Asianet Suvarna News Asianet Suvarna News

ಒಂದಲ್ಲ ಎರಡು ಮಾಸ್ಕ್ ಧರಿಸುವುದು ಒಳಿತು.. ಸಂಶೋಧನೆ ಬಿಚ್ಚಿಟ್ಟ ಅಂಶ

ಕೊರೋನಾ ತಡೆಗೆ ಮಾಸ್ಕ್ ಧರಿಸುವುದು ಅಗತ್ಯ/ ಒಂದಲ್ಲ ಎರಡು ಮಾಸ್ಕ್ ಧರಿಸುವುದು ಉತ್ತಮ/ ಬಟ್ಟೆ ಮಾಸ್ಕ್ ಗಿಂತ ವೈದ್ಯಕೀಯ ಮಾಸ್ಕ್ ಬೆಸ್ಟ್/ ಅಮೆರಿಕದ ಸಂಶೊಧನೆ ಕೊಟ್ಟ  ಉತ್ತರ

Wearing two tightly fitted face masks can prevent corona virus
Author
Bengaluru, First Published Apr 20, 2021, 9:30 PM IST

ನ್ಯೂಯಾರ್ಕ್(ಏ.20)  ಎರಡು ಮಾಸ್ಕಗಳನ್ನು ಬಿಗಿಯಾಗಿ ಧರಿಸಿದರೆ ಕೊರೊನಾ ಹರಡುವಿಕೆ ತಡೆಗಟ್ಟಬಹುದು ಎಂದು ಅಮೆರಿಕಾದ ಸಂಶೋಧನೆಯೊಂದು ಹೇಳಿದೆ. ಎರಡು ಮಾಸ್ಕ್ ಗಳನ್ನು ಬಿಗಿಯಾಗಿ ಧರಿಸುವುದರಿಂದ ಕೊರೊನಾ ವೈರಸ್ ಕಣಗಳು ವ್ಯಕ್ತಿಯ ಬಾಯಿ ಹಾಗೂ ಮೂಗು ತಲುಪುವುದಿಲ್ಲ ಎಂಬುದು ಪತ್ತೆಯಾಗಿದೆ.

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್  ಕ್ರಮಗಳನ್ನು ಜಾರಿ ಮಾಡಲಾಗಿದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿವೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ ಧರಿಸದೇ ಓಡಾಡುವವರಿಗೆ ರಾಜ್ಯ ಸರ್ಕಾರಗಳು ದಂಡ ಹಾಕುತ್ತಿವೆ. ಇಷ್ಟಾದರೂ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಈ ಎಲ್ಲದರ ಮಧ್ಯೆ ಎರಡು ಮಾಸ್ಕಗಳನ್ನು ಬಿಗಿಯಾಗಿ ಧರಿಸಿದರೇ ಕೊರೊನ ಅಪಾಯದಿಂದ ಪಾರಾಗಬಹುದು ಎಂಬ ವರದಿಯೊಂದು ಬಂದಿದೆ.

ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸೂತ್ರ

ಅಮೆರಿಕಾದಲ್ಲಿ ನಡೆದ ಸಂಶೋಧನೆಯೊಂದರಲ್ಲಿ ಈ ಅಂಶ ಬಯಲಾಗಿದ್ದು ಎರಡು ಮಾಸ್ಕ್ ಬಿಗಿಯಾಗಿ ಧರಿಸುವುದರಿಂದ ಕೊರೊನಾ ವೈರಸ್ ಕಣಗಳು ವ್ಯಕ್ತಿಯ ಬಾಯಿ ಹಾಗೂ ಮೂಗು ತಲುಪುವುದಿಲ್ಲ ಎಂಬುದು ಪತ್ತೆಯಾಗಿದೆ. ಜಾಮಾ ಇಂಟರ್ನಲ್ ಮೆಡಿಸಿನ್ ಜರ್ನಲ್ ಲ್ಲಿ ಪ್ರಕಟವಾದ ಸಂಶೋಧನಾತ್ಮಕ ಲೇಖನದಲ್ಲಿ ಬಿಗಿಯಾಗಿ ಮಾಸ್ಕ್ ಧರಿಸಿದರೆ ಮಾತ್ರ ಲಾಭವಿದೆ ಎಂಬುದನ್ನು ತಿಳಿಸಲಾಗಿದೆ.

ಆಸ್ಪತ್ರೆಗಳಲ್ಲಿ ಬಳಸುವ ಮಾಸ್ಕ್ ಗಳು ಅವುಗಳ ಕ್ವಾಲಿಟಿ ಆಧಾರದ ಮೇಲೆ ಎಷ್ಟು ಪರಿಣಾಮಕಾರಿಯಾಗಿರುತ್ತವೆ ಎಂದು ಹೇಳಬಹುದು. ಆದರೆ ನಮ್ಮ ಮುಖದ ಮೇಲೆ ಅವು ಸರಿಯಾಗಿ ನಿಲ್ಲವುದಿಲ್ಲ ಎಂದು ನಾರ್ತ್ ಕ್ಯಾರೊಲಿನಾ ವಿಶ್ವವಿದ್ಯಾಲಯದ ಅಸೋಸಿಯೆಟ್ ಪ್ರೋಫೆಸರ್ ಎಮಿಲಿ ಸಿಕಬರ್ಟ್ ಹೇಳಿದ್ದಾರೆ.

