ಟೇಕಾಫ್‌ಗೂ ಮುನ್ನ ರಭಸವಾಗಿ ಬೀಸಿದ ಗಾಳಿ ಜೊತೆಗೆ ಹಾರಿದ ಕೆಲಸಗಾರ ಪೈಲಟ್‌ ಚಾಣಾಕ್ಷತನದಿಂದ ತಪ್ಪಿದ ಅನಾಹುತ

ಚಿಲಿ: ಪ್ಯಾರಾಗ್ಲೈಡಿಂಗ್‌ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾಗ ವೇಗವಾಗಿ ಬೀಸಿ ಬಂದ ಗಾಳಿಯಿಂದಾಗಿ ಗ್ಲೈಡರ್‌ ಜೊತೆಗೆ ಕೆಳಗೆ ನಿಂತಿದ್ದ ಸಹಾಯಕನೂ ಮೇಲೆ ಹಾರಿದ ಘಟನೆ ಚಿಲಿಯ ಕಾರ್ಡಿಲ್ಲೆರಾ ಪ್ರಾಂತ್ಯದ ಪುಯೆಂಟೊ ಆಲ್ಟೊದ ಲಾಸ್ ವಿಜ್ಕಾಚಾಸ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ, ಪ್ಯಾರಾಗ್ಲೈಡಿಂಗ್ ಇನ್ಸ್ಟ್ರಕ್ಟರ್‌ ಹಾಗೂ ಒಬ್ಬ ಪ್ಯಾರಾಗ್ಲೈಡರ್‌ನ್ನು ಪ್ಯಾರಾಚೂಟ್‌ಗೆ ಕಟ್ಟಿರುವುದನ್ನು ಕಾಣಬಹುದು. ಇವರಿಗೆ ಅಗತ್ಯವಾದ ರಕ್ಷಣಾ ಉಪಕರಣಗಳನ್ನು ಅಳವಡಿಸಲಾಗಿತ್ತು.

ಇವರು ಮೇಲೆ ಹಾರುವುದಕ್ಕೆ ಸಿದ್ಧತೆ ನಡೆಯುತ್ತಿತ್ತಷ್ಟೇ. ಇನ್ನು ಇವರು ಮೇಲೆ ಏರಲು ಸಹಾಯ ಮಾಡುತ್ತಿದ್ದ ಸಹಾಯಕ ಯಾವುದೇ ರಕ್ಷಣಾತ್ಮಕ ಗೇರ್ ಅನ್ನು ಧರಿಸಿರಲಿಲ್ಲ. ಹಾಗೂ ಮೇಲೆರುವ ಪ್ಯಾರಾಗ್ಲೈಡ್‌ಗೆ ಆತನನ್ನು ಕಟ್ಟಿಕೊಂಡಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ರಭಸವಾಗಿ ಬೀಸಿ ಬಂದ ಗಾಳಿಯಿಂದಾಗಿ ಪ್ಯಾರಾಗ್ಲೈಡರ್‌ಗಳ ಜೊತೆ ಜೊತೆಗೆ ಆತನೂ ಮೇಲೆ ಹಾರುವಂತಾಗಿದೆ.

ಪ್ಯಾರಾಗ್ಲೈಡರ್ ಟೇಕಾಫ್ ಆಗುತ್ತಿದ್ದಂತೆ, ಪ್ಯಾರಾಗ್ಲೈಡರ್‌ಗಳು ಹೆಚ್ಚು ಹೆಚ್ಚು ಎತ್ತರಕ್ಕೆ ಏರುತ್ತಿದ್ದಂತೆ ಜೊತೆಗೆ ಆಕಸ್ಮಿಕವಾಗಿ ಮೇಲೇರಿದ ಕೆಲಸಗಾರ ಅವರ ಮುಂಭಾಗದಲ್ಲಿ ನೇತಾಡುವುದು ಕಾಣಿಸುತ್ತಿದೆ. ಈ ವೇಳೆ ಪ್ಯಾರಾಗ್ಲೈಡಿಂಗ್‌ ಫೈಲಟ್‌ ಕೆಲಸಗಾರನೋರ್ವ ಮೇಲೆ ನೇತಾಡುತ್ತಿರುವುದನ್ನು ಗುರುತಿಸಿದ್ದಾನೆ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಿ ಸಣ್ಣದಾದ ಬೆಟ್ಟದ ಮೇಲೆ ಹಾರುವ ಮೂಲಕ ಕೆಲಸಗಾರ ಸುರಕ್ಷಿತವಾಗಿ ಕೆಳಗೆ ಧುಮುಕುವಂತೆ ಮಾಡುತ್ತಾನೆ. ನಂತರ ಪೈಲಟ್ ಪ್ಯಾರಾಗ್ಲೈಡಿಂಗ್‌ ಗಾಳಿಯಲ್ಲಿ ಎತ್ತರದಲ್ಲಿ ಹಾರುವಂತೆ ಮಾಡುತ್ತಾನೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಕೆಲಸಗಾರನಿಗೆ ಯಾವುದೇ ಹಾನಿಯಾಗಿಲ್ಲ.

