Bhatkal: 50 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೆಸ್ತಾ
ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೆಸ್ತಾ 50 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಲಂಚ ಪಡೆಯುವಾಗ ತಮ್ಮ ಕಚೇರಿಯಲ್ಲಿಯೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭಟ್ಕಳ ಪುರಸಭೆಯಲ್ಲಿ ಬೀದಿದೀಪ, ರಸ್ತೆ ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಭಟ್ಕಳ (ನ.15): ಉತ್ತರ ಕನ್ನಡದ ಪ್ರಮುಖ ತಾಲೂಕಿನಲ್ಲಿ ಒಂದಾಗಿರುವ ಭಟ್ಕಳದ ಪುರಸಭೆ ವ್ಯಾಪ್ತಿಯಲ್ಲಿ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿರುವ ನಡುವೆ, ಪುರಸಭೆಯ ಮುಖ್ಯಾಧಿಕಾರಿ ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಬೀದಿದೀಪಗಳು, ರಸ್ತೆಗಳು ಹಾಗೂ ಒಳಚರಂಡಿ ವ್ಯವಸ್ಥೆಗಳು ದಿನದಿಂದ ದಿನಕ್ಕೆ ಅತ್ಯಂತ ಕೆಟ್ಟ ಪರಿಸ್ಥಿತಿಗೆ ಇಳಿಯುತ್ತಿದೆ. ಹೀಗಿರುವಾಗಲೇ ಪುರಸಭೆಯ ಮುಖ್ಯಾಧಿಕಾರಿಯ ಲಂಚಾವತಾರ ಬಯಲಾಗಿದೆ. 50 ಸಾವಿರ ಲಂಚ ಪಡೆಯುವಾಗಲೇ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೆಸ್ತಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 50 ಸಾವಿರ ಲಂಚ ಪಡೆಯುವಾಗಲೇ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಕೆಲವು ತಿಂಗಳುಗಳಿಂದ ನೀಲಕಂಠ ಮೆಸ್ತಾ ಕೆಲಸ ಮಾಡುತ್ತಿದ್ದರು. ಭಟ್ಕಳದ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಬಿರುಸಾಗಿ ಸಾಗುತ್ತಿದೆ. ಈ ಒಳಚರಂಡಿ ಕಾಮಗಾರಿಗೆ 50 ಸಾವಿರ ರೂ. ಲಂಚ ಪಡೆಯುವಾಗ ಪುರಸಭೆಯ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ. ತಮ್ಮ ಕಚೇರಿಯಲ್ಲಿ ಲಂಚ ಪಡೆಯುವಾಗ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕಾರವಾರ ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ರ ನೇತೃತ್ವದಲ್ಲಿ ನಡೆದ ದಾಳಿ ನಡೆದಿದೆ.
ಪರಸಂಗದ ಗೆಂಡೆತಿಮ್ಮ ಸಿನಿಮಾದ 'ಮರಕಣಿ' ರೀಟಾ ಅಂಚನ್ ನಿಧನ
ಭಟ್ಕಳದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಆಗುತ್ತಿರುವ ಕೆಲಸಗಳು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಒಳಚರಂಡಿಗಾಗಿ ರಸ್ತೆಗಳನ್ನು ಗುಂಡಿ ತೋಡಿದರೆ ಅದನ್ನು ಡಾಂಬರೀಕರಣ ಮಾಡುವ ಕೆಲಸಗಳು ಆಗುತ್ತಿಲ್ಲ. ನಾಗಪ್ಪ ನಾಯ್ಕ್ ರೋಡ್‌ನಲ್ಲಿರುವ ಕೃಷಿ ಆಫೀಸ್ ಎದುರುಗಡೆ ಹಲವು ವರ್ಷಗಳಿಂದಲೂ ನೀರು ರಸ್ತೆಯ ಮೇಲೆ ಹರಿಯುತ್ತಿದ್ದರೆ, ಅದಕ್ಕೊಂದು ಸೂಕ್ತ ಚಳಚರಂಡಿ ವ್ಯವಸ್ಥೆ ಕಲ್ಪಿಸುವ ಕೆಲಸ ಪುರಸಭೆಯಿಂದ ಆಗುತ್ತಿಲ್ಲ. ಬೀದಿದೀಪಗಳಿಗೆ ಕರೆಂಟ್ ಸಂಪರ್ಕವಿದ್ದರೂ, ಎಲ್‌ಇಡಿ ಬಲ್ಬ್‌ಗಳೇ ಉರಿಯುತ್ತಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಹೆಚ್ಚುವರಿ ಬಲ್ಬ್ ಅಳವಡಿಕೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ. ಸಮಸ್ಯೆಗಳ ಆಗರವೇ ಆಗಿರುವ ಭಟ್ಕಳದ ಪುರಸಭೆಯಲ್ಲಿ ಲಂಚವೇ ಹೆಚ್ಚು ಮಾತನಾಡುತ್ತದೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ಪುರಸಭೆಯ ಮುಖ್ಯಾಧಿಕಾರಿಯೇ ಈಗ ರೆಡ್‌ಹ್ಯಾಂಡ್ ಆಗಿ ಲಂಚ ಪಡೆಯುವಾಗ ಸಿಕ್ಕಿಬಿದಿದ್ದಾರೆ.
ಇದು ಬೆಂಗಳೂರಿನ 'ಬಿಲಿಯನೇರ್ ಸ್ಟ್ರೀಟ್', 67.5 ಕೋಟಿಗೆ ಸೇಲ್ ಆಗಿದೆ ಇಲ್ಲಿನ ಒಂದು ಸೈಟ್!