* ಡೋನೆಟ್ಸ್‌$್ಕ ವಲಯ ವಶಕ್ಕೆ ರಷ್ಯಾ ಪಡೆಗಳು ಸಜ್ಜು* ಉಕ್ರೇನ್‌ನ ಡೋನ್‌ಬಾಸ್‌ ಬಹುತೇಕ ರಷ್ಯಾದ ತೆಕ್ಕೆಗೆ* 2 ತಿಂಗಳಲ್ಲೇ ಲುಹಾನ್ಸ್‌$್ಕನ ಶೇ.97 ಭಾಗ ರಷ್ಯಾ ಕೈವಶ

ಕೀವ್‌(ಜೂ,09): ಉಕ್ರೇನಿನ ಕೈಗಾರಿಕೆ, ಕಲ್ಲಿದ್ದಲು ಗಣಿಯುಳ್ಳ ಪ್ರಮುಖ ಡೋನ್‌ಬಾಸ್‌ ವಲಯವನ್ನು ಬಹುತೇಕ ರಷ್ಯಾ ವಶಪಡಿಸಿಕೊಂಡಿದೆ. ಡೋನ್‌ಬಾಸ್‌ನ ಲುಹಾನ್ಸ್‌$್ಕ ಪ್ರಾಂತ್ಯದ ಶೇ.97ರಷ್ಟುಭೂಭಾಗ ತನ್ನ ವಶದಲ್ಲಿದೆ ಎಂದು ರಷ್ಯಾದ ಅಧ್ಯಕ್ಷೀಯ ಕಚೇರಿ ಕ್ರೆಮ್ಲಿನ್‌ ಮಂಗಳವಾರ ತಿಳಿಸಿದೆ.

ಲುಹಾನ್ಸ್‌$್ಕ ಬಳಿಕ ಡೋನ್‌ಬಾಸ್‌ ವಲಯದ ಇನ್ನೊಂದು ಪ್ರಾಂತ್ಯವಾದ ಡೋನೆಟ್ಸ್‌$್ಕ ಅನ್ನು ವಶ ಪಡಿಸಿಕೊಳ್ಳಲು ರಷ್ಯಾ ಯೋಧರು ಸಜ್ಜಾಗಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೇಯ್‌ ಶೊಯಿಗು ಹೇಳಿದ್ದಾರೆ.

2 ತಿಂಗಳ ಹಿಂದೆ ಉಕ್ರೇನಿನ ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಳ್ಳಲು ವಿಫಲವಾದ ರಷ್ಯಾ ಸೇನೆಯು ಇಡೀ ಡೋನ್‌ಬಾಸ್‌ ವಲಯವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದೇ ಮುಂದಿನ ಗುರಿಯಾಗಲಿದೆ ಎಂದು ಘೋಷಿಸಿತ್ತು. ಡೋನ್‌ಬಾಸ್‌ ವಲಯದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ನೆಲೆಸಿದ್ದು, ಇವರು 2014ರಿಂದಲೂ ಉಕ್ರೇನಿನ ಸರ್ಕಾರದ ವಿರುದ್ಧವೇ ಇವರು ದಾಳಿ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುಲಭವಾಗಿ ಉಕ್ರೇನಿನ ಪ್ರಮುಖ ವಲಯ ಬಹುತೇಕ ರಷ್ಯಾದ ತೆಕ್ಕೆಗೆ ಬಂದಂತಾಗಿದೆ.

ಈ ಹಿಂದೆ ಖೇರ್ಸನ್‌ ರಷ್ಯಾದ ಕೈವಶವಾಗಿತ್ತು. ಇಲ್ಲಿ ರಷ್ಯಾದ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ರಷ್ಯಾದ ವಶದಲ್ಲಿರುವ ವಲಯಗಳಿಗೆ ಸ್ವತಂತ್ರ್ಯ ದೇಶ ಅಥವಾ ರಷ್ಯಾದೊಂದಿಗೆ ಸೇರಿಕೊಳ್ಳುವ ಆಯ್ಕೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.