ಟ್ರಂಪ್ ಗೆಲುವಿನ ಬೆನ್ನಲ್ಲೇ ಗರ್ಭನಿರೋಧಕ ಉತ್ಫನ್ನಗಳ ಮಾರಾಟದಲ್ಲಿ ಭಾರೀ ಏರಿಕೆ
ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣೆಯ ಗೆಲುವಿನ ನಂತರ, ಅಮೆರಿಕದಲ್ಲಿ ಗರ್ಭನಿರೋಧಕ ಔಷಧಿಗಳ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅಲ್ಲದೆ, ಟ್ರಂಪ್ ಗೆಲುವಿನಿಂದಾಗಿ ಮಹಿಳೆಯರು '4B' ಚಳುವಳಿಯನ್ನು ಆರಂಭಿಸಿದ್ದಾರೆ.
ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಬೆನ್ನಲ್ಲೇ ಅಮೆರಿಕಾದ ಗರ್ಭನಿರೋಧಕ ಔಷಧಗಳ ಮಾರಾಟ ಹೆಚ್ಚಳವಾಗಿದೆ. ಅಮೆರಿಕದ ಮಹಿಳೆಯರೇ ಗರ್ಭ ನಿರೋಧಕ ಔಷಧಿಗಳ ಖರೀದಿಗೆ ಮುಂದಾಗಿರುವ ಬಗ್ಗೆ ವರದಿಯಾಗಿದೆ. ಟ್ರಂಪ್ ಗೆಲುವಿನ ಸುದ್ದಿ ಹೊರಬೀಳುತ್ತಲೇ ಔಷಧ ಅಂಗಡಿಗಳಲ್ಲಿ ಗರ್ಭ ನಿರೋಧಕ ಔಷಧಗಳು ಬಿಸಿ ಕೇಕ್‌ನಂತೆ ಮಾರಾಟವಾಗುತ್ತಿದೆ ಎಂದು ಮಾರಾಟಗಾರರು ಹೇಳಿದ್ದಾರೆ.
ಟ್ರಂಪ್ ಅವರು ಈ ಹಿಂದೆ ಗರ್ಭಪಾತ ವಿರೋಧಿ ನಿಲುವು ಹೊಂದಿದ್ದರು. ಈಗ ಮತ್ತೆ ಅಧಿಕಾರಕ್ಕೆ ಬಂದಾಗ ಎಲ್ಲಿ ಗರ್ಭಾಪಾತವನ್ನು ನಿಷೇಧ ಮಾಡುವರೋ ಎಂಬ ದಿಗಿಲಿಂದ ಜನರು ಮಾತ್ರೆ ಹಾಗೂ ಇತರೆ ಔಷಧಗಳನ್ನು ಸಂಗ್ರಹಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಸಮಾರು 600 ಮಾತ್ರೆಗಳ ಆರ್ಡರ್ ಸ್ವೀಕರಿಸುತ್ತಿದ್ದ ಕಂಪನಿಯೊಂದು ಚುನಾವಣೆ ದಿನದಂದು 10,000ಕ್ಕೆ ಗರ್ಭ ನಿರೋಧಕ ಮಾತ್ರೆಗಳ ಆರ್ಡರ್ ಸ್ವೀಕರಿಸಿದೆ ಎಂದು ಹೇಳಿದೆ.
