ಹಮಾಸ್ ಉಗ್ರರು ನಡೆಸಿದ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಇಸ್ರೇಲ್‌ ನಾಗರಿಕರು ತಾವೂ ಸೇನೆಯ ಜತೆಗೂಡಿ ಯುದ್ಧದಲ್ಲಿ ಧುಮುಕುತ್ತಿದ್ದರೆ ಇತ್ತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu)ಅವರ ಪುತ್ರ ಯೈರ್‌ ಮಾತ್ರ ಅಮೆರಿಕದಲ್ಲಿ ಜಾಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಟೆಲ್‌ ಅವಿವ್‌: ಹಮಾಸ್ ಉಗ್ರರು ನಡೆಸಿದ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಇಸ್ರೇಲ್‌ ನಾಗರಿಕರು ತಾವೂ ಸೇನೆಯ ಜತೆಗೂಡಿ ಯುದ್ಧದಲ್ಲಿ ಧುಮುಕುತ್ತಿದ್ದರೆ ಇತ್ತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu)ಅವರ ಪುತ್ರ ಯೈರ್‌ ಮಾತ್ರ ಅಮೆರಿಕದಲ್ಲಿ ಜಾಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

32 ವರ್ಷದ ಯೈರ್‌ ಅವರು ಅಮೆರಿಕದ ಫ್ಲೋರಿಡಾದ (Florida, USA) ಮಿಯಾಮಿ ಬೀಚ್‌ನಲ್ಲಿರುವ (Miami Beach) ಪೋಟೋವೊಂದು ಇದೀಗ ಭಾರೀ ವೈರಲ್‌ ಆಗಿದ್ದು, ದೇಶವು ಸಂಕಷ್ಟದಲ್ಲಿದ್ದರೆ ಪ್ರಧಾನಿ ಮಗ ಮಾತ್ರ ತಾನು ಸುರಕ್ಷಿತವಾಗಿ ಅಮೆರಿಕದಲ್ಲಿದ್ದಾರೆ ಎಂದು ಹಲವು ಇಸ್ರೇಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಫೋಟೋ ಸತ್ಯಾಸತ್ಯತೆಯ ಬಗ್ಗೆ ನಿಖರವಾದ ಮಾಹಿತಿ ದೊರೆತಿಲ್ಲ. ಇತ್ತೀಚೆಗೆ ಯೈರ್‌ ಅವರು ಯುದ್ಧಕ್ಕೆ ಧುಮುಕಿದ್ದಾರೆ ಎಂಬ ಸುದ್ದಿಯೂ ಭಾರೀ ವೈರಲ್‌ ಆಗಿತ್ತು. ಬಳಿಕ ಅದು ಕೇವಲ ವದಂತಿ ಎಂದು ತಿಳಿದು ಬಂದಿತ್ತು.

ಇದೀಗ ‘ಪ್ರಧಾನಿಯ ಮಗ ಎಲ್ಲಿದ್ದಾರೆ. ನಾವು ಎಲ್ಲವನ್ನೂ ಬಿಟ್ಟು ದೇಶ ರಕ್ಷಣೆಗಾಗಿ ಗಡಿಗೆ ಬಂದು ನಿಂತಿದ್ದೇವೆ. ಹೀಗಿರುವಾಗ ಅವರು ಹೇಗೆ ಅಮೆರಿಕದಲ್ಲಿದ್ದಾರೆ’ ಎಂದು ಜನರು ಪ್ರಶ್ನಿಸಿದ್ದಾರೆ. ನೆತನ್ಯಾಹು ಅವರ ಮೂರನೇ ಪತ್ನಿ ಸಾರಾ (Sara) ಅವರ ಪುತ್ರನಾಗಿರುವ ಯೈರ್‌ ಮುಸ್ಲಿಂ ವಿರೋಧಿ ಹೇಳಿಕೆಗಳ ಮೂಲಕ ಜಾಲತಾಣಗಳಲ್ಲಿ ಆಗಾಗ್ಗೆ ವಿವಾದಕ್ಕೀಡಾಗುತ್ತಿರುತ್ತಾರೆ.

ಹಮಾಸ್‌ಗೆ ಶಸ್ತ್ರಾಸ್ತ್ರ ನೀಡಿದ್ದು ಇರಾನ್‌: ಇಸ್ರೇಲ್‌ ಕಿಡಿ

ಟೆಲ್‌ ಅವಿವ್‌: ಕಳೆದ ಅ.7 ರಂದು ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ಏಕಾಏಕಿ ದಾಳಿ ಮಾಡುವ ಮುನ್ನವೇ ಇರಾನ್‌ ನೇರವಾಗಿ ಹಮಾಸ್‌ ಉಗ್ರರಿಗೆ ಶಸ್ತ್ರಾಸ್ತ್ರ, ಹಣ, ತರಬೇತಿ ಮತ್ತು ತಾಂತ್ರಿಕ ಜ್ಞಾನ ನೀಡುವ ಮೂಲಕ ಸಹಾಯ ಮಾಡಿದೆ ಎಂದು ಇಸ್ರೇಲ್‌ ಆರೋಪಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ರೇಲ್‌ ಸೇನೆಯ (Israeli army)ಉನ್ನತ ಅಧಿಕಾರಿಗಳು ‘ಯುದ್ಧದ ಮೊದಲೇ ಹಮಾಸ್‌ಗೆ ಇರಾನ್‌ ಎಲ್ಲ ರೀತಿಯ ಸಹಾಯ ಮಾಡಿದೆ. ಈಗಲೂ ಇಸ್ರೇಲ್‌ ವಿರುದ್ಧ ಗುಪ್ತಚರ ಮತ್ತು ಆನ್‌ಲೈನ್‌ನಲ್ಲಿ ಪ್ರಚೋದನೆ ನೀಡುವ ಮೂಲಕ ಹಮಾಸ್‌ಗೆ ಇರಾನ್‌ ನೆರವು ಮುಂದುವರೆದಿದೆ’ ಎಂದು ಆರೋಪಿಸಿದರು.

ಇಸ್ರೇಲಿಗಳ ಹಿಡಿದು ತಂದ ಉಗ್ರರಿಗೆ ಮನೆ, 8 ಲಕ್ಷ ಹಣ: ಕುರಾನ್‌ ನಂಬಿದರೆ ನಿಮಗೇನೂ ಮಾಡಲ್ಲ ಎಂದಿದ್ದ ಹಮಾಸ್‌ ಉಗ್ರ!

ಆದರೆ, ಹಮಾಸ್‌ಗೆ ತಾನು ಹಣ, ಶಸ್ತ್ರಾಸ್ತ್ರ ನೀಡಿರುವುದು ನಿಜವಾದರೂ ಇಸ್ರೇಲ್‌ ಮೇಲಿನ ದಾಳಿಯಲ್ಲಿ ತನ್ನ ಪಾತ್ರವನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ ಎನ್ನಲಾಗುತ್ತಿದೆ. ಮೊದಲಿನಿಂದಲೂ ಇಸ್ರೇಲ್‌ ಮತ್ತು ಇರಾನ್ ಬದ್ಧವೈರಿಗಳಾಗಿದ್ದು, ಪ್ಯಾಲೆಸ್ತೀನ್‌ ಮತ್ತು ಇಸ್ರೇಲ್‌ ಯುದ್ಧದಲ್ಲಿ ಇರಾನ್‌, ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದೆ.