತಾಣಗಳ ಮೇಲೆ ದಾಳಿಗೆ ಸಂಚು ನಡೆಸಲಾಗಿದೆ. ಇದು ಭಾರತದ ಪ್ರತೀಕಾರವನ್ನು ತಪ್ಪಿಸಲು ಪಾಕಿಸ್ತಾನ ಐಎಸ್ಐ ನಡೆಸಿದ ಪ್ಲಾನ್ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಕಾಶ್ಮೀರದ ಒಟ್ಟು 87 ಪ್ರವಾಸಿ ತಾಣಗಳ ಪೈಕಿ 48 ತಾಣಗಳನ್ನು ಬಂದ್ ಮಾಡಲಾಗಿದೆ.

48 ಪ್ರವಾಸಿ ತಾಣ ಬಂದ್, ಸ್ಲೀಪರ್ ಸೆಲ್ ಸಕ್ರಿಯ
ಪಾಕಿಸ್ತಾನ ಉಗ್ರರು ಕಾಶ್ಮೀರದಲ್ಲಿನ ಉಗ್ರ ಸ್ಲೀಪರ್ ಸೆಲ್ ಜೊತೆ ನಡೆಸಿದ ಟೆಲಿ ಕಮ್ಯೂನಿಷೇಕನ್ ಮಾಹಿತಿಯನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ. ಭಾರತದ ಪ್ರತಿದಾಳಿ ನಡೆಸುವ ಮುನ್ನವೇ ಉಗ್ರ ದಾಳಿಗೆ ಸಂಚು ನಡೆಸಲಾಗಿದೆ. ಈ ಮೂಲಕ ಭಾರತ ಆತಂಕರಿಕ ಸುರಕ್ಷತೆ ಚಿಂತೆ ಹೆಚ್ಚಿಸಲು ಅತೀ ದೊಡ್ಡ ಷಡ್ಯಂತ್ರ ನಡೆದಿರುವ ಕುರಿತು ಸೂಚನೆ ನೀಡಲಾಗಿದೆ. ಪಹಲ್ಗಾಂ ಗಿಂತ ಮುಂಚೆ ನಡೆಸಿದ ಹಲವು ಉಗ್ರರ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಿತ್ತು. ಆದರೆ ಪೆಹಲ್ಗಾಂ ದಾಳಿಯನ್ನು ಭಾರಿ ತಯಾರಿಯೊಂದಿಗೆ ಯಶಸ್ವಿಯಾಗಿ ಉಗ್ರರು ಮಾಡಿದ್ದಾರೆ. ಇದೇ ಮಾದರಿಯಲ್ಲಿ ಸ್ಥಳೀಯ ಉಗ್ರರು, ಸ್ಲೀಪರ್ ಸೆಲ್ ಬಳಸಿಕೊಂಡು ಕಾಶ್ಮೀರದಲ್ಲಿ ದಾಳಿಗೆ ಉಗ್ರರು ಸಜ್ಜಾಗಿದ್ದಾರೆ. 

ಪೆಹಲ್ಗಾಂ ದಾಳಿ: ಜಿಪ್‌ಲೈನ್ ಸವಾರಿ ವಿಡಿಯೋದಲ್ಲಿ ಅನುಮಾನ ಮೂಡಿಸಿದ ಆಪರೇಟರ್ ಘೋಷಣೆ

ಸೇನೆ ಹಾಗೂ ಪ್ರವಾಸಿಗರೇ ಟಾರ್ಗೆಟ್
ಪೆಹಲ್ಗಾಂ ದಾಳಿ ಬಳಿಕ ಇದೀಗ ಇದೇ ಮಾದರಿಯಲ್ಲಿ ದಾಳಿಗೆ ಪ್ಲಾನ್ ಮಾಡಿರುವ ಉಗ್ರರು ಸ್ಥಳೀಯ ಉಗ್ರರು, ಸ್ಲೀಪರ್ ಸೆಲ್ ಹಾಗೂ ಉಗ್ರರಿಗೆ ಬೆಂಬಲ ನೀಡುವವರ ಸಹಾಯ ಪಡೆಯಲು ಪ್ಲಾನ್ ಮಾಡಲಾಗಿದೆ. ಈ ಈ ಮೂಲಕ ಅತೀ ದೊಡ್ಡ ದಾಳಿ ಸಂಘಟಿಸಲು ಸಂಚು ರೂಪಿಸಿದೆ. ಪ್ರಮುಖವಾಗಿ ಉಗ್ರರಿಗೆ ಕಾಶ್ಮೀರಕ್ಕೆ ಆಗಮಿಸುವ ಪ್ರವಾಸಿಗರೇ ಟಾರ್ಗೆಟ್. ಈ ಪೈಕಿ ಹೆಚ್ಚಿನವರು ಮುಸ್ಲಿಮೇತರರು ಅನ್ನೋದು ಉಗ್ರರ ಪ್ಲಾನ್ ಎಂದು ವರದಿಯಾಗಿದೆ. ಜೊತೆಗೆ ಭಾರತೀಯ ಸೇನೆ ಮೇಲೂ ದಾಳಿಗೆ ಸಂಚು ರೂಪಿಸಿರುವುದು ಬಯಲಾಗಿದೆ.

ಪಾಕಿಸ್ತಾನದ ಐಎಸ್ಐ ಪ್ಲಾನ್ ಬಯಲು
ಭಾರತದ ಗುಪ್ತಚರ ಇಲಾಖೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಪಾಕಿಸ್ತಾನದ ಐಎಸ್ಐ ಎಜೆನ್ಸಿ ಭಾರತದಲ್ಲಿ ಬಹುದೊಡ್ಡ ದಾಳಿಗೆ ಪ್ಲಾನ್ ಮಾಡಿದೆ. ಕಾಶ್ಮೀರಕ್ಕೆ ಆಗಮಿಸುವ ಹೊರ ರಾಜ್ಯದ ಕಾರ್ಮಿಕರು, ಪ್ರವಾಸಿಗರು, ಕಾಶ್ಮೀರ ಭದ್ರತಾ ಸಿಬ್ಬಂದಿ ಹಾಗೂ ಅಳಿದು ಉಳಿದಿರುವ ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಿ ದಾಳಿಗೆ ಪಾಕಿಸ್ತಾನದ ಐಎಸ್ಐ ಸಂಚು ರೂಪಿಸಿದೆ. ಪ್ರಮುಖವಾಗಿ ಶ್ರೀನಗರ ಹಾಗೂ ಗಂದೇರ್ಬಾಲ್ ಜಿಲ್ಲೆಯಲ್ಲಿ ಈ ದಾಳಿಗೆ ಸಂಚು ರೂಪಿಸಲಾಗಿದೆ. ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸಲು ರೈಲುಗಳ ಮೇಲೂ ದಾಳಿಗೆ ಐಎಸ್ಐ ಪ್ಲಾನ್ ಮಾಡಿದೆ ಅನ್ನೋ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

ಚೀನಾಗೆ ಕಾಶ್ಮೀರ ಜಾಗದ ಆಫರ್, ಪ್ರತಿಯಾಗಿ ಭಾರತಕ್ಕೆ ಬ್ರಹ್ಮಪುತ್ರ ನದಿ ನೀರು ನಿಲ್ಲಿಸಲು ಪಾಕ್ ಮನವಿ