ಈ ವಿಷಯವಾಗಿ ಆಧ್ಯಯನ ನಡೆಸಿದ ಸಂಶೋಧಕಿ ವಿವಿಧ ರೀತಿ ಮಾಸ್ಕ್ ಗಳನ್ನು ಪರೀಶೀಲಿಸಿದ್ದಾರೆ. ವಾತಾವರಣದಲ್ಲಿರುವ ಕಣಗಳನ್ನು ಯಾವ ಮಾಸ್ಕ್ ಹೆಚ್ಚು ಪರಿಣಾಮಕಾರಿಯಾಗಿ ತಡೆಯಬಲ್ಲದು ಎಂಬುದನ್ನು ಪರೀಕ್ಷಿಸಿದ್ದು ಸಾಮಾನ್ಯ ಮನುಷ್ಯನೊಬ್ಬ ದಿನನಿತ್ಯ ಮಾಡುವ ಚಟುವಟಿಕೆಗಳನ್ನು ಕೂಡ ಇದರಲ್ಲಿ ಪರಿಗಣಿಸಲಾಗಿದೆ. ಸಂಶೋಧನೆಯ ಪ್ರಕಾರ ಪ್ರತಿಯೊಬ್ಬರ ಮುಖದ ಆಕಾರ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಎಲ್ಲರು ಒಂದೇ ಬಗೆಯ ಮಾಸ್ಕ್ ಧರಿಸಿದರೂ ಅದು ವ್ಯಕ್ತಿಯ ಮುಖದ ಆಕಾರಕ್ಕೆ ತಕ್ಕಂತೆ ಅದರ ಪರಿಣಾಮ ಹೆಚ್ಚು ಅಥವಾ ಕಡಿಮೆಯಾಗಬಹುದು. ಸಾಮಾನ್ಯ ಮಾಸ್ಕ್ ಶೇ. 40 ರಿಂದ 60 ರಷ್ಟು ಕೊರೊನಾ ವೈರಸ್ ಕಣಗಳನ್ನು ತಡೆಯುವಲ್ಲಿ ಯಶಸ್ವಿಯಾಗುತ್ತದೆ. ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಕೇವಲ ಶೇ. 40 ರಷ್ಟು ಮಾತ್ರ ಪ್ರಯೋಜನಕಾರಿ. 

ವೈದ್ಯಕೀಯ ಮಾಸ್ಕ್ ಗಳ ಮೇಲೆ ಬಟ್ಟೆಯ ಮಾಸ್ಕಗಳನ್ನು ಧರಿಸಿದಾಗ ಅದು ಬಿಗಿಯಾಗಿ ಮುಖವನ್ನು ಆವರಿಸುತ್ತದೆ. ಅಲ್ಲದೇ ಸಂಪೂರ್ಣವಾಗಿ ಮೂಗು ಮತ್ತು ಬಾಯಿಯನ್ನು ಮುಚ್ಚುತ್ತದೆ.  ಬಟ್ಟೆಯ ಮಾಸ್ಕ್ ಗಳ ಮೇಲೆ ವೈದ್ಯಕೀಯ ಮಾಸ್ಕಗಳನ್ನು ಧರಿಸಿದಾಗ ಕೂಡ ಅದು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿದೆ. ಆದರೆ ಎರಡು ಮಾಸ್ಕಗಳನ್ನು ಬಿಗಿಯಾಗಿ ಹಾಕದಿದ್ದರೆ ಯಾವುದೇ ಪ್ರಯೋಜನವಿಲ್ಲ. ಅಂಕಿ ಅಂಶಗಳ ಪ್ರಕಾರ ನಾವು ಮತ್ತು ನಮ್ಮ ಸುತ್ತಮುತ್ತ ಇರುವ ವ್ಯಕ್ತಿ ಇಬ್ಬರೂ ಬಿಗಿಯಾಗಿ ಮಾಸ್ಕ್ ಧರಿಸಿದರೇ ಮಾತ್ರ ಕೊರೊನಾ ಸೋಂಕು ಹರಡಂತೆ ತಡೆಗಟ್ಟಬಹುದು ಎಂದು ಸಂಶೋಧಕಿ ಸಿಕಬರ್ಟ್ ಹೇಳಿದ್ದಾರೆ.

ಯುನಿವರ್ಸಿಟಿ ಆಫ್ ನಾರ್ಥ್ ಕ್ಯಾಲಿಫೋರ್ನಿಯಾ ಈ ಸಂಶೋಧನೆಯನ್ನು ಮುಂದಿಟ್ಟಿದೆ.  ಸರಳವಾಗಿ ಹೇಳಬೇಕು ಎಂದರೆ ನೀವು ಧರಿಸುವ ಮಾಸ್ಕ್ ಮುಖಕ್ಕೆ ಫಿಟ್ ಆಗಿರಬೇಕು. fitted filtration efficiency ಮಾಸ್ಕ್ ಗಳಿಗೆ ಮೊದಲ ಆದ್ಯತೆ ನೀಡಬೇಕು .  ಬಟ್ಟೆ ಮಾಸ್ಕ್ ಗಳಿಗಿಂತ ವೈದ್ಯಕೀಯ ಮಾಸ್ಕ್ ಗಳು ಉತ್ತಮ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು 

 

Follow Us:
Download App:
  • android
  • ios