ಟ್ರಂಪ್ ವಿರುದ್ಧ 4ಬಿ ಚಳುವಳಿ
ಟ್ರಂಪ್ ಗೆಲುವು ಪಕ್ಕಾ ಆದ್ಮೇಲೆ ಅಮೆರಿಕಾದಲ್ಲಿ ಹೊಸದೊಂದು ಭಯಾನಕ ಟ್ರೆಂಡ್ ಶುರುವಾಗಿದೆ. ಅಮೆರಿಕಾ ಮಹಿಳೆಯರು ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದ್ಯಾವುದರ ಮಟ್ಟಿಗೆ ಅಂದ್ರೆ ಟ್ರಂಪ್‌ಗೆ ವೋಟ್ ಹಾಕಿದ ಪುರುಷರ ವಿರುದ್ಧ ಅಮೆರಿಕಾ ಮಹಿಳೆಯರು ಸೇಡು ತೀರಿಸಿಕೊಳ್ಳಲು ಶಫತಗೈದಿದ್ದಾರೆ. ಅಮೆರಿಕನ್ ಮಹಿಳೆಯರು ಟ್ರಂಪ್ ವಿರುದ್ಧ 4ಬಿ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಟ್ರಂಪ್ ಗೆಲುವು ಆಗುತ್ತಿದ್ದಂತೆ ಅಮೆರಿಕಾದಲ್ಲಿರುವ ಕೆಲವೊಂದಿಷ್ಟು ಮಹಿಳಾಮಣಿಗಳು ತುಂಬಾನೇ ಬೇಸರಗೊಂಡಿದ್ದಾರೆ. ಮಹಿಳಾ ವಿರೋಧಿ ಟ್ರಂಪ್ ಗೆದ್ದಿದ್ದಾರೆಂದು ಅವರನ್ನು ಗೆಲ್ಲಿಸಿದ ಪುರುಷರ ವಿರುದ್ಧ ಸೇಡು ತೀರಿಸಿಕೊಳ್ಳು 4ಬಿ ಮೂಮೆಂಟ್ ಆರಂಭಿಸಿದ್ದಾರೆ.
ಪುರುಷರ ಜೊತೆ ಸೆಕ್ಸ್ ಮಾಡದೇ ಇರೋದು, ಅದರೊಂದಿಗೆ ನೋ ರಿಲೇಷನ್‌ಷಿಪ್, ನೋ ಮ್ಯಾರೇಜ್ ಹಾಗೂ ನೋ ಗಿವಿಂಗ್ ಬರ್ತ್ ಎನ್ನುವುದು 4ಬಿ ಮೂಮೆಂಟ್ ಪ್ರತಿಭಟನೆಯ ಭಾಗವಾಗಿದೆ.
ಇದನ್ನೂ ಓದಿ: ಟ್ರಂಪ್ ವಿರುದ್ಧ 'ಮಾರಿ’ಯಾದ ಅಮೆರಿಕನ್ 'ನಾರಿ’; ಪುರುಷರ ವಿರುದ್ಧ ಪ್ರತೀಕಾರದ ಪ್ರತಿಜ್ಞೆ
ಕಮಲಾ ಸೋಲಿಗೆ ಬೈಡನ್ ವಿರುದ್ಧ ಆಕ್ರೋಶ
ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿದ್ದಕ್ಕೆ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬೈಡೆನ್ ಅವರು ತಮಗೆ ವೃದ್ಧಾಪ್ಯ ಹಾಗೂ ಮರೆಗುಳಿತನದ ಕಾಯಿಲೆ ಕಾಡುತ್ತಿದೆ ಎಂದು ಗೊತ್ತಿದ್ದರೂ ಉಮೇದುವಾರಿಕೆಯನ್ನು ಬಿಟ್ಟುಕೊಡಲಿಲ್ಲ. ಕೊನೆಯವರೆಗೂ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡರು. ಮೊದಲೇ ಉಮೇದುವಾರಿಕೆಯನ್ನು ಕಮಲಾಗೆ ಬಿಟ್ಟಿದ್ದರೆ ಅವರಿಗೆ ಚುನಾವಣೆ ಸಿದ್ಧತೆಗೆ ಸಮಯ ಸಿಗುತ್ತಿತ್ತು. ಹೀಗೆ ಸೋಲಾಗುತ್ತಿರಲಿಲ್ಲ’ ಎಂದು ಡೆಮಾಕ್ರೆಟ್ ನಾಯಕರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮೈಸೂರು ನಂಟಿನ ವ್ಯಕ್ತಿಗೆ ಟ್ರಂಪ್ ಸರ್ಕಾರದಲ್ಲಿ ಹುದ್ದೆ; ಟಿವಿ ನಿರೂಪಕ ಈಗ ಅಮೆರಿಕ ರಕ್ಷಣಾ ಸಚಿವ