Parasailing Rope Cuts Off: ತುಂಡಾದ ರೋಪ್‌... ಸಮುದ್ರಕ್ಕೆ ಬಿದ್ದ ಇಬ್ಬರು ಮಹಿಳೆಯರು

ಈ ಘಟನೆಯನ್ನು ಚಿಲಿಯ ಏರ್ ಟ್ರಾವೆಲ್ ರೆಗ್ಯುಲೇಟರ್, ಸಿವಿಲ್ ಏರೋನಾಟಿಕ್ಸ್ ಜನರಲ್ ಡೈರೆಕ್ಟರೇಟ್ (DGAC)ಗೆ ವರದಿ ಮಾಡಲಾಗಿದ್ದು, ಅವರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವೀಡಿಯೊಗಳನ್ನು ಆಧರಿಸಿ, ಪುಯೆಂಟೆ ಆಲ್ಟೊದ ಕಮ್ಯೂನ್‌ನಲ್ಲಿರುವ ಲಾಸ್ ವಿಜ್‌ಕಾಚಾಸ್ ಗ್ರಾಮದಲ್ಲಿ ನಡೆದ ಪ್ಯಾರಾಗ್ಲೈಡರ್‌ಗೆ ಸಂಬಂಧಿಸಿದ ಘಟನೆಯ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು DGACಯ ಅಧಿಕಾರಿಯೊಬ್ಬರು ಡೈಲಿ ಮೇಲ್‌ಗೆ ತಿಳಿಸಿದ್ದಾರೆ.

ಅಯ್ಯೋ ಒಮ್ಮೆ ಕೆಳಗಿಳ್ಸಿ... ಪ್ಯಾರಾಗ್ಲೈಡಿಂಗ್ ಮಾಡಲು ಹೋಗಿ ಏನಾಯ್ತು ನೋಡಿ

ಕೆಲದಿನಗಳ ಹಿಂದೆ ಪ್ಯಾರಾಗ್ಲೈಡಿಂಗ್‌ ಸಾಹಸ ಮಾಡಲು ಹೋದ ಮಹಿಳೆ ಭಯಗೊಂಡು ಬೊಬ್ಬೆ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪ್ಯಾರಾಗ್ಲೈಡಿಂಗ್ ಸಾಹಸ ಪ್ರತಿಯೊಬ್ಬರಿಗೂ ಒಗ್ಗುವಂತದ್ದಲ್ಲ. ಮೊದಲ ಬಾರಿ ಪ್ಯಾರಾಗ್ಲೈಡಿಂಗ್‌ ಮಾಡಲು ಹೋಗಿ ಆತಂಕಕ್ಕೊಳಗಾದ ಪ್ಯಾರಾಗ್ಲೈಡರ್‌ಗಳು ಕಿರುಚುತ್ತಾ ತಮ್ಮ ಮಾರ್ಗದರ್ಶಕರಿಗೆ (ಲ್ಯಾಂಡ್ ಕರ ದೇ) ಒಮ್ಮೆ ಕೆಳಗೆ ಇಳಿಸಿ ಎಂದು ಮನವಿ ಮಾಡುವ ಹಲವಾರು ವೀಡಿಯೊಗಳು ಈಗಾಗಲೇ ವೈರಲ್‌ ಆಗಿದ್ದು, ಈ ಸಾಹಸ ಧೈರ್ಯಶಾಲಿಗಳಿಗೆ ಮಾತ್ರ ಎಂಬುದನ್ನು ಸಾಬೀತುಪಡಿಸಿದೆ. 

ಮಹಿಳೆಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡುವಾಗ ಹೀಗೆ ಭಯಗೊಂಡು ಬೊಬ್ಬೆ ಹಾಕಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಪ್ಯಾರಾಗ್ಲೈಡಿಂಗ್ ಮಾಡಲು ಹೊರಟ ಈ ಅಪರಿಚಿತ ಮಹಿಳೆ ಸಂಪೂರ್ಣ ಭಯಗೊಂಡಿದ್ದಳು. ಆಕೆಯ ಭಯ ನಿವಾರಿಸಲು ಪ್ಯಾರಾಗ್ಲೈಡಿಂಗ್‌ ಟ್ರೈನರ್‌ ಆಕೆಯೊಂದಿಗೆ ಮಾತನಾಡುತ್ತಲೇ ಇದ್ದ. ಆದರೂ ಅದ್ಯಾವುದು ಪರಿಣಾಮ ಬೀರಿಲ್ಲ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಎಂವಿ ರಾವ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, 2,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಮಹಿಳೆ ಭಯಭೀತರಾಗಿರುವಂತೆ ತೋರುತ್ತಿದೆ ಮತ್ತು ಪ್ಯಾರಾಗ್ಲೈಡಿಂಗ್‌ ಟ್ರೈನರ್‌ ಜೊತೆ ಆಕೆ, (ಭಯ್ಯಾ, ಮುಜೆ ಬೋಹೋತ್ ಡರ್ ಲಾಗ್ ರಹಾ ಹೈ) ಅಣ್ಣ ನನಗೆ ತುಂಬಾ ಭಯವಾಗುತ್ತಿದೆ ಎಂದು ಹೇಳುತ್ತಾಳೆ. ಆತಂಕ, ಭಯದಿಂದಾಗಿ ಪ್ಯಾರಾಗ್ಲೈಡಿಂಗ್‌ನ ಮಜವನ್ನು ಅನುಭವಿಸಲು ಆಕೆಗೆ ಸಾಧ್ಯವಾಗಿಲ್ಲ. ಆದರೆ ಟ್ರೈನರ್‌ ಆಕೆಯ ಭಯವನ್ನು ಹೊಗಲಾಡಿಸಲು ಯತ್ನಿಸುತ್ತಲೇ ಇದ್ದಾನೆ.