ಇಟಲಿ[ಅ.12]: ಲಘು ವಿಮಾನಗಳು ಅಪಘಾತಕ್ಕೀಡಾದರೆ ನೆಲಕ್ಕೆ ಬಿದ್ದು ಅಪ್ಪಚ್ಚಿಯಾಗುವುದು ಗ್ಯಾರೆಂಟಿ. ಆದರೆ, ಇಟಲಿಯ ಆಲ್ಫ್ಸ್‌ ಪರ್ವತ ಶ್ರೇಣಿಯಲ್ಲಿ ಹಾರಾಟ ನಡೆಸುತ್ತಿದ್ದ ಲಘು ವಿಮಾನವೊಂದು ಸ್ಕೈ ಲಿಫ್ಟ್‌ ಕೇಬಲ್ಸ್‌ಗೆ ಡಿಕ್ಕಿಗಾಗಿ ತಲೆಕೆಳಗಾಗಿ ನೇತು ಬಿದ್ದಿದೆ.

ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಪೈಲಟ್‌ ಹಾಗೂ ಇನ್ನೊಬ್ಬ ಪ್ರಯಾಣಿಕನನ್ನು ಹರಸಾಹಸ ಪಟ್ಟು ಹೊರತೆಗೆಯಲಾಗಿದೆ.

ಇವೆಲ್ಲಕ್ಕಿಂತಲೂ ವಿಮಾನ ಒಂಟಿ ಕೇಬಲ್‌ ಮೇಲೆ ತಲೆಕೆಳಗಾಗಿ ನೇತು ಬಿದ್ದಿದ್ದು ಹೇಗೆ ಎಂಬುದೇ ಎಲ್ಲರ ಅಚ್ಚರಿಗೆ ಕಾರಣವಾಗಿದೆ.